ಚಿಕ್ಕಣ್ಣ ಮೊದಲ ಸಿನಿಮಾದಲ್ಲೇ 10 ಕೋಟಿ ರೂಪಾಯಿ ಕಲೆಕ್ಷನ್?

ಜೀವನದಲ್ಲಿ ಹಲವು ಸವಾಲು ಎದುರಿಸಿ ಗೆದ್ದು ಬೀಗಿರುವ ಕನ್ನಡಿಗರ ಪ್ರೀತಿಯ ನಟರಾದ ಚಿಕ್ಕಣ್ಣ ಮೊದಲ ಸಿನಿಮಾದಲ್ಲೇ ಬಂಪರ್ ಬಾರಿಸಿದ್ದಾರೆ. 'ಉಪಾಧ್ಯಕ್ಷ' ಸಿನಿಮಾ ರಿಲೀಸ್ ಆಗಿ 2 ವಾರಕ್ಕೆ ಬರೋಬ್ಬರಿ ದಾಖಲೆ ಮೊತ್ತದ ಕಲೆಕ್ಷನ್ ಮಾಡಿದೆಯಂತೆ. ಹಾಗಾದರೆ ಈ ಸಿನಿಮಾ ಅಂದ್ರೆ ಚಿಕ್ಕಣ್ಣ ಹೀರೋ ಆದ ಮೊದಲ ಸಿನಿಮಾ 'ಉಪಾಧ್ಯಕ್ಷ' ಗಳಿಸಿರುವುದೆಷ್ಟು ಕೋಟಿ ರೂಪಾಯಿ ಗೊತ್ತೆ?

ಕನ್ನಡಿಗರ ನಿರೀಕ್ಷೆಗಳನ್ನು ಕೆರಳಿಸಿ, ಇದೇ ಜನವರಿ 26ರ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದ್ದ 'ಉಪಾಧ್ಯಕ್ಷ' ಸಿನಿಮಾ ಹಲವು ದಾಖಲೆಗಳನ್ನ ಪುಡಿಪುಡಿ ಮಾಡಿದೆ. ಅದರಲ್ಲೂ ಚಿಕ್ಕಣ್ಣನ ನಟನೆಗೆ ಹಾಗೂ ಹೀರೋ ಆಗಿ ಎಂಟ್ರಿ ಕೊಟ್ಟಿರುವ ಈ ನಟನಿಗೆ ಕನ್ನಡಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹೀಗಾಗಿ ಬಾಕ್ಸ್ ಆಫಿಸ್‌ನಲ್ಲಿ ಈ ಚಿತ್ರ ಭರ್ಜರಿ ಮೊತ್ತ ಗಳಿಕೆ ಮಾಡಿದೆ. ಹಾಗಾದರೆ 'ಉಪಾಧ್ಯಕ್ಷ' ಸಿನಿಮಾ ಈವರೆಗೂ ಗಳಿಸಿದ ಹಣ ಎಷ್ಟು ಕೋಟಿ ರೂಪಾಯಿ? ಮುಂದೆ ಓದಿ.

Chikkanna Starrer Kannada Movie Upadhyaksha Collects A Big Amount In Box Office

ಕನ್ನಡ ಸಿನಿ ರಂಗಕ್ಕೆ ಮತ್ತೊಬ್ಬ ಹೀರೋ ಸಿಕ್ಕಾಗಿದೆ, ಇಷ್ಟು ದಿನ ಕಾಮಿಡಿ ಪಂಚ್ ಮೂಲಕವೇ ಕನ್ನಡಿಗರ ಮನಸ್ಸಿಗೆ ಹತ್ತಿರವಾಗಿದ್ದ ಚಿಕ್ಕಣ್ಣ ಹೀರೋ ಆಗಿ ಕೂಡ ಗೆದ್ದು ಬೀಗಿದ್ದಾರೆ. ಚಿಕ್ಕಣ್ಣ ಅವರ ಮೊದಲ ಸಿನಿಮಾ 'ಉಪಾಧ್ಯಕ್ಷ' ಬಿಡುಗಡೆಯಾಗಿ 2 ವಾರಕ್ಕೆ ಸುಮಾರು 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನುವ ಮಾತು ಓಡಾಡುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ಹೀಗಿದ್ದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಉಪಾಧ್ಯಕ್ಷ ಚಿತ್ರ ಎಷ್ಟು ಗಳಿಸಿದೆ ಎಂಬುದರ ಬಗ್ಗೆ ಚರ್ಚೆಯು ಜೋರಾಗಿದೆ. ಈಗಲೂ ಈ ಸಿನಿಮಾ ಹತ್ತಾರು ಚಿತ್ರ ಮಂದಿರದಲ್ಲಿ ಹೌಸ್‌ಫುಲ್ ಪ್ರದರ್ಶನ್ ಕಾಣುತ್ತಿದೆ.

10 ವರ್ಷಗಳ ಬಳಿಕ ಸಕ್ಸಸ್!

2014ರಲ್ಲಿ ನಟ ಚಿಕ್ಕಣ್ಣ & ಶರಣ್ ಅವರ ಕಾಂಬಿನೇಷನ್ ಸಿಕ್ಕಾಪಟ್ಟೆ ಸಕ್ಸಸ್ ಕೊಟ್ಟಿತ್ತು ಅಧ್ಯಕ್ಷ ಸಿನಿಮಾದ ಮೂಲಕ ಇಬ್ಬರೂ ಭರ್ಜರಿ ಸಕ್ಸಸ್ ಪಡೆದಿದ್ದರು. ಹೀಗೆ ಅಧ್ಯಕ್ಷ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಸಕ್ಸಸ್ ಪಡೆದಿತ್ತು. ಇದೀಗ 10 ವರ್ಷಗಳ ನಂತರ 'ಅಧ್ಯಕ್ಷ' ಸಿನಿಮಾ ಮುಂದುವರಿದ ಭಾಗ 'ಉಪಾಧ್ಯಕ್ಷ' ರಿಲೀಸ್ ಆಗಿ ಅಬ್ಬರಿಸಿದೆ. ಹಾಗೆಯೇ ಕಾಮಿಡಿ ಸ್ಟಾರ್ ಆಗಿದ್ದ ಚಿಕ್ಕಣ್ಣ ಹೀರೋ ಆಗಿ ಮಿಂಚುತ್ತಿದ್ದಾರೆ.

ಅಧ್ಯಕ್ಷ & ಉಪಾಧ್ಯಕ್ಷರ ಸಮ್ಮಿಲನ

ಶರಣ್ ಈಗ ಕನ್ನಡದ ಟಾಪ್ ಹೀರೋ ಪೈಕಿ ಒಬ್ಬರು ಅವರು ಕೂಡ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತು ಇದೆ. ಅದರಲ್ಲೂ ಶರಣ್ ಅವರು ಕನ್ನಡಿಗರ ಎದುರು ಹಲವು ಬ್ಲಾಕ್ ಬಸ್ಟರ್ ಸಿನಿಮಾ ಇಟ್ಟು ಗೆದ್ದಿದ್ದಾರೆ. ಇದೇ ನಟ ಗೆಳೆಯನ ಸಿನಿಮಾಗೆ, ಅಂದ್ರೆ ಚಿಕ್ಕಣ್ಣನ 'ಉಪಾಧ್ಯಕ್ಷ' ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. 'ಉಪಾಧ್ಯಕ್ಷ' ಚಿತ್ರದಲ್ಲಿ ಶರಣ್ ಅವರು ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟು, ಇಡೀ ಕ್ಲೈಮ್ಯಾಕ್ಸ್‌ಗೆ ಬಹು ದೊಡ್ಡ ಬದಲಾವಣೆ ನೀಡುತ್ತಾರೆ. ಈ ಪಾತ್ರಕ್ಕಾಗಿ ಶರಣ್ ಒಂದು ರೂಪಾಯಿ ಕೂಡ ಪಡೆದಿಲ್ಲ ಎನ್ನುವುದು ಮತ್ತೊಂದು ವಿಶೇಷ.

Chikkanna Starrer Kannada Movie Upadhyaksha Collects A Big Amount In Box Office

ಶರಣ್ ಉಪಾಧ್ಯಕ್ಷ ಸಿನಿಮಾದಲ್ಲಿ ಗೆಸ್ಟ್ ರೋಲ್‌ ಮಾಡುವ ಮೂಲಕ ತಮ್ಮ ಸ್ನೇಹಿತ ಚಿಕ್ಕಣ್ಣಗೆ ಉಡುಗೊರೆ ಕೊಟ್ಟಿದ್ದಾರೆ ಅಂತಿದ್ದಾರೆ ಫ್ಯಾನ್ಸ್. ಹೀಗಾಗಿ ಶರಣ್ ಅವರ ಈ ಕೊಡುಗೆ ಬಗ್ಗೆಯೂ ಭಾರಿ ಪ್ರಶಂಸೆ ಇದೀಗ ವ್ಯಕ್ತವಾಗುತ್ತಿದೆ. ಹಾಗೆ ಜನರು ಕೂಡ ಶರಣ್ & ಚಿಕ್ಕಣ್ಣ ಕಾಂಬಿನೇಷನ್ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಹೀರೋ ಆಗಿ ಮೊದಲ ಪ್ರಯತ್ನದಲ್ಲೇ ಭರ್ಜರಿ ಗೆಲುವು ದಾಖಲಿಸಿದ್ದಾರೆ ನಟ ಚಿಕ್ಕಣ್ಣ. ಒಟ್ನಲ್ಲಿ ಈ ಮೂಲಕ ದೊಡ್ಡ ಗೆಲುವನ್ನು ಕಂಡಿರುವ ನಟ ಚಿಕ್ಕಣ್ಣ ತಮ್ಮ ಮುಂದಿನ ಸಿನಿಮಾಗಳಿಗೆ ತಯಾರಿ ಆರಂಭಿಸಿದ್ದಾರೆ. ಈ ಮಧ್ಯೆ ಹೀರೋ ಆಗಿ ಮಾತ್ರವಲ್ಲ, ಮೊದಲಿನ ರೀತಿ ಕಾಮಿಡಿ ಪಾತ್ರಗಳನ್ನು ಕೂಡ ಈ ನಟ ನಿರ್ವಹಿಸಲು ರೆಡಿ ಇದ್ದಾರಂತೆ. ಇದೇ ಕಾರಣಕ್ಕೆ ಚಿಕ್ಕಣ್ಣ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+