Darshan Thoogudeepa: ದರ್ಶನ್ ತೂಗುದೀಪ್ ವಿರುದ್ಧ ಮತ್ತೊಂದು ಕೇಸ್?

ದರ್ಶನ್ ತೂಗುದೀಪ್ ಅವರು ಒಂದಾದ ನಂತರ ಒಂದು ಸಂಕಷ್ಟಕ್ಕೆ ಸಿಲುಕಿ ಪರದಾಡುವ ಪರಿಸ್ಥಿತಿ ಬಂದಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನರಳುತ್ತಿರುವ ದರ್ಶನ್ ತೂಗುದೀಪ್ ಅವರಿಗೆ ಸಾಲು ಸಾಲು ಸಮಸ್ಯೆ ಎದುರಾಗುತ್ತಿದ್ದು, ಇದೀಗ ದರ್ಶನ್ ತೂಗುದೀಪ್‌ರ ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲಾಗುವ ಮುನ್ಸೂಚನೆ ಸಿಗುತ್ತಿದ. ಹಾಗಾದ್ರೆ ದರ್ಶನ್ ಅವರ ವಿರುದ್ಧ ಕೇಳಿಬಂದಿರುವ ಆ ಗಂಭೀರ ಆರೋಪ ಏನು? ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರದಾಡುವ ಸಮಯದಲ್ಲಿ ಮತ್ತೆ ಯಾವ ಹೊಸ ಕೇಸ್ ಕಾಟ ಶುರುವಾಗಿದೆ? ಬನ್ನಿ ತಿಳಿಯೋಣ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ದರ್ಶನ್ ತೂಗುದೀಪ್‌ಗೆ ಒಂದಾದ ನಂತರ ಒಂದು ಸಂಕಷ್ಟ ಎದುರಾಗುತ್ತಿದೆ. ಹೀಗಿದ್ದಾಗಲೇ, ನಟ ದರ್ಶನ್ ತೂಗುದೀಪ್ ವಿರುದ್ಧ 'ಜಾತಿ ನಿಂದನೆ' ಕೇಸ್ ದಾಖಲಾಗುತ್ತಾ? ಎಂಬ ಭಯ ಅವರ ಅಭಿಮಾನಿಗಳಲ್ಲಿ ಆವರಿಸಿದ್ದು, ದರ್ಶನ್ ಅವರು ಕೆಟ್ಟದಾಗಿ ಬೈಯುವಾಗಲೇ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆಲ್ಲ ಕಾರಣವಾದ್ರು ಏನು ಗೊತ್ತಾ? ದರ್ಶನ್ ತೂಗುದೀಪ್ ವಿರುದ್ಧ ಜಾತಿ ನಿಂದನೆ ಕೇಸ್ ಹಾಕಲು ಕಾರಣ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Darshan Thoogudeepa May See This After Coming From Parappana Agrahara

'ಜಲಗಾರ' ಆಡಿಯೋ ಸಂಕಷ್ಟ?

ನಟ ದರ್ಶನ್ ಬುದ್ಧಿ ಕಲಿಯುವುದಿಲ್ಲ, ಬುದ್ಧಿ ಬರಲ್ಲ ಅಂತಾ ವಿರೋಧಿಗಳು ಹೇಳುತ್ತಿದ್ದಾರೆ. ದರ್ಶನ್ ಸ್ವತಃ ತಮ್ಮ ಕುಟುಂಬದ ಸದಸ್ಯರ ಜೊತೆಗೂ ಚನ್ನಾಗಿರಲಿಲ್ಲ. ಇದೇ ಕಾರಣಕ್ಕೆ ತಮ್ಮ ಹೆಂಡತಿ ಬಗ್ಗೆಯೇ ವಿಕೃತವಾಗಿ ಮಾತನಾಡಿದ್ದ ನಟ ದರ್ಶನ್ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿತ್ತು. ಅದರಲ್ಲೂ ದರ್ಶನ್ 'ಜಲಗಾರ' ಆಡಿಯೋ ಇಂದಿಗೂ ವಿಕೃತ ಮನಸ್ಸುಗಳಿಗೆ ಭಾರಿ ಫೇಮಸ್ ಆಗಿದೆ ಎಂಬ ಆರೋಪಗಳ ಮಧ್ಯೆ ಇದೇ ಆಡಿಯೋ ಸಂಕಷ್ಟ ತಂದಿದೆ.

'ಜಲಗಾರ' ಎಂಬ ಶಬ್ಧ ಬಳಸಿ ಬೈದಿದ್ದ ನಟ ದರ್ಶನ್ ವಿರುದ್ಧ ಇದೀಗ ಜಾತಿ ನಿಂದನೆಯ ಕೇಸ್ ದಾಖಲಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ದರ್ಶನ್ ತೂಗುದೀಪ್ ಬಳಕೆ ಮಾಡಿದ್ದ 'ಜಲಗಾರ' ಎಂಬ ಪದದ ಅರ್ಥ ಏನು ಗೊತ್ತಾ? ಮುಂದೆ ಓದಿ.

ಜಾತಿ ನಿಂದನೆ ಕೇಸ್ ಫಿಕ್ಸ್?

ದರ್ಶನ್ ಈ ಆಡಿಯೋದಲ್ಲಿ ತಮ್ಮ ಹೆಂಡತಿಗೆ ವಿಕೃತವಾಗಿ ಬೈದು, ಬೇರೆಯವರ ಜೊತೆಗೆ ಮಗು ಮಾಡಿಕೊಳ್ಳುತ್ತೆನೆ ಎಂದು ಬೆದರಿಕೆ ಹಾಕಿದ್ದರು ಎಂಬ ಆರೋಪವು ಕೇಳಿಬಂದಿತ್ತು. ಪೊಲೀಸರ ಎದುರಲ್ಲೇ ನಿನಗೆ ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದರು ದರ್ಶನ್ ಅವರು ಎಂದು ಆರೋಪಿಸಲಾಗಿತ್ತು. ಅದರಲ್ಲೂ ಈ ಆಡಿಯೋ ಕೇಳುವಾಗ ಬರುವ 'ಜಲಗಾರ' ಎಂಬ ಪದ ಫೇಮಸ್ ಆಗಿತ್ತು. 'ಜಲಗಾರ' ಎಂದರೆ ಸಫಾಯಿ ಕರ್ಮಚಾರಿಗಳು ಎಂಬ ಅರ್ಥ ಬರುತ್ತದೆ. ಹೀಗಿದ್ದಾಗಲೇ ಸಫಾಯಿ ಕರ್ಮಚಾರಿಗಳ ಜಾತಿ ನಿಂದನೆ ಮಾಡಿದ ಆರೋಪ ಕೂಡ ಇದೀಗ ದರ್ಶನ್ ತೂಗುದೀಪ್ ಅವರ ವಿರುದ್ಧ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+