Rashmika Mandanna: ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ರಶ್ಮಿಕಾ, ಹೊಸ ಲುಕ್ ವೈರಲ್

ಬೆಂಗಳೂರು, ಜನವರಿ 21: ಕನ್ನಡದ ಕಿರಿಕ್ ಪಾರ್ಟಿ ಮೂಲಕ ಚೆಂದನವನಕ್ಕೆ ಕಾಲಿಟ್ಟ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣಾ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. 'ಅನಿಮಲ್', 'ಪಷ್ಪಾ' ಸರಣಿ ಸಿನಿಮಾಗಳ ಸಕ್ಸಸ್‌ನಲ್ಲಿದ್ದಾರೆ. ಮಂಗಳವಾರ ರಶ್ಮಿಕಾ ಹೊಸ ಸಿನಿಮಾದ ಸ್ಟಿಲ್ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿಗೆ ನಟಿ ರಶ್ಮಿಕಾ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಇದೇ ಮೊದಲ ಬಾರಿಗೆ ' ಮಹಾರಾಣಿ ಯೇಸುಭಾಯಿ' ಪಾತ್ರ ಹೇಗಿರುತ್ತದೆ ಎಂಬುದನ್ನು ರಿವೀಲ್ ಮಾಡಿದೆ.

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣಾಗೆ ಬಾಲಿವುಡ್, ಟಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳು ಇದ್ದಾರೆ. ನೆಚ್ಚಿನ ನಟಿ ರಶ್ಮಿಕಾ ಅವರ ಯೇಸುಭಾಯಿ ಪಾತ್ರದ ಫೋಟೋ ನೋಡಿ ಫುಲ್ ಖುಷ್ ಆಗಿದ್ದಾರೆ. ಹೌದು, ನಟಿ ರಶ್ಮಿಕಾ ಅವರು 'ಛಾವಾ' ಸಿನಿಮಾದಲ್ಲಿ 'ಯೇಸುಭಾಯಿ' ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಸಿನಿಮಾದ ನಾಯಕ ನಟ ವಿಕ್ಕಿ ಕೌಶಲ್ ಅವರೊಂದಿಗೆ ನಾಯಕಿಯಾಗಿ ಪ್ರಮುಖ ಐತಿಹಾಸಿಕ ಪಾತ್ರ ನಿರ್ವಹಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

Chhaava Film Actress Rashmika Mandanna s Role as Maharani Yesubai photo Released

ವಿಕ್ಕಿ ಕೌಶಲ್ ಹಿಂದು ಹುಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 05 ತೆರೆಗೆ ಬರಲು ಸಿದ್ಧವಾಗಿದ್ದ ಈ 'ಛಾವಾ' ಸಿನಿಮಾ ಕಾರಣಾಂತರಗಳಿಂದ ಮುಂದೂಡಿಕೆ ಆಯಿತು. ಇದೀಗ ಫೆಬ್ರವರಿ 14ರಂದು ಪ್ರೇಮಿಗಳ ದಿನಕ್ಕೆ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ.

ಪ್ರಚಾರದ ಭಾಗವಾಗಿ 'ಛಾವಾ' ಸಿನಿಮಾದಲ್ಲಿನ ನಟಿ ರಶ್ಮಿಕಾ ಪಾತ್ರ ಹೇಗಿರಲಿದೆ? ಕ್ಯೂಟ್ ಮತ್ತು ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ನಟಿ ರಶ್ಮಿಕಾ ಯೇಸುಭಾಯಿ ಪಾತ್ರದಲ್ಲಿ ಹೇಗೆ ಕಾಣಲಿದ್ದಾರೆ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಅದಕ್ಕೀಗ ತೆರೆ ಬಿದ್ದಿದೆ.

ರಶ್ಮಿಕಾ ಮಂದಣ್ಣ ಮೈತುಂಬ ಸೀರೆಯುಟ್ಟು, ಹಣಗೆ ಕಾಸಿನಗಲ ಕುಂಕು, ಕೈ ತುಂಬ ಬಳೆ, ಮೂಗುತಿ, ಚಿನ್ನಾಭರಣ ತೊಟ್ಟು ಅರಮನೆಯಲ್ಲಿ ನಿಂತಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ಫ್ಯಾನ್ಸ್ ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ. ನಟಿಯು ಈ ಐತಿಹಾಸಿಕ ಪಾತ್ರದಿಂದ ಮತ್ತೊಂದು ಭರ್ಜರಿ ಗೆಲುವು ತಮ್ಮದಾಸಿಕೊಳ್ಳುತ್ತಾರಾ?, ಇಂತಹ ಪಾತ್ರಗಳಲ್ಲೂ ಸೈ ಎನಿಸಿಕೊಳ್ಳವು ಅಭಿನಯ ಚತುರತೆ ಪ್ರದರ್ಶಿಸಿ ಅಭಿಮಾನಿಗಳು ಮನ ಮತ್ತೆ ಗೆಲ್ತಾರಾ? ಎಂಬುದು ಮುಂದಿನ ತಿಂಗಳ ಎರಡನೇ ವಾರ ಗೊತ್ತಾಗಲಿದೆ.

ಹಿಂದಿ ಭಾಷೆಯಲ್ಲಿ ತಯಾರಾದ ಈ ಸಿನಿಮಾವನ್ನು ಲಕ್ಷ್ಮಣ್ ಉಟೇಕರ್ ಅವರು ನಿರ್ದೇಶಿಸಿದ್ದಾರೆ. ದಿನೇಶ್ ವಿಜನ್ ಅವರು ಬಂಡವಾಳ ಹೂಡಿದ್ದು, ವಿಕ್ಕಿ ಕೌಶಲ್‌ಗೆ ಮೊದಲ ಬಾರಿಗೆ ರಶ್ಮಿಕಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಮೋಷನ್ ಪೋಸ್ಟರ್, ಟ್ರೈಲರ್ ಬಿಡುಗಡೆ ಆಗಿದ್ದು, ಸಾಕಷ್ಟು ಕೂತೂಹಲ ಹುಟ್ಟಿಸಿದೆ. ಈಗ ಮಹಾರಾಣಿ ಪಾತ್ರ ನಟಿ ರಶ್ಮಿಕಾ ಫೋಟೋ ಬಿಡುಗಡೆ ಆಗಿದೆ. ಸಿನಿಮಾದ ಬಹುನಿರೀಕ್ಷೆಯ ಟ್ರೈಲರ್ ಇದೇ ಜನವರಿ 22ರಂದು ನಾಳೆ ಬುಧವಾರ ಬಿಡುಗಡೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+