Darshan Thoogudeepa: ದುನಿಯಾ ವಿಜಯ್ ಸಿನಿಮಾ ‘ಭೀಮ’ ಗಳಿಸಿದ್ದು ಎಷ್ಟು ಕೋಟಿ? ದರ್ಶನ್ ಅವರ ಅಭಿಮಾನಿಗಳು ಏನ್ ಹೇಳಿದ್ರು?
ದರ್ಶನ್ ತೂಗುದೀಪ ಸ್ನೇಹಿತ ದುನಿಯಾ ವಿಜಯ್ ಅವರ 'ಭೀಮ' ಸಿನಿಮಾ ಸ್ಯಾಂಡಲ್‌ವುಡ್ ಅಂಗಳದಲ್ಲಿ ದೊಡ್ಡ ಸದ್ದು ಮಾಡಿದೆ. ಅಲ್ಲದೆ ಮೊದಲ ದಿನವೇ ಕೋಟ್ಯಂತರ ರೂಪಾಯಿ ಗಳಿಸಿ ಗೆದ್ದು ಬೀಗಿದ್ದ 'ಭೀಮ' ಸಿನಿಮಾ ಈವರೆಗೂ ಒಟ್ಟು ಎಷ್ಟು ಕೋಟಿ ರೂಪಾಯಿ ಹಣ ಗಳಿಸಿದೆ ಗೊತ್ತಾ? 'ಭೀಮ' ಬಾಕ್ಸ್ ಆಫಿಸ್‌ನಲ್ಲಿ ಗಳಿಸಿರುವ ಹಣದ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಕನ್ನಡಿಗರ ಸಿನಿಮಾ 'ಭೀಮ' ಶುಕ್ರವಾರ ಅದ್ಧೂರಿಯಾಗಿ ಮೂಲೆ ಮೂಲೆಯಲ್ಲೂ ರಿಲೀಸ್ ಆಗಿದೆ. ಹೀಗಾಗಿ ದುನಿಯಾ ವಿಜಯ್ ಡೈರೆಕ್ಷನ್ ಮಾಡಿ & ಹೀರೋ ಆಗಿ ನಟನೆ ಮಾಡಿರುವ 'ಭೀಮ' ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗೆ ಎಲ್ಲೆಲ್ಲೂ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಮತ್ತೊಂದು ಕಡೆ ಸಿನಿಮಾ ಮಂದಿರಗಳು ಕೂಡ ತುಂಬಿ ತುಳುಕುತ್ತಿವೆ. ಹಾಗೇ 'ಭೀಮ' ಸಿನಿಮಾ ಮೊದಲ ದಿನವೇ ಕೋಟಿ ಕೋಟಿ ಗಳಿಸಿದೆ ಎನ್ನಲಾಗಿದೆ. ಹಾಗಾದರೆ, ದುನಿಯಾ ವಿಜಯ್ ಸಿನಿಮಾ 'ಭೀಮ' 2ನೇ ದಿನವಾದ ನಿನ್ನೆ ಎಷ್ಟು ಕೋಟಿ ರೂಪಾಯಿ ಗಳಿಸಿದೆ ಗೊತ್ತಾ?

20 ಕೋಟಿ ಗಳಿಸಿದ 'ಭೀಮ' ಸಿನಿಮಾ?
'ಭೀಮ' ಸಿನಿಮಾ ರಿಲೀಸ್ ಆಗಿರುವ ಬಹುತೇಕ ಥಿಯೇಟರ್‌ಗಳು ನಿನ್ನೆ ಹೌಸ್‌ಫುಲ್ ಬೋರ್ಡ್ ಹಾಕಿವೆ. ಹೀಗಾಗಿ ಕೋಟ್ಯಂತರ ರೂಪಾಯಿ ಹಣವನ್ನ ದುನಿಯಾ ವಿಜಯ್ ಡೈರೆಕ್ಷನ್ ಮಾಡಿ & ಹೀರೋ ಆಗಿ ನಟನೆ ಮಾಡಿರುವ 'ಭೀಮ' ಸಿನಿಮಾ ಗಳಿಸಿದೆ ಎನ್ನಲಾಗಿದೆ. ಅದ್ರಲ್ಲೂ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೆರೈಟಿ ವೆರೈಟಿ ಮಾಹಿತಿ ಹರಿದಾಡುತ್ತಿದ್ದು, ಈ ಸಮಯದಲ್ಲಿ 'ಭೀಮ' ಸಿನಿಮಾ ಎರಡು ದಿನ ಸೇರಿ ಒಟ್ಟು 20 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗುತ್ತಿದೆ. ಆದರೆ 'ಭೀಮ' ಸಿನಿಮಾ ಬಾಕ್ಸ್ ಆಫಿಸ್ ಕಲೆಕ್ಷನ್ ಬಗ್ಗೆ ದುನಿಯಾ ವಿಜಯ್ ಅವರೇ ಆಗಲಿ ಅಥವಾ ಸಿನಿಮಾ ತಂಡವೇ ಆಗಲಿ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿಯೇ ಕುತೂಹಲ ಕೂಡ ಡಬಲ್ ಆಗುತ್ತಿದೆ.












Click it and Unblock the Notifications