"ಭರ್ಜರಿ ಬ್ಯಾಚುಲರ್ಸ್" ರಮೋಲಾ ವಿರುದ್ಧ ದೂರು ದಾಖಲು; ರಕ್ಷಕ್ ಬುಲೆಟ್ ಗೆಳತಿ ಮಾಡಿದ್ದೇನು?
ಇತ್ತೀಚೆಗಷ್ಟೇ ಮುಕ್ತಾಯಗೊಂಡ "ಭರ್ಜರಿ ಬ್ಯಾಚುಲರ್ಸ್" ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್ ಹಾಗೂ ರಮೋಲಾ ಜೋಡಿ ರನ್ನರ್ ಅಪ್ ಆಗಿ ಗಮನ ಸೆಳೆದಿತ್ತು. ಈ ಕಾರ್ಯಕ್ರಮದಲ್ಲಿ ರಕ್ಷಕ್-ರಮೋಲಾ ಜೋಡಿ ಮೋಡಿ ಮಾಡಿತ್ತು. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಇದಾದ ಬಳಿಕ ರಕ್ಷಕ್ ಅವರು ನಟ ಪ್ರಥಮ್‌ಗೆ ಜೀವಬೆದರಿಕೆ ಕೇಸ್‌ನಲ್ಲಿ ಸಿಲುಕಿಕೊಂಡಿದ್ದರು. ಇದೀಗ ರಮೋಲಾ ವಿರುದ್ಧ ದೂರು ನೀಡಲಾಗಿದ್ದು, ಗಂಭೀರ ಆರೋಪ ಕೇಳಿಬಂದಿದೆ. ರಕ್ಷಕ್ ಬಳಿಕ ಈಗ ರಮೋಲಾ ಕೂಡ ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ.
ರಮೋಲಾ ಭರ್ಜರಿ ಬ್ಯಾಚುಲರ್ಸ್ ಶೋ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಫೈನಲ್‌ವರೆಗೆ ತಲುಪಿ, ರನ್ನರ್ ಅಪ್ ಕೂಡ ಆಗಿದ್ದರು. ಇನ್ನು ರಮೋಲಾ ಅವರ ಬೆಲ್ಲಿ ಡ್ಯಾನ್ಸ್‌ಗೆ ದೊಡ್ಡ ಅಭಿಮಾನಿಗಳವೇ ಇದೆ. ಈ ಹಿನ್ನೆಲೆ ಅವರಿಗೆ ಅವಕಾಶಗಳು ಕೂಡ ಅರಸಿ ಬರುತ್ತಿವೆ. ಎಲ್ಲವೂ ಚೆನ್ನಾಗಿತ್ತು ಎನ್ನುವ ಹೊತ್ತಿಗೆ ರಮೋಲಾಗೆ ದೊಡ್ಡ ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ದೂರು ಕೂಡ ನೀಡಲಾಗಿದೆ.

ಕನ್ನಡ ಕಿರುತೆರೆ ನಟಿ ರಮೋಲಾ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿದ್ದರು. ಇದರಿಂದ ಜನಪ್ರಿಯತೆ ಪಡೆದ ರಮೋಲಾ ಭರ್ಜರಿ ಬ್ಯಾಚುಲರ್ಸ್ ಮೂಲಕ ಮತ್ತಷ್ಟು ಫೇಮಸ್ ಆಗಿದ್ದರು. ಇದರೊಂದಿಗೆ ಹೀರೋಯಿನ್ ಆಗಿ ಎಂಟ್ರಿ ಕೊಡಲು ರಮೋಲಾ ಸಜ್ಜಾಗಿದ್ದು, ಈ ಹೊತ್ತಲ್ಲೇ ಅವರು ವಿರುದ್ಧ ಈಗ ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಾಗಿದೆ.
ನಟಿ ರಮೋಲಾ ಅವರು "ರಿಚ್ಚಿ" ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಹಲವು ಸಮಯದ ಹಿಂದೆಯೇ ಸೆಟ್ಟೇರಿದೆ. ಇದೇ ಸಿನಿಮಾ ವಿಚಾರವಾಗಿ ರಮೋಲಾ ವಿರುದ್ಧ ದೂರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಕೆಯಾಗಿದೆ. ಈ ಸಿನಿಮಾದ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕರು ರಮೋಲಾ ವಿರುದ್ಧ ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದಾರೆ. ರಿಚ್ಚಿ ಸಿನಿಮಾದಲ್ಲಿ ರಮೋಲಾ ನಾಯಕಿಯಾಗಿ ನಟಿಸಿದ್ದು, ಈ ಸಿನಿಮಾ ರಿಲೀಸ್ ಮಾಡಲು ಪ್ರಮೋಷನ್ಗೆ ರಮೋಲಾ ಬರುತ್ತಿಲ್ಲ, ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಎಂದು ಆರೋಪಿದ್ದಾರೆ. ಹೀಗಾಗಿ ರಮೋಲಾ ಸಿನಿಮಾ ಪ್ರಚಾರಕ್ಕೆ ಬನ್ನಿ ಎಂದರೆ ಬರುತ್ತಿಲ್ಲ ಎಂದು ನಿರ್ಮಾಪಕ ಹೇಮಂತ್ ರಿಚ್ಚಿ ಫಿಲ್ಮ್ ಚೇಂಬರ್ಗೆ ದೂರು ಕೊಟ್ಟಿದ್ದಾರೆ.
ರಮೋಲಾ ಅವರದ್ದೇ ಮುಖ್ಯ ಪಾತ್ರ
ನಮ್ಮ ಸಿನಿಮಾದಲ್ಲಿ ಇಬ್ಬರು ನಾಯಕಿಯರು, ಇದರಲ್ಲಿ ರಮೋಲಾ ಕೂಡ ಒಬ್ಬರು. ರಮೋಲಾ ಅವರೇ ಮುಖ್ಯ ಪಾತ್ರದಲ್ಲಿದ್ದಾರೆ. ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣಲು ಪ್ರಚಾರದ ಅಗತ್ಯವಿದೆ. ಹಾಗಾಗಿ ಪ್ರಚಾರಕ್ಕೆ ಬಂದು ಸಿನಿಮಾಗೆ ಸಪೋರ್ಟ್ ಮಾಡಿ ಎಂದು ಹಲವು ಬಾರಿ ಫೋನ್ ಮಾಡಿದ್ದೆವು. ಆದರೆ ರಮೋಲಾ ಯಾವ ರೀತಿಯಲ್ಲೂ ಸ್ಪಂದಿಸಲಿಲ್ಲ. ನಾವು ಸಾಲ ಮಾಡಿ ಸಿನಿಮಾ ಮಾಡಿದ್ದೇವೆ. ಸಿನಿಮಾದಲ್ಲಿ ನಟಿಸಿದ ಮೇಲೆ ಪ್ರಚಾರಕ್ಕೆ ಬರುವುದು ಅವರ ಜವಾಬ್ದಾರಿ ಎಂದು ನಿರ್ಮಾಪಕ ಹೇಮಂತ್ ರಿಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಒಂದು ಸಿನಿಮಾ ಗೆದ್ದರೆ ಹಲವರಿಗೆ ಕೆಲಸ ಸಿಗುತ್ತೆ. ನಿರ್ಮಾಪಕ ಕೂಡ ಮತ್ತಷ್ಟು ಸಿನಿಮಾ ಮಾಡಲು ಪ್ರೇರೇಪಿಸುತ್ತೆ. ಆದರೆ ಕಲಾವಿದರು ಈ ರೀತಿ ನಡೆದುಕೊಂಡರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications