‘ಕೆಜಿಎಫ್’ ಕೋಟೆ ಕಟ್ಟಿದವರ ನಡುವೆ ಕದನ? ರಾಕಿಭಾಯ್ ಯಶ್ VS ಪ್ರಶಾಂತ್ ನೀಲ್?

ಕನ್ನಡಿಗ ಯಶ್ ಸಖತ್ ಸುದ್ದಿಯಲ್ಲಿದ್ದಾರೆ. ತಮ್ಮ ಮುಂದಿನ ಚಿತ್ರ ಅಂದರೆ 'ಯಶ್-19' ಬಗ್ಗೆ ಅಪ್‌ಡೇಟ್ ಕೊಟ್ಟ ಬಳಿಕ, ರಾಕಿಭಾಯ್ ಫ್ಯಾನ್ಸ್ ಖುಷ್ ಆಗಿದ್ದಾರೆ. ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಟೈಟಲ್ ನೋಡಿ ಸಂಭ್ರಮವು ಮೇಳೈಸಿದೆ. ಈ ಸಮಯದಲ್ಲಿ ಪ್ರಶಾಂತ್ ನೀಲ್ ಅವರ ನಿರ್ದೇಶನದ 'ಸಲಾರ್' ಸಿನಿಮಾದ 2ನೇ ಟ್ರೇಲರ್ ರಿಲೀಸ್ ಆಗುತ್ತಿದೆ. ಹೀಗೆ, 'ಸಲಾರ್' ಸಿನಿಮಾದ 2ನೇ ಟ್ರೇಲರ್ ರಿಲೀಸ್‌ಗೆ ಕ್ಷಣಗಣನೆ ಶುರುವಾದ ಸಮಯದಲ್ಲೇ ಭಾರಿ ಸಂಚಲನ ಸೃಷ್ಟಿಯಾಗಿದೆ!

ಹೌದು, ನಿಮಗೆಲ್ಲಾ ಗೊತ್ತಿರುವಂತೆ ಕನ್ನಡ ಸಿನಿಮಾ ರಂಗವನ್ನು ಜಾಗತಿಕ ಮಟ್ಟದಲ್ಲೂ ಮಿಂಚುವಂತೆ ಮಾಡಿದ್ದು ರಾಕಿಂಗ್ ಸ್ಟಾರ್ ಯಶ್ & ಪ್ರಶಾಂತ್ ನೀಲ್ ಜೋಡಿ. ಇವರಿಬ್ಬರು ಸೇರಿ 'ಕೆಜಿಎಫ್-1' & 'ಕೆಜಿಎಫ್-2' ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಆದರೆ, ಇವರಿಬ್ಬರ ನಡುವೆ ಈಗ ಬಿರುಕು ಮೂಡಿದೆ ಅನ್ನೋ ಆರೋಪ ಕೇಳಿಬಂದಿದೆ. ಅದ್ರಲ್ಲೂ ಇತ್ತೀಚೆಗಷ್ಟೇ ಕೆಜಿಎಫ್-3 ಬಗ್ಗೆ, ಪ್ರಶಾಂತ್ ನೀಲ್ ಅವರು ಮಾತನಾಡುವಾಗ ಕೊಟ್ಟಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಹಾಗಾದರೆ ನಿಜವಾಗಿಯೂ ರಾಕಿಂಗ್ ಸ್ಟಾರ್ ಯಶ್ & ಪ್ರಶಾಂತ್ ನೀಲ್ ಸ್ನೇಹದಲ್ಲಿ ಬಿರುಕು ಮೂಡಿತಾ? ಮುಂದೆ ಓದಿ.

Countdown Begins For Salaar Trailer, But Social Media Started Discussion About KGF 3

ಭಲೇ ಜೋಡಿ ದೂರವಾದರಾ?

ಯಶ್ ಕೆಜಿಎಫ್ ಸಿನಿಮಾ ಸರಣಿ ನಂತರ ವರ್ಲ್ಡ್ ಲೆವೆಲ್ ಹೀರೋ ಆಗಿ ಬೆಳೆದರೆ, ಸ್ಟಾರ್ ಡೈರೆಕ್ಟರ್ ಆಗಿ ಬೆಳೆದು ನಿಂತರು ಪ್ರಶಾಂತ್ ನೀಲ್. ಹೀಗಿದ್ದಾಗಲೇ 'ಕೆಜಿಎಫ್-2' ನಂತರ ರಾಕಿಂಗ್ ಸ್ಟಾರ್ ಯಶ್ & ಪ್ರಶಾಂತ್ ನೀಲ್ ಸ್ನೇಹದಲ್ಲಿ ಬಿರುಕು ಮೂಡಿದೆ, ಇದೇ ಕಾರಣಕ್ಕೆ 'ಕೆಜಿಎಫ್-3' ಕೂಡ ಇನ್ನೂ ಸೆಟ್ಟೇರಿಲ್ಲ. ಹಾಗೇ, ಹೀಗೆ ಎಂಬ ಚರ್ಚೆಗಳು ಜೋರಾಗಿವೆ. ಹಾಗಾದರೆ ಈಗ ಹಬ್ಬಿರುವ ಗಾಳಿ ಸುದ್ದಿಗಳು ನಿಜಾನಾ? ಸೋಷಿಯಲ್ ಮೀಡಿಯಾ ಮಂದಿ ಮಾತನಾಡುತ್ತಿರುವ ಮಾತುಗಳಿಗೆ ಅರ್ಥ ಇದೆಯಾ?

ಇಲ್ಲ ಇಲ್ಲ.. ಎಲ್ಲಾ ಸುಳ್ಳು!

ಅಂದಹಾಗೆ ಸೋಷಿಯಲ್ ಮೀಡಿಯಾದಲ್ಲಿ ಏನೆಲ್ಲಾ ಚರ್ಚೆಗಳು ನಡೆದರೂ, ಪ್ರಶಾಂತ್ ನೀಲ್ ಹಾಗೂ ಯಶ್ ಅವರ ಸಂಬಂಧ ಹಾಳಾಗಲು ಸಾಧ್ಯವೇ ಇಲ್ಲ ಅಂತಾ ಅಭಿಮಾನಿಗಳು ವಾದ ಮಾಡುತ್ತಿದ್ದಾರೆ. ಅಷ್ಟಕ್ಕೂ ಇದು ನಿಜ ಕೂಡ. ಇಬ್ಬರೂ ಬೇರೆ ಬೇರೆ ಸಿನಿಮಾದಲ್ಲಿ ಬ್ಯುಸಿಯಾದ ಹಿನ್ನೆಲೆ ಇಂತಹ ಚರ್ಚೆಗಳನ್ನ ಅಥವಾ ಗಾಸಿಪ್‌ನ ಬೇಕು ಅಂತಲೇ ಕೆಲವರು ಹುಟ್ಟು ಹಾಕುತ್ತಿದ್ದಾರೆ ಎಂಬ ಆರೋಪ ಇದೆ. ಹೀಗಿದ್ರೂ ಇಬ್ಬರೂ ಕನ್ನಡಿಗರು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಒಂದು ಕಡೆ 'ಸಲಾರ್' ಮೂಲಕ ಪ್ರಶಾಂತ್ ನೀಲ್, ಇನ್ನೊಂದು ಕಡೆ 'ಟಾಕ್ಸಿಕ್' ಮೂಲಕ ಯಶ್ ಹಲ್‌ಚಲ್ ಎಬ್ಬಿಸಿದ್ದಾರೆ.

'ಕೆಜಿಎಫ್-3'ಗೆ ಒಂದಾಗುತ್ತಾ ಈ ಜೋಡಿ?

ಇನ್ನು ಈಗಿರುವ ಮಾಹಿತಿಗಳ ಪ್ರಕಾರ 'ಕೆಜಿಎಫ್-3' ಬರೋದು ಗ್ಯಾರಂಟಿ, ಇದಕ್ಕೋಸ್ಕರ ಪ್ರಶಾಂತ್ ನೀಲ್ ಕಥೆಯನ್ನ ಕೂಡ ಸಿದ್ಧಮಾಡಿ ಇಟ್ಟುಕೊಂಡಿದ್ದಾರೆ. ಆದರೆ ನಿರ್ದೇಶನದ ಜವಾಬ್ದಾರಿ ಯಾರು ವಹಿಸಲಿದ್ದಾರೆ? ಅನ್ನೋದು ಮಾತ್ರ ಇನ್ನೂ ಕನ್ಫರ್ಮ್ ಆಗಿಲ್ಲ. ಇದು ಕುತೂಹಲ ಕೆರಳಿಸಿದೆ. ಆದ್ರೆ ಕೋಟ್ಯಂತರ ಅಭಿಮಾನಿಗಳು ಮಾತ್ರ 'ಕೆಜಿಎಫ್-3' ಸಿನಿಮಾ ನೋಡಲು ಕುತೂಹಲದಿಂದ ಕಾಯ್ತಿದ್ದಾರೆ. ಅವರ ಆಸೆ ಇನ್ನೂ ಕೆಲವೇ ವರ್ಷದಲ್ಲಿ ನಿಜ ಕೂಡ ಆಗುವ ನಿರೀಕ್ಷೆ ಇದೆ.

ಒಟ್ನಲ್ಲಿ ರಾಕಿಂಗ್ ಸ್ಟಾರ್ ಯಶ್ ಆಗಲಿ ಅಥವಾ ಪ್ರಶಾಂತ್ ನೀಲ್ ಆಗಲಿ, ಈ ಇಬ್ಬರೂ ಕನ್ನಡಗರು ಕನ್ನಡ ನೆಲದ ಹೆಮ್ಮೆ. ಯಾಕಂದ್ರೆ ಕರ್ನಾಟಕ ಮೂಲದ ಇಬ್ಬರೂ ಜಾಗತಿಕ ಸಿನಿಮಾ ರಂಗದಲ್ಲಿ ಮಿಂಚು ಹರಿಸುತ್ತಿದ್ದಾರೆ. ಅದರಲ್ಲೂ ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಶಾಂತ್ ನೀಲ್ ಅವರ ಡೈರೆಕ್ಷನ್‌ನ 'ಸಲಾರ್' ಸಿನಿಮಾ ಟ್ರೇಲರ್ ರಿಲೀಸ್ ಆಗಲಿದೆ. ಈ ಮೂಲಕ ಹೊಸ ದಾಖಲೆ ಬರೆಯಲು ಪ್ರಶಾಂತ್ ನೀಲ್ ಸಜ್ಜಾಗಿದ್ದಾರೆ. ಇನ್ನೊಂದು ಕಡೆ, ನಟ ರಾಕಿಂಗ್ ಸ್ಟಾರ್ ಯಶ್ ಅವರು ಕೆಲ ದಿನಗಳ ಹಿಂದಷ್ಟೇ, ತಮ್ಮ 19ನೇ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟು ಮಿಂಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+