‘ಡಿ-ಬಾಸ್’ ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ: ಹಂಪಿ ಉತ್ಸವದಲ್ಲಿ ‘ಶೇಕ್ ಇಟ್ ಪುಷ್ಪವತಿ’ ಹವಾ!

ನಟ ದರ್ಶನ್ ಅವರ ಫ್ಯಾನ್ಸ್‌ಗೆ 2024ರಲ್ಲಿ ಸಿಕ್ಕಾಪಟ್ಟೆ ಸರ್ಪ್ರೈಸ್ ಸಿಗುತ್ತಿವೆ. ಒಂದು ಕಡೆ, ದರ್ಶನ್ ಅಭಿನಯ ಮಾಡಿದ್ದ 'ಕಾಟೇರ' ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಈ ವೇಳೆ ಮತ್ತೊಂದು ದೊಡ್ಡ ಸಿನಿಮಾಗೂ ದರ್ಶನ್ ಅವರು ಸಜ್ಜಾಗಿದ್ದಾರೆ. ಹಾಗೇ ನಟ ದರ್ಶನ್ ಅವರು ಈಗ 'ಭೂಮಿ ಪುತ್ರ' ಎಂಬ ಹೊಸ ಬಿರುದು ಪಡೆದಿದ್ದಾರೆ. ಇಷ್ಟೆಲ್ಲದರ ಮಧ್ಯೆ, ಇದೀಗ ಹಂಪಿ ಉತ್ಸವದಲ್ಲೂ ಡಿ-ಬಾಸ್ ಹವಾ ಜೋರಾಗಿದೆ!

ಹೌದು ಇನ್ನೇನು ಕೆಲವೇ ದಿನದಲ್ಲಿ ಹಂಪಿ ಉತ್ಸವ ಅದ್ಧೂರಿಯಾಗಿ ನಡೆಯಲಿದೆ. ಹೀಗಾಗಿ ಉತ್ಸವಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಬಳಗಕ್ಕೆ ಭರ್ಜರಿ ಸುದ್ದಿ ಸಿಕ್ಕಿದೆ. ಅದ್ರಲ್ಲೂ ಕಳೆದ 2023ರಲ್ಲಿ ರಿಲೀಸ್ ಆಗಿದ್ದ 'ಕ್ರಾಂತಿ' ಸಿನಿಮಾ ಹಂಪಿ ಉತ್ಸವದಲ್ಲೂ ಕಹಳೆ ಮೊಳಗಿಸಿದೆ. ಹಾಗಾದ್ರೆ ಅಸಲಿಗೆ ಏನಿದು ಸುದ್ದಿ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Challenging Star Darshan Movie Kranti Song Will Be Played On The Hampi Utsav 2024

ವಿಜಯನಗರ ಸಾಮ್ರಾಜ್ಯದ ಗತವೈಭವ...

ಹೌದು ಕನ್ನಡಿಗರ ವಿಜಯನಗರ ಸಾಮ್ರಾಜ್ಯದ ಗತವೈಭವ ಸ್ಮರಿಸಿಕೊಳ್ಳುವ ಈ ವರ್ಷದ ಹಂಪಿ ಉತ್ಸವಕ್ಕೆ ಕರ್ನಾಟಕ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ಫೆಬ್ರವರಿ 4ರಿಂದ ಒಟ್ಟು ಮೂರು ದಿನಗಳ ಹಂಪಿ ಉತ್ಸವ ನಡೆಯಲಿದೆ. ಇನ್ನು ಉತ್ಸವದಲ್ಲಿ ನಾನಾ ಪ್ರಕಾರದ ಕಲಾ ಪ್ರದರ್ಶನ, ವಿಧ ವಿಧದ ಕಾರ್ಯಕ್ರಮ ನಡೆಯಲಿವೆ. ಈ ಹಿಂದೆ ನಡೆದಿದ್ದ ಹಂಪಿ ಉತ್ಸವದಲ್ಲಿ ಕೂಡ ನಟ & ನಟಿಯರು ಭಾಗಿಯಾಗಿ ಮೆರುಗು ನೀಡಿದ್ದಾರೆ. ಈ ಬಾರಿ ಕೂಡ ಅದೇ ಸುವರ್ಣಾವಕಾಶ ಒದಗಿ ಬಂದಿದೆ. ಹಾಗೇ ದರ್ಶನ್ ಅವರ ಸಿನಿಮಾ ಇಲ್ಲಿ ಕೂಡ ಮಿಂಚಲಿದೆ.

'ಶೇಕ್ ಇಟ್ ಪುಷ್ಪವತಿ' ಹವಾ!

ಅಂದಹಾಗೆ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್ ಅವರು ಈ ಬಾರಿಯ ಹಂಪಿ ಉತ್ಸವದಲ್ಲಿ ಹವಾ ಎಬ್ಬಿಸಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಶೇಕ್ ಇಟ್ ಪುಷ್ಪವತಿ ಎಂಬ ಹಾಡಿಗೆ 'ಕ್ರಾಂತಿ' ಸಿನಿಮಾದಲ್ಲಿ ಡಾನ್ಸ್ ಮಾಡಿದ್ದ ನಿಮಿಕಾ ರತ್ನಾಕರ್ ಈಗ ಹಂಪಿ ಉತ್ಸವದಲ್ಲಿ ಕೂಡ ಇದೇ ಹಾಡಿಗೆ ಹೆಜ್ಜೆ ಹಾಕಲಿದ್ದಾರಂತೆ. ಈಗಾಗಲೇ ಅದಕ್ಕೆ ಬೇಕಾಗಿರುವ ತಯಾರಿ ಮಾಡಿಕೊಂಡಿರುವ ನಟಿ ನಿಮಿಕಾ ಅವರು, ಹಂಪಿ ಉತ್ಸವದ ಭಾಗವಾಗಲು ಈಗ ಕಾಯುತ್ತಿದ್ದಾರೆ. ಈ ಮೂಲಕ ನಟ ದರ್ಶನ್ ಅವರ ಅಭಿಮಾನಿಗಳಿಗೆ 'ಕಾಟೇರ' ಹಬ್ಬದ ಜೊತೆಗೆ 'ಕ್ರಾಂತಿ' ಸಂಭ್ರಮವೂ ಶುರುವಾಗಲಿದೆ.

ಕಾಟೇರ ಹಬ್ಬ ಬಲು ಜೋರು

ಕ್ರಿಸ್‌ಮಸ್ ರಜೆ ಸಂಭ್ರಮದಲ್ಲೇ 'ಕಾಟೇರ' ಸಿನಿಮಾ ಹೊಸ ವರ್ಷಕ್ಕೆ ಗಿಫ್ಟ್ ಎನ್ನುವಂತೆ ರಿಲೀಸ್ ಆಗಿತ್ತು. ಡಿ. 29ಕ್ಕೆ ರಿಲೀಸ್ ಆಗಿದ್ದ ಕಾಟೇರ ಸಿನಿಮಾ ಹೊಸ ದಾಖಲೆ ನಿರ್ಮಾಣ ಮಾಡಿತ್ತಿದೆ. ನೋಡ ನೋಡುತ್ತಲೇ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದು, ತಾಕತ್ ತೋರಿಸಿದೆ. ಹಾಗೇ ಪ್ಯಾನ್ ಇಂಡಿಯಾ ಸಿನಿಮಾ ಎದುರು ಪರಭಾಷಿಕರ ಸಿನಿಮಾ ಮೀರಿಸಿ ಕನ್ನಡಿಗರ 'ಕಾಟೇರ' ಫ್ಯಾನ್ಸ್‌ಗೆ ಹಬ್ಬವನ್ನೇ ಕೊಟ್ಟಿದೆ. ಇದೇ ವೇಳೆ ಕ್ರಾಂತಿ ಸಂಭ್ರಮ ಕೂಡ ಹಂಪಿ ಉತ್ಸದಲ್ಲಿ ಇದೀಗ ಹೊಸ ಹವಾ ಎಬ್ಬಿಸಲು ಸಜ್ಜಾಗಿದೆ.

Challenging Star Darshan Movie Kranti Song Will Be Played On The Hampi Utsav 2024

200 ಕೋಟಿ ರೂಪಾಯಿ ಕ್ಲಬ್!

ಕಾಟೇರ ಸಿನಿಮಾ ನೋಡ ನೋಡುತ್ತಲೇ ಎಲ್ಲಾ ದಾಖಲೆ ಮೀರಿ ಮುನ್ನುಗ್ಗಿದೆ. ಕನ್ನಡಿಗರ ಚಿತ್ರ ಕಾಟೇರ ಒಂದು ಗತ್ತು ಕೊಟ್ಟಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆದ್ರೂ ಕಾಟೇರ ಸಿನಿಮಾ ಮಾತ್ರ ಪ್ಯಾನ್ ಇಂಡಿಯಾ ಲೆವೆಲ್‌ಗೆ ಹಣ ಮಾಡಿದೆ. ಹೀಗಿದ್ದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿ ಸಾಧನೆ ಮಾಡಿದೆ. ಇಷ್ಟೆಲ್ಲದರ ಮಧ್ಯೆ ಈಗ ಮತ್ತೊಂದು ದರ್ಶನ್ ಅವರ ಸಿನಿಮಾ ಹೊಸ ಸಂಚಲನ ಸೃಷ್ಟಿ ಮಾಡುತ್ತಿದ್ದು ಹಂಪಿಯ ಉತ್ಸವದಲ್ಲೂ ಕ್ರಾಂತಿ ಕಹಳೆ ಮೊಳಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+