Darshan Thoogudeepa: ‘ಡಿ-ಬಾಸ್ ಬಾರ್’ ನೋಡಿ ಅಭಿಮಾನಿಗಳು ಹೇಳ್ತಾ ಇದ್ದಾರೆ ಜೈ ಜೈ....

ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹೀಗೆ ಕರ್ನಾಟಕದಲ್ಲಿ ಯಾವುದೇ ಮೂಲೆಗೆ ಹೋದರೂ, ಡಿ-ಬಾಸ್ ಅವರ ಅಭಿಮಾನಿಗಳು ದರ್ಶನ್ ತೂಗುದೀಪ್ ಅವರನ್ನು ಹೀಗೆ 'ಡಿ-ಬಾಸ್' ಅಂತಾನೇ ಕರೆಯುತ್ತಾರೆ. ಅದರಲ್ಲೂ 'ಡಿ-ಬಾಸ್' ಅನ್ನೋ ಬ್ರಾಂಡ್‌ಗೆ ಲಕ್ಷ ಕೋಟಿ ರೂಪಾಯಿ ಮೌಲ್ಯ ಇದೆ ಅಂತ ವಾದ ಮಾಡುವ ಅಭಿಮಾನಿಗಳು ಕೂಡ ಇದ್ದಾರೆ. ಹೀಗೆ ಎಲ್ಲೆಲ್ಲೂ ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹೆಸರು ರಾರಾಜಿಸುವ ಸಮಯಕ್ಕೇ 'ಡಿ-ಬಾಸ್ ಬಾರ್' ಕೂಡ ಓಪನ್ ಆಗಿಬಿಟ್ಟಿದೆ!

ದರ್ಶನ್ ತೂಗುದೀಪ್ ಅನ್ನೋ ಬ್ರಾಂಡ್ ಕೋಟ್ಯಂತರ ಅಭಿಮಾನಿಗಳು ಸೇರಿ ಕಟ್ಟಿ ಬೆಳೆಸಿದ ಬ್ರಾಂಡ್ ಅಂತಾರೆ ಡಿ-ಬಾಸ್ ಫ್ಯಾನ್ಸ್. ಹಾಗೇ ಎಲ್ಲೇ ಹೋದರೂ ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಎಂಬ ಜೈಕಾರ ಕೂಡ ಜೋರಾಗಿ ಇರುತ್ತದೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರ ಹೆಸರಲ್ಲಿ ಹೋಟೆಲ್, ಟೀ ಅಂಗಡಿ ಸೇರಿದಂತೆ ಹಲವು ಬ್ಯುಸಿನೆಸ್‌ಗಳಿಗೆ ಹೆಸರನ್ನೂ ಇಟ್ಟು ಅಭಿಮಾನಿಗಳು ಮೆರೆಸುತ್ತಿದ್ದಾರೆ. ಈ ಸಮಯದಲ್ಲೇ ಬಾರ್ & ರೆಸ್ಟೋರೆಂಟ್ ಕೂಡ...

Darshan Thoogudeepa Name Board Is Getting Viral In The Form Of DBoss

ಡಿ-ಬಾಸ್ ಬಾರ್ & ರೆಸ್ಟೋರೆಂಟ್...

ಬೆಂಗಳೂರಿನಲ್ಲಿ ಬಾರ್ & ರೆಸ್ಟೋರೆಂಟ್ ಗಲ್ಲಿ ಗಲ್ಲಿಗೆ ಎರಡೆರಡು ಸಿಗುವಂತೆ ಆಗಿದೆ. ಹೀಗೆ ಬೆಂಗಳೂರಿನಲ್ಲಿ ಮದ್ಯ ಅಂದ್ರೆ ಎಣ್ಣೆ ಪ್ರಿಯರ ದಾಹ ನೀಗಿಸಲು ಇಷ್ಟೊಂದು ಬಾರ್‌ಗಳನ್ನ ಓಪನ್ ಮಾಡಲಾಗುತ್ತಿದೆ. ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ, ಕೋಟಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಇದೀಗ ಸಿಕ್ಕಂತಾಗಿದೆ.

ಬಾರ್ & ರೆಸ್ಟೋರೆಂಟ್ ಒಂದಕ್ಕೆ ಅಂದ್ರೆ ಬೆಂಗಳೂರಿನಲ್ಲಿ ಹೊಸದಾಗಿ ಓಪನ್ ಆಗುತ್ತಿರುವ ಬಾರ್ & ರೆಸ್ಟೋರೆಂಟ್ ಒಂದಕ್ಕೆ ಈಗ, ಡಿ-ಬಾಸ್ ಹೆಸರು ಇಡಲಾಗಿದೆ. ಈ ಫೋಟೋ & ವಿಡಿಯೋ ಫುಲ್ ವೈರಲ್ ಆಗುತ್ತಿದ್ದು ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ ನಾವು ಇಲ್ಲೇ ಸೆಲೆಬ್ರೇಷನ್ ಮಾಡೋಣ ಅಂತಾನೂ ಅಭಿಮಾನಿಗಳು ಇದೀಗ ಐಡಿಯಾ ಕೊಡುತ್ತಿದ್ದಾರೆ. ಹೀಗೆ, ಸೋಷಿಯಲ್ ಮೀಡಿಯಾದಲ್ಲಿ ಡಿ-ಬಾಸ್ ಬಾರ್ & ರೆಸ್ಟೋರೆಂಟ್ ಫುಲ್ ವೈರಲ್ ಆಗುತ್ತಿದೆ.

ದರ್ಶನ್ ತೂಗುದೀಪ್ ಅವರ ಬೇಲ್ ಕ್ಯಾನ್ಸಲ್?

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಜೋರಾಗಿದ್ದು, ಬಳ್ಳಾರಿ ಜೈಲಿನಿಂದ ಹೊರ ಬಂದು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಬೆನ್ನು ಮೂಳೆಯಲ್ಲಿ ಸಮಸ್ಯೆ ಇರುವ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಬೆಂಗಳೂರಿನ ಬಹುದೊಡ್ಡ ಖಾಸಗಿ ಆಸ್ಪತ್ರೆಯಲ್ಲಿ ಐಷಾರಾಮಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂತಹ ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಇದೀಗ ಹೊಸ ಟೆನ್ಷನ್ ಶುರುವಾಗಿದ್ದು, ದರ್ಶನ್ ತೂಗುದೀಪ್ ಜಾಮೀನು ಅಂದ್ರೆ ಬೇಲ್ ಕ್ಯಾನ್ಸಲ್ ಆಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆಲ್ಲಾ ಉತ್ತರವನ್ನು ಕಂಡುಕೊಳ್ಳಲು ಇನ್ನೊಂದಿಷ್ಟು ದಿನಗಳ ಕಾಲ ಕಾದು ನೋಡಬೇಕಿದೆ. ಅಲ್ಲಿಯವರೆಗೂ ಟೆನ್ಷನ್ ಮತ್ತಷ್ಟು ಹೆಚ್ಚಾಗುವ ಭಯ ಕೂಡ ಇದೀಗ ಆವರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+