Darshan Thoogudeepa: ದರ್ಶನ್ ಧಿಮಾಕು ದೌಲತ್ತು ವರ್ಕೌಟ್ ಆಗಲ್ಲ- ವಕೀಲ ಕೆಎನ್ ಜಗದೀಶ್ ಕುಮಾರ್ ಯ್ಯೂಟರ್ನ್

ದರ್ಶನ್ ನಿರಪರಾಧಿ ಎಂದ ವಕೀಲ ಕೆ.ಎನ್. ಜಗದೀಶ್ ಕುಮಾರ್ ಈಗ ಯ್ಯೂಟರ್ನ್ ಹೊಡೆದಿದ್ದಾರೆ. ಹೌದು.... ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಂಚಿಕೊಂಡು ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದು ದರ್ಶನ್ ಅಲ್ಲ, ದರ್ಶನ್‌ ಏಟು ಒಂದೆರಡು ಹೊಡೆದಿರಬಹುದು. ಆದರೆ ದರ್ಶನ್‌ ಹೊಡೆಯುವ ಮೊದಲೇ ಬಹುತೇಕ ಜೀವ ಹೋಗುವಂತೆ ಹೊಡೆದಿರುವುದು ಆರೋಪಿ ಎ13 ದೀಪಕ್ ಎಂದು ಹೇಳಿದ್ದರು. ಆದರೀಗ ದರ್ಶನ್ ಬಗ್ಗೆ ಆಡಿದ ಮಾತುಗಳು ಬೇರೆಯದ್ದೇ ಆಗಿದೆ.

ಫ್ರೀಡಂ ಪಾರ್ಕ್‌ನಲ್ಲಿ ದರ್ಶನ್ ಬಗ್ಗೆ ಮಾತನಾಡಿದ ವಕೀಲ ಕೆ.ಎನ್. ಜಗದೀಶ್ ಕುಮಾರ್, 'ಒಬ್ಬ ಖ್ಯಾತ ನಟನಾಗಿ ಬಡವರ ಮಕ್ಕಳನ್ನು ಈ ಕೃತ್ಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಬಡವರ ಮಕ್ಕಳಿಗೆ ಜಾಮೀನು ಕೊಡಸಲ್ಲಿಕ್ಕೆ ಆಗಿಲ್ಲ ಇವರ ಕೈಯಲ್ಲಿ. ಇದು ನಟನೆ ಅಲ್ಲ. ನಿಜ ಜೀವನ. ನಿಜ ಜೀವನದಲ್ಲಿ ನಟನೆ ಮಾಡಬಾರದು. ದರ್ಶನ್ ಬದಲಾವಣೆ ಆಗಬೇಕು. ಧಿಮಾಕು ದೌಲತ್ತು ವರ್ಕೌಟ್ ಆಗಲ್ಲ. ಅವರಲ್ಲಿ ಇರುವ ಧಿಮಾಕು ದೌಲತ್ತೇ ಅವರನ್ನು ಜೈಲಿಗೆ ಕರೆದುಕೊಂಡು ಹೋಗಿ ಬಿಟ್ಟಿದೆ' ಎಂದರು.

Darshan thoogudeepa dhimaku daulattu is not a workout - advocate kn jagadish kumar

'ದರ್ಶನ್ ಧಿಮಾಕು ದೌಲತ್ತು ಬಿಡಬೇಕು'

'ನಮ್ಮೊಂದಿಗೆ ಬರೋರು ನ್ಯಾಯುತವಾಗಿ ಇರಲು ಬಂದ್ರೆ ಬನ್ನಿ. ಇಲ್ಲಿಗೆ ಬಂದು ಗಲಾಟೆ ಮಾಡಿದರೆ ಅಂತಹ ಫ್ಯಾನ್ಸ್‌ಗೆ ಲಾಠಿ ರುಚಿ ತೋರ್ಸಿ ಅಂತ ನಾನು ಪೊಲೀಸರಿಗೆ ಹೇಳಿದ್ದೆ. ಅಂತಹ ಫ್ಯಾನ್ಸ್ ನಮಗೆ ಬೇಡ. ನಮಗೆ ನ್ಯಾಯದ ಪರ ಇರುವ ಹತ್ತು ಜನ ಸಾಕು. ನ್ಯಾಯುತವಾಗಿ ನಡೆಯಬೇಕು. ನಾವು ಕೂಡ ಒಬ್ಬ ಸರಳ ವ್ಯಕ್ತಿಗಳೇ. ನಾವೇನು ಗನ್‌ಮ್ಯಾನ್ ಕರೆದುಕೊಂಡು ಜನಗಳನ್ನು ಕರೆದುಕೊಂಡು ಬಂದಿಲ್ಲ. ನಮಗೆ ಹಣ ಕೊಟ್ಟು ಜನ ಕರೆದುಕೊಂಡು ಬರೋ ಅವಶ್ಯಕತೆನೂ ಇಲ್ಲ. ಒಂದು ಸಣ್ಣ ಧ್ವನಿ ಹಳ್ಳಿಯಿಂದ ದೆಹಲಿಗೂ ಹೋಗುತ್ತೆ. ಅದೂ ಕೂಡ ಒಂದು ವಾಟ್ಸಾಪ್‌ ಇಂದ' ಎಂದು ಜಗದೀಶ್ ಹೇಳಿದ್ದಾರೆ.

ಜೈಲಿನಲ್ಲಿ ದರ್ಶನ್ ಫೋಟೋ ತೆಗೆದವರು ಬಿಜೆಪಿ ಅವರು...

ಜೈಲಿನಲ್ಲಿ ದರ್ಶನ್ ಫೋಟೋ ಹಿಡಿದವರು ಯಾರು? ಜೈಲಿನಲ್ಲಿ ದರ್ಶನ್ ಫೋಟೋ ಹಿಡಿದವರು ಯಾರು ಅಂತ ಗೊತ್ತಾಗಬೇಕು. ಒಬ್ಬ ಡಿವೈಎಸ್‌ಪಿ ಜೈಲಿನಲ್ಲಿರುವ ದರ್ಶನ್ ರಾಜಾತಿಥ್ಯದ ಫೋಟೋ ತೆಗೆದಿದ್ದಾರೆ ಅನ್ನೋ ಮಾಹಿತಿ ನನಗಿದೆ. ಆ ಡಿವೈಎಸ್‌ಪಿ ಬಿಜೆಪಿ ಕಡೆಯವರು ಎನ್ನಲಾಗುತ್ತದೆ. ದರ್ಶನ್‌ಗೂ ಬಿಜೆಪಿಗೂ ಏನ್ ಸಂಬಂಧ? ದರ್ಶನ್‌ ಮೇಲೆ ಬಿಜೆಪಿಯವರಿಗೆ ಯಾಕೆ ದ್ವೇಷ? ಇನ್ನೂ ಮೂರು ದಿನದಲ್ಲಿ ಯಾರು ಫೋಟೋ ತೆಗೆದಿದ್ದು ಅಂತ ಹೇಳಿಲ್ಲಾ ಅಂತಾದರೆ ನಾನೇ ರಿವೀಲ್ ಮಾಡ್ತೀನಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ನಮಗೆ ದರ್ಶನ್ ಫೋಟೋ ತೆಗೆದ ವ್ಯಕ್ತಿ ಬಗ್ಗೆ ಮಾಹಿತಿ ಇದೆ. ಆ ವ್ಯಕ್ತಿ ಬಗ್ಗೆ ಇನ್ನೂ ಮೂರು ದಿನದಲ್ಲಿ ಅವರೇ ಮಾಹಿತಿಯನ್ನ ಹೇಳಿದರೆ ಒಳ್ಳೆಯದು. ಇಲ್ಲಾ ನಾವು ಹೇಳ್ತೀವಿ ಅಂತ ಗಡುವು ನೀಡಿದರು.

ದರ್ಶನ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಜಗಧೀಶ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಬಂಧನವಾಗಿ ನೂರು ದಿನಗಳು ಕಳೆದು ಹೋಗಿವೆ. ಜೈಲಿನಲ್ಲಿರುವ ದರ್ಶನ್‌ ಬೇಲ್‌ಗಾಗಿ ಕೋರ್ಟ್‌ಗೆ ಅರ್ಜಿಯನ್ನೂ ಹಾಕುತ್ತಿದ್ದಾರೆ. ಈ ನಡುವೆ ದರ್ಶನ್ ಬಿಡುಗಡೆಗೆ ಆಗ್ರಹಿಸಿ ವಕೀಲ ಜಗದೀಶ್ ಕುಮಾರ್‌ ನೇತೃತ್ವದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು.

ಸೆಪ್ಟೆಂಬರ್ 23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ಬಳಿ ಪ್ರತಿಭಟನೆ ಮಾಡಿದ ಅವರು ಹಾಗೂ ದರ್ಶನ್ ಅಭಿಮಾನಿಗಳು ದರ್ಶನ್‌ಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು. ಜೊತೆಗೆ ರೇಣುಕಾಸ್ವಾಮಿ ಕೊಲೆಯಲ್ಲಿ ರಾಜಕಾರಣಿಯೊಬ್ಬರ ಪ್ರಮುಖ ಪಾತ್ರವಿದೆ. ದರ್ಶನ್‌ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಅಂತ ಆರೋಪಿಸಿದರು. ಹೀಗಾಗಿ ಜೈಲಿನಲ್ಲಿರುವ ದರ್ಶನ್ ಫೋಟೋ ತೆಗೆದವರು ಯಾರು? ಆ ವ್ಯಕ್ತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು. ಆ ವ್ಯಕ್ತಿಯ ಹಿನ್ನೆಲೆಯನ್ನು ನೀಡಬೇಕು. ಆ ವ್ಯಕ್ತಿಯ ಬಗ್ಗೆ ನಮಗೂ ಮಾಹಿತಿ ಇದೆ. ನೀವು ಮಾಹಿತಿ ನೀಡಿಲ್ಲ ಅಂತಾದರೆ ನಾವು ಆ ವ್ಯಕ್ತಿ ಬಗ್ಗೆ ವಿವರ ಹಂಚಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+