ನಟ ಮಡೆನೂರು ಮನುಗೆ ಸಿಕ್ತು ಜಾಮೀನು: ದರ್ಶನ್-ಶಿವಣ್ಣ ಫ್ಯಾನ್ಸ್ ಕಡೆಯಿಂದ ಕಾದಿದ್ಯಾ ಕಂಟಕ?
ಕಿರುತೆರೆ ನಟಿಗೆ ಕಿರುಕುಳ, ಅತ್ಯಾ*ಚಾರ ಕೇಸ್‌ನಲ್ಲಿ ಜೈಲು ಸೇರಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನುಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಕೇಸ್‌ನಲ್ಲಿ ಬಂಧನವಾಗಿದ್ದ ಮನು ಇಲ್ಲಿವರೆಗೆ ನ್ಯಾಯಾಂಗ ಬಂಧನದಲ್ಲಿದ್ದರು. ಇಂದು ಮಡೆನೂರು ಮನುಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇಂದು ಜಾಮೀನು ಸಿಕ್ಕಿರುವ ಹಿನ್ನೆಲೆ ನಾಳೆಯೇ (ಶನಿವಾರ) ಮನು ಪರಪ್ಪನ ಅಗ್ರಹಾರದಿಂದ ಬಿಡುಗಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡದ ಖ್ಯಾತ ಕಿರುತೆರೆ ರಿಯಾಲಿಟಿ ಶೋ ಕಾಮಿಲಿ ಕಿಲಾಡಿಗಳು ವಿನ್ನರ್ ಆಗಿದ್ದ ಮಡೆನೂರು ಮನು, ಇತ್ತೀಚೆಗಷ್ಟೇ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಎಂಟ್ರಿ ನೀಡಿದ್ದರು. ಆದರೆ ಸಿನಿಮಾ ರಿಲೀಸ್‌ಗೂ ಒಂದು ದಿನ ಮುನ್ನವೇ ಮನು ವಿರುದ್ಧ ನಟಿ ಅತ್ಯಾ*ಚಾರ ಆರೋಪ ಮಾಡಿದ್ದರು. ಈ ಹಿನ್ನೆಲೆ ಮನು ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಕಸ್ಟಡಿ ವಿಚಾರಣೆ ನಡೆಸಿ, ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಹಾಗಾಗಿ ಮನು ಅವರನ್ನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಮನು ಮೇಲೆ ನಟಿ ಗಂಭೀರ ಆರೋಪಗಳನ್ನ ಮಾಡಿದ್ದರಿಂದ ಹಲವು ವಿಡಿಯೋಗಳು ಹರಿದಾಡಿದ್ದವು. ಈ ಕೇಸ್ ದಿನಕ್ಕೊಂದು ತಿರುವು ಪಡೆದಿತ್ತು. ಮನು ಮೇಲೆ ದಿನಕ್ಕೊಂದು ಆರೋಪ ಕೇಳಿಬಂದಿದ್ದರಿಂದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದರು. ಮನು ಅರೆಸ್ಟ್ ಆಗುತ್ತಿದ್ದಂತೆಯೇ ಕೆಲ ಆಡಿಯೋ ತಣುಕುಗಳು ವೈರಲ್ ಆಗಿತ್ತು. ಸಂತ್ರಸ್ತ ಮಹಿಳೆಗೆ ಮನು ತಾಳಿ ಕಟ್ಟಿರುವುದಾಗಿ ಮನು ಹೇಳಿಕೊಂಡಿದ್ದು, ಆಕೆ ತನ್ನ 2ನೇ ಪತ್ನಿ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಕೂಡ ಮನು ಹೇಳಿರುವುದು ಕೂಡ ಆಡಿಯೋದಲ್ಲಿತ್ತು.
ಜೈಲು ಸೇರಿದ್ದ ಮನು ಈ ನಡುವೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಮನುಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ ಮೊದಲ ಸಿನಿಮಾ ರಿಲೀಸ್ ಆಗುವ ಹೊತ್ತಿಗೆ ಈ ಕೇಸ್ ವಿವಾದದಿಂದ ವಿಘ್ನ ಎದುರಾಗಿದೆ. ಸ್ಯಾಂಡಲ್‌ವುಡ್ ನಟರ ಬಗ್ಗೆ ಅವಹೇಳಕಾರಿ ಹೇಳಿಕೆ ಆಡಿಯೋ ವೈರಲ್ ಆಗಿದ್ದರಿಂದ ಮನು ಅವರನ್ನು ಸದ್ಯ ಸ್ಯಾಂಡಲ್‌ವುಡ್ ಹಾಗೂ ಕನ್ನಡ ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ.
ಮನು ಮೇಲಿನ ಬ್ಯಾನ್ ತೆರವಾಗುತ್ತಾ?
ಕನ್ನಡ ನಟರಾದ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಬಗ್ಗೆ ಮನು ಮಾತನಾಡಿರುವುದು ಎನ್ನಲಾದ ಆಡಿಯೋ ಕೂಡ ಸಂಚಲನ ಸೃಷ್ಟಿಸಿತ್ತು. ದರ್ಶನ್ ಸಾಯ್ತಾರೆ, ಸಿನಿಮಾ ಮಾಡಲ್ಲ, ಶಿವರಾಜ್‌ಕುಮಾರ್ ಕೂಡ ಇನ್ನೊಂದು ಆರು ವರ್ಷದಲ್ಲಿ ಸಾಯ್ತಾರೆ, ಧ್ರುವ ಸರ್ಜಾ ಇನ್ನು ಕೆಲವೇ ವರ್ಷ, ಈ ಮೂವರಿಗೆ ಟಫ್ ಕಾಂಪಿಟೇಷನ್ ಕೊಡಲು ಬಂದಿರೋ ಗಂಡುಗಲಿ ನಾನು ಎಂದು ಆಡಿಯೋದಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆ ಮನು ವಿರುದ್ಧ ಶಿವಣ್ಣ, ದರ್ಶನ್ ಅಭಿಮಾನಿಗಳು ಗರಂ ಆಗಿದ್ದಲ್ಲದೆ, ಮನುನ ಬ್ಯಾನ್ ಮಾಡುವಂತೆ ಕರ್ನಾಟಕ ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟಿದ್ದರು.
ಈ ಬಗ್ಗೆ ವಿಶೇಷ ಸಭೆ ಕರೆದಿದ್ದ ಚಿತ್ರರಂಗದ ಪ್ರಮುಖರು, ಈ ಆರೋಪಗಳ ಹಿನ್ನೆಲೆ ಮನು ಅವರನ್ನ ದೂರ ಇಡಲು ನಿರ್ಧರಿಸಿರುವುದಾಗಿ ಹೇಳಿದ್ದರು. ಅಲ್ಲದೆ ನಟರ ಸಾವಿನ ಬಗ್ಗೆ ಮಾತನಾಡಿರುವುದರಿಂದ ಅವರ ಅಭಿಮಾನಿಗಳು ಕೂಡ ಗರಂ ಆಗಿದ್ದಾರೆ. ಮನು ಜೈಲಿನಿಂದ ಹೊರಬಂದ ಮೇಲೆ ತನ್ನ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.












Click it and Unblock the Notifications