ಚಂದನ್ ಶೆಟ್ಟಿ & ನಟಿ ಸುಪ್ರೀತಾ ಸತ್ಯನಾರಾಯಣ್ ಮದುವೆ ಫಿಕ್ಸ್... Chandan Shetty

ಕನ್ನಡ ಸಿನಿಮಾ ರಂಗದಲ್ಲಿ ಬರೀ ಕೆಟ್ಟ ಸುದ್ದಿಗಳೇ ಇಷ್ಟು ದಿನಗಳ ಕಾಲ ಎಲ್ಲರನ್ನೂ ಕಾಡಿ ಭಯ ಹುಟ್ಟಿಸಿದ್ದವು. ಒಂದು ಕಡೆ ಕನ್ನಡ ಸಿನಿಮಾ ರಂಗದ ನಟ & ನಟಿಯರು ಡಿವೋರ್ಸ್ ಅಂದ್ರೆ ಸಂಸಾರದಿಂದ ಬೇರೆ ಬೇರೆ ಆಗುವ ಸುದ್ದಿ, ಇನ್ನೊಂದು ಕಡೆ ಕೊಲೆ ಆರೋಪ ಹೊತ್ತು ಜೈಲಿಗೂ ಹೋಗಿರುವ ವಿಚಾರ ಕನ್ನಡ ಸಿನಿಮಾ ರಂಗದಲ್ಲಿ ತಲ್ಲಣ ಎಬ್ಬಿಸಿತ್ತು. ನಿನ್ನೆವರೆಗೂ ಚನ್ನಾಗಿ ಇರುತ್ತಿದ್ದ ಗಂಡ & ಹೆಂಡತಿ ದಿಢೀರ್ ವಿವಾಹ ವಿಚ್ಛೇದನ ಘೋಷಣೆ ಮಾಡಿ ಆತಂಕದ ವಾತಾವರಣ ಹುಟ್ಟು ಹಾಕಿದ್ದರು. ಹೀಗಿದ್ದಾಗಲೇ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಸಿಕ್ಕಿದೆ!

ಕನ್ನಡ ಸಿನಿಮಾ ರಂಗಕ್ಕೆ ಇನ್ನೇನು 100 ವರ್ಷ ತುಂಬಲಿದ್ದು, ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರು ಮಿಂಚಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಬೇಡದ ವಿಚಾರ ನಡೆದು ಭಯದ ವಾತಾವರಣ ಸೃಷ್ಟಿಯಾಗಿತ್ತು. ಕನ್ನಡ ಸಿನಿಮಾ ಅಭಿಮಾನಿಗಳ ಎದೆಯಲ್ಲಿ ಈ ಬಗ್ಗೆ ದೊಡ್ಡ ಚಿಂತೆಯೂ ಶುರುವಾಗಿತ್ತು. ಹೀಗಿದ್ದಾಗಲೇ, ಚಂದನ್ ಶೆಟ್ಟಿ & ನಟಿ ಸುಪ್ರೀತಾ ಸತ್ಯನಾರಾಯಣ್ ಮದುವೆ ಫಿಕ್ಸ್...

Chandan Shetty Will Get Married With Actress Supritha Sathyanarayan

ಚಂದನ್ ಶೆಟ್ಟಿ & ನಟಿ ಸುಪ್ರೀತಾ ಮದುವೆ...

ಕನ್ನಡ ಸಿನಿಮಾ ರಂಗ ಬೆಳ್ಳಿತೆರೆ ಎಂದು ಹೆಸರು ಮಾಡಿದ್ದರೆ, ಕನ್ನಡದ ಧಾರಾವಹಿ ಹಾಗೂ ಕನ್ನಡ ಚಾನಲ್‌ಗಳಲ್ಲಿ ಬರುವ ಕಾರ್ಯಕ್ರಮಗಳು ಕಿರುತೆರೆ ಎಂದು ಹೆಸರು ಮಾಡಿವೆ. ಇದೇ ನಮ್ಮ ಕನ್ನಡದ ಕಿರುತೆರೆ ಮೂಲಕ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಹೀಗಾಗಿಯೇ, ಕನ್ನಡ ಕಿರುತೆರೆ ಲೋಕ ಇಂಡಿಯಾ ಮಾತ್ರವಲ್ಲ ಜಗತ್ತಿನಾದ್ಯಂತ ಹೆಸರು ಮಾಡಿದೆ. ಹೀಗೆ ಇದ್ದಾಗಲೇ, ಕನ್ನಡ ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ್‌ ಅವರು ಸದ್ದಿಲ್ಲದೇ ದಿಢೀರ್ ಚಂದನ್ ಶೆಟ್ಟಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ!

ಅಂದಹಾಗೆ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಸೀತಾ ವಲ್ಲಭ ಧಾರಾವಾಹಿ ಮೂಲಕ ದೊಡ್ಡ ಹೆಸರು ಮಾಡಿದ್ದರು. ಮೈಥಲಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದು, ಕನ್ನಡ ವೀಕ್ಷಕರಿಗೆ ಹತ್ತಿರವಾಗಿದ್ದರು. ಅಲ್ಲದೇ ಗಿರೀಶ್ ವೈರಮುಡಿ ನಿರ್ದೇಶನದ ರಹದಾರಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಅಂದ್ರೆ ನಮ್ಮ ಕನ್ನಡ ಸಿನಿಮಾದ ಬೆಳ್ಳಿತೆರೆಗೆ ಕೂಡ ಎಂಟ್ರಿಯನ್ನ ಕೊಟ್ಟಿದ್ದರು ನಟಿ ಸುಪ್ರೀತಾ ಸತ್ಯನಾರಾಯಣ್ ಅವರು. ಹೀಗಿದ್ದಾಗಲೇ, ದಿಢೀರ್ ಭರ್ಜರಿ ಸುದ್ದಿ ನೀಡಿರುವ ನಟಿ ಸುಪ್ರೀತಾ ಸತ್ಯನಾರಾಯಣ್ ಚಂದನ್ ಶೆಟ್ಟಿ ಅವರ ಜೊತೆ ಎಂಗೇಜ್ ಆಗಿದ್ದು, ಶೀಘ್ರದಲ್ಲೇ ಮದುವೆ ಕೂಡ ಆಗಲಿದ್ದಾರಂತೆ.

ಚಂದನ್ ಶೆಟ್ಟಿ ಜೊತೆಗೆ ಮದುವೆ...

ಮಾರ್ಚ್‌ ತಿಂಗಳಲ್ಲೇ ನಟಿ ಸುಪ್ರೀತಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಚಂದನ್ ಶೆಟ್ಟಿ ಎಂಬುವವರ ಜೊತೆ ಮದುವೆ ಆಗುತ್ತಿದ್ದಾರಂತೆ. ಈ ಬಗ್ಗೆ ನಟಿ ಸುಪ್ರೀತಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಮಾಹಿತಿಯನ್ನ ತಡವಾಗಿ ಹಂಚಿಕೊಂಡಿದ್ದಾರೆ. ನಟಿ ಸುಪ್ರೀತಾ ಸತ್ಯನಾರಾಯಣ್ ಮದುವೆ ಆಗ್ತಿರುವ ಚಂದನ್ ಶೆಟ್ಟಿ ಯಾರು ಎಂಬುದನ್ನು ನೋಡುವುದಾದ್ರೆ ಡಿಜಿಟಲ್ ಕ್ರಿಯೇಟರ್ ಅಂತಾ ನಟಿ ಸುಪ್ರೀತಾ ಅವರ ಭಾವಿ ಪತಿ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಾಕಿದ್ದಾರೆ. ಈ ಮೂಲಕ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಭರ್ಜರಿಯಾಗಿ ಮದುವೆ ಆಗೋದಕ್ಕೆ ಸಿದ್ಧವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+