Darshan Thoogudeepa: ದರ್ಶನ್ ತೂಗುದೀಪ್‌ಗೆ ಅಭಿಮಾನಿಗಳಿಂದಲೇ ಬಂತಾ ಹೊಸ ಸಮಸ್ಯೆ?
ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಅಂತಾ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ದರ್ಶನ್ ತೂಗುದೀಪ್‌ರ ಪರ ಘೋಷಣೆ ಕೂಗುತ್ತಾ, ದರ್ಶನ್ ಅವರು ರಿಲೀಸ್ ಆಗಿ ಜೈಲಿನಿಂದ ಹೊರಗೆ ಬರಲಿ ಅಂತಾ ಕಾಯುತ್ತಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ತೂಗುದೀಪ್ ಅವರಿಗೆ ಇದೀಗ, ಅದೇ ಕೋಟ್ಯಂತರ ಅಭಿಮಾನಿಗಳಿಂದ ಭಾರಿ ದೊಡ್ಡ ಕಂಟಕ ಎದುರಾಗಿದೆ. ಅದರಲ್ಲೂ ನಟ ದರ್ಶನ್ ತೂಗುದೀಪ್ ಜೈಲಿನಿಂದ ಇದೀಗ ಬೇಲ್ ಅಂದ್ರೆ ಜಾಮೀನು ಪಡೆದು ಬಿಡುಗಡೆ ಆಗಿ ಹೊರಗೆ ಬರಲು ಇದೇ ಅಭಿಮಾನಿಗಳು ಮಾಡುತ್ತಿರುವ ಕೆಲಸ ಕಂಟಕ ತಂದಿದೆ!
ದರ್ಶನ್ ಅವರು ಸಿನಿಮಾ ಮಾಡುತ್ತಾರೆ ಅಂದ್ರೆ 100 ಕೋಟಿ ರೂಪಾಯಿ ಗಳಿಕೆ ಗ್ಯಾರಂಟಿ. ದರ್ಶನ್ ತೂಗುದೀಪ್ ಅವರು ಮಾಸ್ & ಕ್ಲಾಸ್ ಎರಡೂ ಸಿನಿಮಾಗಳಿಗೂ ಸೈ ಎನ್ನುತ್ತಾರೆ. ದರ್ಶನ್ ತೂಗುದೀಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದು, ಸಿನಿಮಾ ನೋಡಲು ವರ್ಷಗಟ್ಟಲೇ ಫ್ಯಾನ್ಸ್ ಕಾದು ಕುಳಿತುಕೊಳ್ಳುತ್ತಾರೆ. ಹೀಗಿದ್ದಾಗ ತಮ್ಮ ನೆಚ್ಚಿನ ನಟ ಜೈಲಿಗೆ ಹೋಗಿರುವುದು ಅಭಿಮಾನಿಗಳಿಗೆ ಸಹಜವಾಗಿ ಸಿಕ್ಕಾಪಟ್ಟೆ ನೋವು ತಂದಿದೆ. ಇದೇ ನೋವು ಈಗ ದರ್ಶನ್ ತೂಗುದೀಪ್ ಜೈಲಿನಿಂದ ಹೊರಗೆ ಬರುವುದಕ್ಕೆ ಕೂಡ ದೊಡ್ಡ ಅಡ್ಡಿ ಮಾಡಿ ಕಂಟಕ ತಂದಿದೆ!

ಅಭಿಮಾನಿಗಳಿಂದ ದರ್ಶನ್‌ಗೆ ಕಂಟಕ?
ದರ್ಶನ್ ಅವರ ಅಭಿಮಾನಿಗಳು ನೋವಿನಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ದರ್ಶನ್ ಅವರ ಅಭಿಮಾನಿಗಳು & ಬೆಂಬಲಿಗರು ಇದೀಗ ದರ್ಶನ್ ತೂಗುದೀಪ್ ಅವರ ಪರವಾಗಿ ಸೋಷಿಯಲ್ ಮೀಡಿಯಾಗಳ ಮೂಲಕ ಕ್ಯಾಂಪೇನ್ ಮಾಡುತ್ತಿದ್ದಾರೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರು ಜೈಲಿನ ಒಳಗೆ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಕೂತು, ಸಿಗರೇಟು ಸೇದಿ ಟೀ ಕುಡಿದ ಫೋಟೋ ವೈರಲ್ ಮಾಡುತ್ತಿದ್ದಾರೆ. ಈ ಮೂಲಕ ದರ್ಶನ್ ಅವರಿಗೆ ಅವರ ಅಭಿಮಾನಿಗಳಿಂದಲೇ ಕಂಟಕ ಎದುರಾಗಿದೆ ಎಂಬ ಆರೋಪ ಕಾನೂನು ತಜ್ಞರಿಂದಲೇ ಈಗ ಕೇಳಿಬಂದಿದೆ. ಹೇಗೆ ಗೊತ್ತಾ? ಮುಂದೆ ಓದಿ.
ಫೋಟೋಗಳು & ವಿಡಿಯೋ ವೈರಲ್!
ದರ್ಶನ್ ತೂಗುದೀಪ್ ಅವರನ್ನು ಅವರ ಅಭಿಮಾನಿಗಳು ಡಿ-ಬಾಸ್ ಅಂತಾನೇ ಕರೆಯುತ್ತಿದ್ರು. ದರ್ಶನ್ ತೂಗುದೀಪ್ & ಜೊತೆಗಾರರು ಸೇರಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಣ್ಣೆ, ಸಿಗರೇಟ್, ಬಿಯರ್, ಬಿರಿಯಾನಿ ತಿಂತಿದ್ದಾರೆ ಅನ್ನೋ ಆರೋಪವನ್ನ ವಿರೋಧಿಗಳು ಮಾಡಿದ್ದರು. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಫೋಟೋಸ್ ಸೇರಿದಂತೆ ದರ್ಶನ್ ತೂಗುದೀಪ್ ಜೈಲಿನಿಂದಲೇ ವಿಡಿಯೋ ಕಾಲ್ ಮಾಡುವ ವಿಡಿಯೋ ಕೂಡ ವೈರಲ್ ಆಗಿತ್ತು.
ಈಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈ ವಿಡಿಯೋ & ಫೋಟೋಸ್ ವೈರಲ್ ಮಾಡುತ್ತಿದ್ದು, ಇದೇ ಕಾರಣಕ್ಕೆ ನಟ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಗುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ. ಅಭಿಮಾನಿಗಳ ಈ ವರ್ತನೆಯಿಂದ ದಾಸ ದರ್ಶನ್ ಅವ್ರು ಜೈಲಿನ ಒಳಗೆ ಮತ್ತಷ್ಟು ತಿಂಗಳು ಪರದಾಡುವ ಸ್ಥಿತಿ ಬರುತ್ತಾ? ಎಂಬ ಪ್ರಶ್ನೆ ಕಾಡುತ್ತಿದೆ. ಯಾಕಂದ್ರೆ ಈ ಫೋಟೋಗಳು ಹಾಗೂ ವಿಡಿಯೋ ನ್ಯಾಯಾಲಯಕ್ಕೆ ತಲುಪಿದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.












Click it and Unblock the Notifications