Get Updates
Get notified of breaking news, exclusive insights, and must-see stories!

Rashmika Mandanna: 'ಛಾವಾ' ಚಿತ್ರದ ಐತಿಹಾಸಿಕ ಪಾತ್ರದಲ್ಲಿ ರಶ್ಮಿಕಾ: ನಟಿಯ ಬಗ್ಗೆ ವಿಕ್ಕಿ ಕೌಶಲ್ ಓಪನ್ ಟಾಕ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಇರುವ ನಟಿ ನ್ಯಾಷನಲ್ ಕ್ರಷ್ ಐತಿಹಾಸಿಕ ಸಿನಿಮಾ ಮಾಡುತ್ತಿದ್ದಾರೆ. ರಶ್ಮಿಕಾ ನಟ ವಿಕ್ಕಿ ಕೌಶಲ್‌ಗೆ ಜತೆಗೆ ಕಾಣಿಸಿಕೊಳ್ಳಲಿದ್ದಾರೆ. 'ಬ್ಯಾಡ್ ನ್ಯೂಸ್' ಸಿನಿಮಾದ ಹಾಡಿನಲ್ಲಿ 'ತೃಪ್ತಿ ದಿಮ್ರಿ' ಜತೆಗೆ ರೋಮ್ಯಾನ್ಸ್ ಮಾಡಿದ್ದ ವಿಕ್ಕಿ ಕೌಶಲ್ ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣಾ ಅವರ ಬಗ್ಗೆ ಮಾತನಾಡಿದ್ದರು. ಇದೀಗ ಇವರಿಬ್ಬರ ಸಿನಿಮಾ ಸಿದ್ಧವಾಗುತ್ತಿದೆ.

ಹೌದು, ನಟ ವಿಕ್ಕಿ ಕೌಶಲ್ (Vicky Kaushal) ಹಾಗೂ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಶೀಘ್ರದಲ್ಲೇ ಐತಿಹಾಸಿಕ 'ಛಾವಾ' (Chhava film) ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಹಿಂದೂ ಹುಲಿ ಛತ್ರಪತಿ ಶಿವಾಜಿ ಮಹಾರಾಜರ ಕುಟುಂಬ ಆಧಾರಿತ ಸಿನಿಮಾ ಇದಾಗಿದೆ.

Chhava Film Actor Vicky Kaushal says on Actress Rashmika Mandanna and She Show hearts in 56 ways

ಐತಿಹಾಸಿಕ ಪಾತ್ರದಲ್ಲಿ ವಿಕ್ಕಿ-ರಶ್ಮಿಕಾ

ಚಿತ್ರದಲ್ಲಿ ಶಿವಾಜಿ ಪುತ್ರ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ಕಾಣಿಸಿಕೊಂಡರೆ, ನಟಿ ರಶ್ಮಿಕಾ ಮಂದಣ್ಣ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ನಟಿಸಲಿದ್ದಾರೆ. ಐತಿಹಾಸಿಕ ಸಿನಿಮಾದಲ್ಲಿ ತಮ್ಮ ನೆಚ್ಚಿನ ನಟಿ ರಶ್ಮಿಕಾರನ್ನು ಕಣ್ತುಂಬಿಕೊಳ್ಳಲು ಅವರ ಅಪಾರ ಅಭಿಮಾನಿಗಳು ಕಾತರರಾಗಿದ್ದಾರೆ.

56 ರೀತಿ ಹಾರ್ಟ್ ಸಂಕೇತ ತೋರಿಸಿದ್ದ ರಶ್ಮಿಕಾ ಒಬ್ಬರೇ

ಇತ್ತೀಚೆಗೆ ಸಂದರ್ಶನದಲ್ಲಿ ನಟ ವಿಕ್ಕಿ ಕೌಶಲ್ ಅವರು, ನಟಿ ರಶ್ಮಿಕಾರನ್ನು ಹೊಗಳಿ ಮಾತನಾಡಿದ್ದರು. ರಶ್ಮಿಕಾ 56 ರೀತಿಯಲ್ಲಿ ಹಾರ್ಟ್ ಸಿಂಬಾಲ್ ತೋರಿಸಿರುವ ಏಕೈಕ ವ್ಯಕ್ತಿ ಎಂದು ಅವರು ತಿಳಿಸಿದ್ದರು. ಅವರೊಂದಿಗೆ ನಾನು ಮೊದಲ ಬಾರಿಗೆ 'ಛಾವಾ' ಸಿನಿಮಾ ಮೂಲಕ ಒಟ್ಟಿಗೆ ನಟಿಸುತ್ತಿದ್ದೇವೆ. ಅವರು ಸೆಟ್ ನಲ್ಲಿ ತುಂಬಾ ಸಕಾರಾತ್ಮಕವಾಗಿ ಇರುತ್ತಾರೆ ಎಂದು ತಿಳಿಸಿದ್ದರು.

ರಶ್ಮಿಕಾ ಮಂದಣ್ಣ ಅವರು ಸಿನಿಮಾ ರಂಗದಲ್ಲಿ ನಟನೆ, ಸೌಂದರ್ಯ ಜೊತೆಗೆ ಅವರಲ್ಲಿನ ಪ್ರತಿಭೆ, ನಗುಮುಖ, ಅವರ ಗುಣಗಳಿಂದಲೇ ಅವರು ಅಭಿಮಾನಿಗಳಿಗೂ ಹತ್ತಿವಾಗಿದ್ದಾರೆ. ಹೀಗಾಗಿಯೇ ಅವರ ಅಭಿಮಾನಿಗಳು ನಟಿಯನ್ನು ಆರಾಧಿಸುತ್ತಾರೆ. ನಟಿ ಸಹ ಅಭಿಮಾನಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ರಶ್ಮಿಕಾ ತಮ್ಮ ಜೀವನ ಮತ್ತು ವೃತ್ತಿ ಜೀವನ ಪ್ರಮುಖ ಅಂಶಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ, ಅಪ್ಡೇಟ್ ಕೊಡುತ್ತಾರೆ ಎಂದರು.

Chhava Film Actor Vicky Kaushal says on Actress Rashmika Mandanna and She Show hearts in 56 ways

'ಛಾವಾ'ದಲ್ಲಿದೆ ದೊಡ್ಡ ತಾರಾಗಣ, ಪಾತ್ರಗಳ ಪರಿಚಯ

'ಛಾವಾ' ಎಂಬುದು ಛತ್ರಪತಿ ಶಿವಾಜಿ ಮಹಾರಾಜರ ಮಗ ಛತ್ರಪತಿ ಸಂಭಾಜಿ ಮಹಾರಾಜರ ಜೀವನದ ಸುತ್ತ ಸುತ್ತುವ ಐತಿಹಾಸಿಕ ಕತೆಯಾಗಿದೆ. ವಿಕ್ಕಿ ಕೌಶಲ್ ಮರಾಠ ಸಾಮ್ರಾಜ್ಯದ ಸಂಸ್ಥಾಪಕನ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರ ನಿರ್ವಹಿಸಲಿದ್ದಾರೆ. ರಶ್ಮಿಕಾ ಮಂದಣ್ಣ ಯೇಸುಬಾಯಿ ಭೋನ್ಸಾಲೆ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ.

ಚಿತ್ರದಲ್ಲಿ ಅಕ್ಷಯ್ ಖನ್ನಾ, ಅಶುತೋಷ್ ರಾಣಾ ಮತ್ತು ದಿವ್ಯಾ ದತ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಮೊಘಲ್ ರಾಜಕುಮಾರನ ಪಾತ್ರವನ್ನು ಚಿತ್ರಿಸಲು ನಟ ನೀಲ್ ಭೂಪಾಲಂ ಕೂಡ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇದೇ ವರ್ಷ 'ಛಾವಾ' ತೆರೆಗೆ ಬರಲು ಸಜ್ಜು

ಛಾವಾ ಸಿನಿಮಾವು ಇದೇ ವರ್ಷ ಡಿಸೆಂಬರ್ 6 ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ. ಛಾವಾ ಚಿತ್ರ ಹೊರತುಪಡಿಸಿ ವಿಕ್ಕಿ ಕೌಶಲ್ ಅವರು ಹಲವು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚೆಗೆ ಅವರ ಬ್ಯಾಡ್ ನ್ಯೂಸ್ ಸಿನಿಮಾದಲ್ಲಿ ತ್ರಿಪ್ತಿ ದಿಮ್ರಿ ಜತೆಗಿನ ರೋಮ್ಯಾನ್ಸ್ ಅನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದು, ರಶ್ಮಿಕಾ ಜೊತೆಗಿನ ಐತಿಹಾಸಿಕ ಸಿನಿಮಾಗಾಗಿ ವಿಕ್ಕಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಹಿಂದೆ ಜಾಹೀರಾತುವೊಂದರಲ್ಲಿ ವಿಕ್ಕಿ ಕೌಶಲ್ ಮತ್ತು ನಟಿ ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದರು. ಇದೀಗ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+