Get Updates
Get notified of breaking news, exclusive insights, and must-see stories!

ದರ್ಶನ್‌ ಫ್ಯಾನ್ಸ್‌ ನನಗೆ ಕೆಟ್ಟ ಕಾಮೆಂಟ್‌ ಮಾಡಲ್ಲ, ಬೆಂಕಿ ಹಚ್ಚೋದೆಲ್ಲ ಅವ್ರು: ವಿನಯ್‌ ಗೌಡ

ಬಿಗ್‌ಬಾಸ್‌ ಖ್ಯಾತಿಯ ವಿನಯ್‌ ಗೌಡ ನಟ ಕಿಚ್ಚ ಸುದೀಪ್‌ ಅವರಿಗೆ ಸಿಕ್ಕಾಪಟ್ಟೆ ಆಪ್ತರು. ಇನ್ನು ಇತ್ತೀಚೆಗೆ ತೆರೆಕಂಡ ದರ್ಶನ್‌ ಅವರ ಡೆವಿಲ್‌ ಸಿನಿಮಾದಲ್ಲೂ ವಿನಯ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದರ್ಶನ್‌ ಅವರೊಂದಿಗೆ ಒಡನಾಟದ ಬಗ್ಗೆ ಮಾತನಾಡಿರುವ ವಿನಯ್‌, 'ನಾನು ಇಷ್ಟು ದಿನ ಯಾವ ಸಂದರ್ಶನದಲ್ಲೂ ದರ್ಶನ್‌ ಸರ್‌ ಬಗ್ಗೆ ಏನೂ ಮಾತನಾಡುತ್ತಿರಲಿಲ್ಲ. ಇಲ್ಲಿ ನಾನು ಏನೋ ಹೇಳೋದು, ಅದು ನೆಗೆಟಿವ್‌ ಆಗಿ ಬೇರೆ ಕಡೆ ಬಳಕೆಯಾಗೋದು ಬೇಡ' ಎಂದಿದ್ದಾರೆ ವಿನಯ್‌ ಗೌಡ.

'ಈಗೆಲ್ಲ ಕಾನೂನು ಸಮಸ್ಯೆಗಳು ಜಾಸ್ತಿ ಇದೆ. ಹೀಗಾಗಿ ನಾನು ಇಲ್ಲೋನೋ ಇತ್ತು, ಅಲ್ಲೇನೋ ಇತ್ತು ಅಂದಾಗ ಅದನ್ನ ಬಳಸಿಕೊಂಡು ಅವರಿಗೆಲ್ಲ ತೊಂದರೆಯಾಗೋದು ನನಗೆ ಇಷ್ಟವಿಲ್ಲ. ದರ್ಶನ್‌ ಸರ್‌ ಜೊತೆ ಸಿನಿಮಾ ಮಾಡುವಾಗ ನನ್ನ ಸೀನ್‌ ಇದ್ರೆ ಮಾತ್ರ ಇಬ್ಬರೂ ಮುಖಾಮುಖಿ ಆಗ್ತಿದ್ವಿ. ನಾನು ನೋಡಿದ ಪ್ರಕಾರ ಯಾರೋ ಹೋಗಿ ಶೇಕ್‌ ಹ್ಯಾಂಡ್‌ ಮಾಡಿದ್ರೂ ದರ್ಶನ್‌ ಸರ್‌ ಇನ್ನೂ ಕೆಳಗೆ ಬಾಗುತ್ತಾರೆ. ಅವರು ಅಂತಹ ವ್ಯಕ್ತಿ. ಹಾಗಾಗಿ ನಾನು ನೋಡಿರುವುದನ್ನು ಮಾತ್ರ ಹೇಳಲು ಸಾಧ್ಯ' ಎಂದಿದ್ದಾರೆ.

Darshan Fans Dont Troll Me Fire Is Lit By Others Vinay Gowda Clarifies

'ನನಗೆ ಹಾಗೂ ದರ್ಶನ್‌ ಸರ್‌ಗೆ ಅಷ್ಟೊಂದು ಒಡನಾಟ ಇಲ್ಲ. ಹಾಗಾಗಿ ಅದರ ಬಗ್ಗೆ ನಾನು ಜಾಸ್ತಿ ಮಾತನಾಡಲ್ಲ. ಸುದೀಪ್‌ ಸರ್‌ಗೆ ನಾನು ಕ್ಲೋಸ್‌ ಇರಬಹುದು. ಆದರೆ ನಾನು ದರ್ಶನ್‌ ಅವರಿಗೆ ವೃತ್ತಿಯಲ್ಲಿ ಕ್ಲೋಸ್‌ ಇದ್ದೇನೆ. ಹೀಗಿರುವಾಗ ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್‌ ಮಾಡುವವರು ಯಾರೂ ದರ್ಶನ್‌ ಫ್ಯಾನ್ಸ್‌ ಅಲ್ಲ, ಸುದೀಪ್‌ ಸರ್‌ ಫ್ಯಾನ್ಸ್‌ ಕೂಡ ಅಲ್ಲ. ಈ ಎರಡರಲ್ಲಿ ಮಧ್ಯದಲ್ಲಿ ಬೆಂಕಿ ಹಚ್ಚುವವರು ಮಾಡುತ್ತಿರೋ ಕೆಲಸ ಇದು' ಎಂದು ತಿರುಗೇಟು ನೀಡಿದ್ದಾರೆ.

'ಮಾರ್ಕ್‌ ಸಿನಿಮಾಗೆ 1 ಲಕ್ಷ ಜನ ಜನ ಕೆಲಸ'

'ಕೇವಲ ಐದು ತಿಂಗಳಲ್ಲಿ ಒಂದು ಸಿನಿಮಾ ಮಾಡಿ ರಿಲೀಸ್‌ ಮಾಡೋದು ಅಸಾಧ್ಯ. ಹೀಗಿರುವ ಇಂತಹ ದೊಡ್ಡ ಬಜೆಟ್‌ನ ಸಿನಿಮಾ ಮಾರ್ಕ್‌ ಮಾಡಿ ತೋರಿಸಿದ್ದಾರೆ. ಸುಮಾರು ಒಂದು ಲಕ್ಷ ಜನ ಈ ಸಿನಿಮಾಗೆ ಕೆಲಸ ಮಾಡಿದ್ದಾರೆ. ಮಾರ್ಕ್‌ ಸಿನಿಮಾದಿಂದ ಒಂದು ಲಕ್ಷ ಕುಟುಂಬಗಳು ಊಟ ಮಾಡಿವೆ. ಇಂತದ ದೊಡ್ಡ ಸಿನಿಮಾಗಳು ಬಂದ್ರೆ ಸಾಕಷ್ಟು ಕುಟುಂಬಗಳ ಹೊಟ್ಟೆತುಂಬುತ್ತೆ' ಎಂದಿದ್ದಾರೆ.

'ಹೀಗಾಗಿ ಜನ ಇಂತಹ ಸಿನಿಮಾಗಳ ಕೈಹಿಡಿಯುವುದರಿಂದ ಅವರ ಕೊಡುಗೆಯೂ ಇರುತ್ತದೆ. ಅದನ್ನು ಬಿಟ್ಟು ಬೇಡದ ಫೈಟ್‌ಗಳು, ಫ್ಯಾನ್‌ ವಾರ್‌ಗಳಿಂದ ಪ್ರಯೋಜನ ಇಲ್ಲ. ಫ್ಯಾನ್ಸ್‌ ಆದವರು ಯಾರೂ ಫ್ಯಾನ್‌ ವಾರ್‌ ಮಾಡಲ್ಲ. ನಾವೆಲ್ಲ ಕನ್ನಡ ಚಿತ್ರರಂಗದ ಫ್ಯಾನ್ಸ್‌ ಆಗಿರೋಣ. ಕನ್ನಡ ಸಿನಿಮಾಗಳನ್ನ ಬೆಳೆಸೋಣ. ಡೆವಿಲ್‌ಗೂ ಸಪೋರ್ಟ್‌ ಮಾಡಿ, ಮಾರ್ಕ್‌ಗೂ ಸಪೋರ್ಟ್‌ ಮಾಡಿ ಎಂದಿದ್ದಾರೆ ವಿನಯ್. ಮಾರ್ಕ್‌ ಸಿನಿಮಾದಲ್ಲಿ ಸುದೀಪ್‌ ಅವರ ಮ್ಯಾನರಿಸಂ, ಲುಕ್‌ ಬಗ್ಗೆ ವಿವರಿಸಲು ಸಾಧ್ಯವಿಲ್ಲ. ಒಬ್ಬ ಹೀರೋ ಇಷ್ಟೊಂದು ಬದ್ಧತೆ ಇಟ್ಟುಕೊಳ್ಳುವುದು ತುಂಬಾ ಕಡಿಮೆ. ಅವರ ಎನರ್ಜಿಯಿಂದ ನಮಗೂ ಸ್ಫೂರ್ತಿ ಸಿಕ್ಕಿದೆ' ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+