ಲಕ್ಷ್ಮೀ ನಿವಾಸ ಧಾರಾವಾಹಿ ನಟನ ಬದುಕಲ್ಲಿ ಬಿರುಗಾಳಿ: ಅಷ್ಟಕ್ಕೂ ಆಗಿದ್ದೇನು?
ಬೆಂಗಳೂರು, ಏಪ್ರಿಲ್ 01: ಇತ್ತೀಚಿನ ದಿನಗಳಲ್ಲಿ ಒಂದೇ ಕ್ಷೇತ್ರದಲ್ಲಿ ಇದ್ದವರು ಪ್ರೀತಿಸಿ ಮದುವೆಯಾಗುವುದು ತೀರಾ ಸಾಮಾನ್ಯವಾಗಿದೆ. ತಮ್ಮ ಕೆಲಸದ ಬಗ್ಗೆ ಪರಸ್ಪರ ತಿಳಿದಿರುತ್ತದೆ. ಕೆಲಸದ ಒತ್ತಡ ಹಾಗೂ ಆಗು ಹೋಗುಗಳ ಬಗ್ಗೆ ಅರ್ಥವಾಗುತ್ತದೆ. ಹೀಗಿದ್ದಾಗ ಸಂಸಾರದಲ್ಲಿ ಹೊಂದಾಣಿಕೆ ಇರುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಮದುವೆಯಾಗುತ್ತಾರೆ. ಅದರಲ್ಲೂ ಮನೋರಂಜನಾ ಕ್ಷೇತ್ರದಲ್ಲಿ ಅನೇಕ ನಟ-ನಟಿಯರು ಪ್ರೀತಿಸಿ ಮದುವೆಯಾಗಿದ್ದಾರೆ. ಇದೇ ರೀತಿ ಪ್ರೀತಿಸಿ ಮದುವೆಯಾದ ನಟ-ನಟಿಯ ಜೀವನದಲ್ಲಿ ಇದೀಗ ಬಿರುಗಾಳಿ ಎದ್ದಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಅಭಿನಯಿಸಿದ್ದ ನಟ ಮಿಥುನ್ ಕುಮಾರ್ ಎನ್ನುವವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ನಟನ ಪತ್ನಿಯೂ ಕೂಡ ನಟಿಯಾಗಿದ್ದು, ಇದೀಗ ವಿರುದ್ಧ ತಮ್ಮ ಪತಿಯ ವಿರುದ್ಧ ಮಾನಸಿಕ ಹಿಂಸೆ ನೀಡಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.

ಇತ್ತ ಪತ್ನಿ ದೂರು ದಾಖಲಿಸುತ್ತಿದ್ದಂತೆ ನಟ ಮಿಥುನ್ ಕುಮಾರ್ ಕೂಡ ಪತ್ನಿಯ ವಿರುದ್ಧ ಪ್ರತಿದೂರು ದಾಖಲಿಸಿದ್ದು, ಪತ್ನಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ನಟ ಮಿಥುನ್ ಕುಮಾರ್ ಆರೋಪಿಸಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಅಭಿನಯಿಸಿದ್ದ ನಟ ಮಿಥುನ್ ಕುಮಾರ್ 2024ರ ಅಕ್ಟೋಬರ್ 7ರಂದು ಧಾರಾವಾಹಿ ನಟಿಯ ಜೊತೆ ಪ್ರೀತಿಸಿ ಮದುವೆಯಾಗಿದ್ದರು. ಆರು ತಿಂಗಳು ಸುಂದರ ದಾಂಪತ್ಯ ನಡೆಸಿದ್ದ ಈ ಜೋಡಿಯ ಮಧ್ಯೆ ಬಳಿಕ ಕಲಹ ಆರಂಭವಾಗಿದೆ. ನನ್ನ ಗಂಡ ಕೆಲ ದಿನಗಳು ಮಾತ್ರ ಚೆನ್ನಾಗಿ ನೋಡಿಕೊಂಡಿದ್ದರು. ಬಾಡಿಗೆ ಮನೆ ಸಹ ಮಾಡಿದ್ದರು. ಅದಾಗ ಮೇಲೆ ಅವರ ವರ್ತನೆಯಲ್ಲಿ ಬದಲಾವಣೆಯಾಗಿದೆ.

ಗೆಳೆಯ ಆಸ್ಪತ್ರೆಯಲ್ಲಿದ್ದಾನೆ ಎಂದು ಮನೆಯಿಂದ ಹೋದವರು ಒಂದು ವಾರ ಕಳೆದರೂ ಮನೆಗೆ ಬಂದಿಲ್ಲ. ನನ್ನ ಫೋನ್ ಕರೆಗಳನ್ನು ಎತ್ತುವುದಿಲ್ಲ. ಹೀಗೆ ಅನೇಕ ಸಮಯ ದೂಡಿದ್ದಾರೆ. ಬಳಿಕ ವಿಚಾರಿಸದಾಗ ಅವರಿಗೆ ಬೇರೆ ಹುಡುಗಿಯ ಜೊತೆ ಸಂಬಂಧ ಇರುವ ಬಗ್ಗೆ ನನಗೆ ತಿಳಿದು ಬಂದಿದೆ. ಅದನ್ನು ಪ್ರಶ್ನಿಸಿದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ವಿಪರೀತ ಕುಡಿದು ಬಂದು ಮನಬಂದಂತೆ ಹಲ್ಲೆ ಮಾಡಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನನಗೆ ಮಾನಸಿಕ ಹಿಂಸೆ ನೀಡುತ್ತಾರೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
ನಟ ಮಿಥುನ್ ಕುಮಾರ್ ಪ್ರತಿದೂರಿನಲ್ಲಿ ಏನಿದೆ?
ನನ್ನ ಪತ್ನಿಗೆ ನನ್ನ ಮೇಲೆ ಅನುಮಾನ. ನನ್ನ ಸಹ ನಟಿಯ ಜೊತೆ ಸಂಬಂಧ ಇದೆ ಎಂದು ಅನುಮಾನ ಪಡುತ್ತಾರೆ. ನನಗೂ ಮತ್ತು ಆ ಸಹನಟಿಗೂ ಯಾವುದೇ ಸಂಬಂಧ ಇಲ್ಲ. ನಾವಿಬ್ಬರು ಸಹದ್ಯೋಗಿಗಳಾಗಿ ನಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದೇವೆ. ಆದರೆ ನನ್ನ ಪತ್ನಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾಳೆ. ಆಕೆಯಿಂದ ನನಗೆ ಮಾನಸಿಕೆ ಹಿಂಸೆಯಾಗಿದೆ ಎಂದು ನಟ ಆರೋಪಿಸಿದ್ದಾರೆ. ಈ ಪ್ರಕರಣ ಸಂಬಂಧ ವಿಜಯನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.












Click it and Unblock the Notifications