ಅವರವರ ಆಹಾರ ನೆಮ್ಮದಿಯಿಂದ ತಿನ್ನಲಿ ಬಿಡಿ: ವಿಷ್ಣು ಹಳೆಯ ಫೋಟೋ ಹಾಕಿ ನಟ ಡಾಲಿ ಬೆಂಬಲಕ್ಕೆ ನಿಂತ ಜನ
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ಇತ್ತೀಚೆಗೆ ದೊನ್ನೆ ಬಿರಿಯಾನಿ ಸವಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ವಿವಾದವೊಂದು ಹುಟ್ಟಿಕೊಂಡಿದೆ. ಆಹಾರ ಸೇವನೆಯನ್ನು ಜಾತಿಯ ವಿಚಾರಕ್ಕೆ ಜೋಡಿಸಿ, ಕೆಲವರು ಪ್ರಶ್ನೆ ಎತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೂ ಕಾರಣವಾಗಿದೆ. ವಿಡಿಯೋ ವೈರಲ್ ಆದ ಬಳಿಕ, "ಲಿಂಗಾಯತರು ಮಾಂಸಾಹಾರ ಸೇವಿಸುತ್ತಾರಾ?" ಎಂಬ ಪ್ರಶ್ನೆಗಳನ್ನು ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಮುಂದಿಟ್ಟಿದ್ದು, ಈ ವಿಚಾರವು ಪರ-ವಿರೋಧದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ನಟ ವಿಷ್ಣುವರ್ಧನ್ ಅವರು ಮಾಂಸಾಹಾರ ಸೇವನೆ ಮಾಡುತ್ತಿರುವ ಹಳೆಯ ಫೋಟೋ ಕೂಡ ವೈರಲ್ ಆಗಿದೆ.
ಆಹಾರಕ್ಕೂ ಜಾತಿಗೂ ಸಂಬಂಧವಿಲ್ಲ
ಈ ಚರ್ಚೆಗೆ ಪ್ರತಿಕ್ರಿಯಿಸಿದ ಅನೇಕರು, ತಿನ್ನುವ ಆಹಾರಕ್ಕೂ ಜಾತಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಹಾರ ಸೇವನೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿದ್ದು, ಅದನ್ನು ಪ್ರಶ್ನಿಸುವ ಅಥವಾ ತೀರ್ಪು ನೀಡುವ ಹಕ್ಕು ಯಾರಿಗೂ ಇಲ್ಲ ಎಂದು ಡಾಲಿ ಧನಂಜಯ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾತಿ ಆಧಾರಿತವಾಗಿ ಆಹಾರ ವಿಚಾರವನ್ನು ಪ್ರಶ್ನಿಸುವುದು ಸಮಾಜದಲ್ಲಿ ಅಸಹಿಷ್ಣುತೆಯನ್ನು ಹೆಚ್ಚಿಸುವಂತದ್ದು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾಲಿ ಧನಂಜಯ್ ಅವರ ಪರವಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತಪಡಿಸುತ್ತಿರುವ ನಡುವೆ, ದಿವಂಗತ ಸಾಹಸಸಿಂಹ ವಿಷ್ಣುವರ್ಧನ್ ಅವರು ಮಾಂಸಾಹಾರ ಸೇವನೆ ಮಾಡುತ್ತಿರುವ ಹಳೆಯ ಫೋಟೋಗಳು ಕೂಡ ವೈರಲ್ ಆಗಿವೆ. ಎಲ್ಲಾ ನಟರು ನಾನ್‌ವೆಜ್ ಆಹಾರ ಸೇವಿಸಿರುವ ಉದಾಹರಣೆಗಳಿವೆ, ಆದರೆ ಡಾಲಿ ಧನಂಜಯ್ ಅವರನ್ನೇ ಮಾತ್ರ ಗುರಿಯಾಗಿಸಿ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ನಟನ ಪ್ರತಿಭೆ, ಅವರ ಕೆಲಸ ಮತ್ತು ಸಮಾಜಕ್ಕೆ ನೀಡುವ ಕೊಡುಗೆಗಳನ್ನು ಗಮನಿಸಬೇಕು ಹೊರತು ಅವರ ವೈಯಕ್ತಿಕ ಆಹಾರ ಪದ್ಧತಿಯ ಬಗ್ಗೆ ತೀರ್ಪು ನೀಡುವುದು ಅಸಂಗತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಅಭಿಪ್ರಾಯ ವ್ಯಕ್ತವಾಗಿದೆ. ಯಾರು ಏನು ತಿನ್ನಬೇಕು? ಎಂಬುದು ಅವರವರ ಸ್ವಾತಂತ್ರ್ಯವಾಗಿದ್ದು, ಅದರಲ್ಲಿ ಇತರರು ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಡಾಲಿ ಧನಂಜಯ್ ಅವರ ಆಹಾರ ಸೇವನೆ ಕುರಿತ ಈ ವಿಚಾರವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜಾತಿ ಆಧಾರಿತ ಮನಸ್ಥಿತಿಗಳ ವಿರುದ್ಧ ಸಾರ್ವಜನಿಕ ಚರ್ಚೆಗೆ ಕಾರಣವಾಗಿದ್ದು, ಅನಗತ್ಯ ವಿವಾದಗಳನ್ನು ದೂರವಿಡುವಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ವಿಷ್ಣುವರ್ಧನ್ ಫೋಟೋಗಳು ವೈರಲ್
ಈ ಚರ್ಚೆಯ ನಡುವೆ, ದಿವಂಗತ ನಟ ವಿಷ್ಣುವರ್ಧನ್ ಅವರು ಮಾಂಸಾಹಾರ ಸೇವನೆ ಮಾಡುತ್ತಿರುವ ಹಳೆಯ ಫೋಟೋಗಳು ಮತ್ತೆ ವೈರಲ್ ಆಗಿದ್ದು, ಆಹಾರ ಪದ್ಧತಿ ಎಂದರೆ ಯಾವೊಬ್ಬ ವ್ಯಕ್ತಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ನೆನಪಿಸುತ್ತಿದ್ದಾರೆ. ನಟ ಅಂಬರೀಷ್ ಅವರೊಂದಿಗೆ ವಿಷ್ಣು ಮಾಂಸಾಹಾರ ಸೇವನೆ ಮಾಡುತ್ತಿರುವ ಫೋಟೋಗಳು ಕೂಡ ಮುನ್ನೆಲೆಗೆ ಬಂದಿವೆ. ಬಹುತೇಕ ನಟರು, ಸಾರ್ವಜನಿಕ ವ್ಯಕ್ತಿಗಳು ಮತ್ತು ಸಾಮಾನ್ಯ ನಾಗರಿಕರು ತಮ್ಮ ವೈಯಕ್ತಿಕ ಆಯ್ಕೆಯಂತೆ ಆಹಾರ ಸೇವಿಸುತ್ತಾರೆ. ಆದರೆ ಡಾಲಿ ಧನಂಜಯ್ ಅವರ ವಿಚಾರದಲ್ಲೇ ಈ ಮಟ್ಟಿನ ಟೀಕೆಗಳು ಎದುರಾಗಿರುವುದು, ಕೆಲವೊಂದು ಗುಂಪುಗಳು ಉದ್ದೇಶಪೂರ್ವಕವಾಗಿ ವ್ಯಕ್ತಿಗಳನ್ನು ಗುರಿಯಾಗಿಸುತ್ತಿವೆಯೇ ಎಂಬ ಅನುಮಾನವನ್ನೂ ಮುಂದಿಟ್ಟಿದ್ದಾರೆ.
ಯಲ್ಲಾ ನಟರು non veg ತಿಂದಿದ್ದರೆ ಡಾಲಿ ಧನಂಜಯ್ ಅವರನ್ನೇ ಯಾಕೆ target ಮಾಡುತ್ತೀರಾ ಅವರವರ ಆಹಾರವನ್ನು ನೆಮ್ಮದಿಯಿಂದ ತಿನ್ನಲಿ ಬಿಡಿ @Dhananjayaka #DrPuneethrajkumar 👑 pic.twitter.com/DST9zLerLU
— Mayura ||™ ಕನ್ನಡಿಗ🚩 (@mayura_Tweet) January 26, 2026
"ಎಲ್ಲ ನಟರು ನಾನ್‌ವೆಜ್ ತಿಂದಿದ್ದಾರೆ. ಆದರೆ ಡಾಲಿ ಧನಂಜಯ್ ಅವರನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರ? ಅವರವರ ಆಹಾರವನ್ನು ನೆಮ್ಮದಿಯಿಂದ ತಿನ್ನಲಿ ಬಿಡಿ" ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ." ಈ ವಿವಾದವು ಕೇವಲ ಡಾಲಿ ಧನಂಜಯ್ ಅವರ ಆಹಾರ ಸೇವನೆ ಬಗ್ಗೆ ಅಲ್ಲ, ಇದು ವ್ಯಕ್ತಿಯ ಸ್ವಾತಂತ್ರ್ಯ, ಜಾತಿ ಆಧಾರಿತ ಪೂರ್ವಗ್ರಹಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ ಎಂದು ಹಲವರು ಆರೋಪಿಸಿದ್ದಾರೆ. ಆಹಾರ ಎನ್ನುವುದು ವ್ಯಕ್ತಿಯ ಖಾಸಗಿ ವಿಚಾರವಾಗಿದ್ದು, ಅದನ್ನು ಗೌರವಿಸುವ ಮನಸ್ಥಿತಿ ಬೆಳೆದಾಗ ಮಾತ್ರ ಸಮಾಜದಲ್ಲಿ ಸಮಾನತೆಯ ಮೌಲ್ಯಗಳು ಬಲಗೊಳ್ಳಲಿವೆ ಎಂದಿದ್ದಾರೆ. ಈ ವಿವಾದದ ಬಗ್ಗೆ ಡಾಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
-
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
Anupama Gowda: ನನ್ನ ಮದುವೆಗೆ ನನ್ನನ್ನೂ ಕರೆಯಿರಿ: ಎಂಗೇಜ್ಮೆಂಟ್ ಸುದ್ದಿ ಹಬ್ಬಿಸಿದವರಿಗೆ ನಿರೂಪಕಿ ಅನುಪಮಾ ಗೌಡ ಕ್ಲಾರಿಟಿ -
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications