Lakshmi Loves Daasa: ನಟ ದರ್ಶನ್ ವಿಜಯಲಕ್ಷ್ಮೀ ಪ್ರೇಮದ ಹಾಡು ವೈರಲ್
ಸ್ಯಾಂಡಲ್‌ವುಡ್ ಖ್ಯಾತ ನಟ ದರ್ಶನ್ ತೂಗುದೀಪ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರ ಪ್ರೇಮ ಸಾರುವ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಾಡು ವಿಜಯಲಕ್ಷ್ಮೀ ಅವರಿಗೆ ದರ್ಶನ್ ಹಾಡಿದಂತೆ ನಿರ್ಮಾಣ ಮಾಡಲಾಗಿದೆ. ಹಾಗಾದರೆ ಯಾವುದೀ ಹಾಡು? ಈ ಹಾಡಿನ ಸೃಷ್ಟಿಕರ್ತರು ಯಾರು? ಎಲ್ಲವನ್ನೂ ಈಗ ತಿಳಿಯೋಣ.
ಡಿ ಬಾಸ್ ದರ್ಶನ್ ಇದೀಗ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಹೆಚ್ಚುವರಿ ಕೆಲಸದ ಒತ್ತಡದಿಂದಾಗಿ ಅವರಿಗೆ ಆಗಾಗ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಈ ಬೆನ್ನು ನೋವು ನಿವಾರಣೆಗೆ ವಿಜಯಲಕ್ಷ್ಮೀ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ತೆರಳಿ ಕಳೆದ ದಿನ (ಏಪ್ರಿಲ್ 11) ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ನಟ ದರ್ಶನ್ ಕೂಡ ದೇವಸ್ಥಾನಕ್ಕೆ ವಿಜಯಲಕ್ಷ್ಮೀ ಅವರೊಂದಿಗೆ ಹೋಗಬೇಕಿತ್ತು. ಆದರೆ ತುಂಬಾ ಬೆನ್ನು ನೋವು ಇದ್ದ ಕಾರಣ ಅವರು ಹೋಗಲು ಆಗಿಲ್ಲ. ಹೀಗಾಗಿ ವಿಜಯಲಕ್ಷ್ಮಿ ಅವರೇ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ್ದಾರೆ. ಅಲ್ಲದೆ ಅಲ್ಲಿಗೆ ಬಂದಿದ್ದ ಅಭಿಮಾನಿಯೊಬ್ಬರ ಮಗುವಿಗೆ ನಾಮಕರಣ ಕೂಡ ಮಾಡಿದ್ದಾರೆ.

ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿಜಯಲಕ್ಷ್ಮೀ ಅವರನ್ನು ಎಷ್ಟು ಪ್ರೀತಿಸುತ್ತಾರೆಂದು ಹೇಳುವ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಾಡಿನ ಮೊದಲ ಸಾಲು 'ವಿಜಯಲಕ್ಷ್ಮೀ ನನ್ನ ಗೆಲುವು ನೀನೆ, ಈ ಜೀವದಾಣೆ ಚಿನ್ನ ಬೇರೆ ಕಾಣೆ' ಎಂದು ಆರಂಭವಾಗುತ್ತದೆ. Lakshmi Loves Daasa ಎಂದು ಈ ಹಾಡನ್ನು ಹಂಚಿಕೊಳ್ಳಲಾಗಿದೆ.
ಈ ಕನ್ನಡ ಆಲ್ಬಮ್ ಸಾಂಗ್ ಅನ್ನು ವಿಕಾಶ್ ನಾಗಲಾಪುರ ಅವರು ಹಾಡಿದ್ದಾರೆ. ಮಂಜು ಕವಿ ಅವರು ಹಾಡಿನ ರಿಲಿಕ್ಸ್ ಹಾಗೂ ಸಂಗೀತ ನಿರ್ದೇಶನ ಮಾಡಿದರೆ, ಎಸ್‌ಜೆ ಸಂಜಯ್ ಅವರು ಹಾಡನ್ನು ಎಡಿಟ್ ಮಾಡಿದ್ದಾರೆ. ಈ ಹಾಡನ್ನು ವಿಜಯಲಕ್ಷ್ಮೀ ಹಾಗೂ ದರ್ಶನ್ ಅವರ ಫೋಟೋಗಳ ಸಂಯೋಜನೆಯೊಂದಿಗೆ ಎಡಿಟ್ ಮಾಡಲಾಗಿದ್ದು ಸಾಕಷ್ಟು ಜನರ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಒಂದೇ ದಿನದಲ್ಲಿ ಈ ಹಾಡು ಜನರ ಮನ ಗೆದ್ದಿದೆ. ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್‌ಗಳು ಈ ಹಾಡಿಗೆ ಬಂದಿದೆ. ಈ ಹಾಡಿನ ಕ್ಯಾಪ್ಶನ್ ಡಿ ಬಾಸ್ ಬರ್ತಡೇ ಸಾಂಗ್ ಎಂದು ಬರೆಯಲಾಗಿದೆ. ಈ ಹಾಡನ್ನು ತುಂಬಾ ಜನ ಮೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಹಾಡು ಅದ್ಭುತವಾಗಿ ಮೂಡಿ ಬಂದಿದ್ದು ಜನ ಇಷ್ಟಪಟ್ಟು ಲೈಕ್ ಕಾಮೆಂಟ್ ಮಾಡುವುದು ಮಾತ್ರವಲ್ಲದೆ ಶೇರ್ ಕೂಡ ಮಾಡುತ್ತಿದ್ದಾರೆ.

ಒಂದು ಕಡೆ ದರ್ಶನ್ ಬೇಗ ಹುಷಾರಾಗಲಿ ಗುಣಮುಖರಾಗಲಿ ಎಂದು ವಿಜಯಲಕ್ಷ್ಮೀ ಶಕ್ತಿ ದೇವತೆಗಳ ಮೊರೆ ಹೋದರೆ ಇತ್ತ ಅಭಿಮಾನಿಗಳು ವಿಜಯಲಕ್ಷ್ಮಿ ಹಾಗೂ ದರ್ಶನ್ ನಡುವಿನ ಸಂಸಾರ ಸರಿ ಹೋಯ್ತು ಅಂತ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಸಂತೋಷದ ಭಾಗವಾಗಿ Lakshmi Loves Daasa ಹಾಡನ್ನು ಸೃಷ್ಟಿಸಿದಂತಿದೆ.
ಒಟ್ಟಿನಲ್ಲಿ ಕಟ್ಟಿಕೊಂಡ ಮಡದಿಯ ಪ್ರೀತಿಯನ್ನು ದರ್ಶನ್ ಅರ್ಥ ಮಾಡಿಕೊಂಡಿದ್ದಾರೆ. ಅವರ ದಾಂಪತ್ಯ ಜೀವನದ ಮೇಲೆ ಯಾರ ಕೆಟ್ಟ ದೃಷ್ಟಿ ಬೀಳದೇ ಇರಲಿ. ಅವರ ಜೀವನ ಯಾವಾಗಲೂ ಹೀಗೆ ಖುಷಿಯಾಗಿರಲಿ ಎಂದು ಅಭಿಮಾನಿಗಳು ಕೂಡ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications