ದರ್ಶನ್ ಅವರ ‘ಕಾಟೇರ’ ಓಟಿಟಿಗೆ ಬರ್ತಿದೆ! ಯಾವಾಗ ಗೊತ್ತೆ?

ನಟ ದರ್ಶನ್ ಅವರ ಸಿನಿಮಾ 'ಕಾಟೇರ' ಸಿನಿಮಾ ಅಬ್ಬರ ಈಗಲೂ ಕಡಿಮೆ ಆಗಿಲ್ಲ. ಈ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ 1 ತಿಂಗಳು ಕಳೆದರೂ ಕಾಟೇರ ಸೌಂಡ್ ಜಾಸ್ತಿ ಆಗ್ತಾನೆ ಇದೆ. ಹೀಗಿದ್ದಾಗ ದರ್ಶನ್ ಅವರ ಸಿನಿಮಾ ಓಟಿಟಿಗೆ ರಿಲೀಸ್ ಆಗಲು ಸಿದ್ಧವಾಗಿದೆ. ಅರೆರೆ ಯಾವಾಗ ಗೊತ್ತಾ? ಮುಂದೆ ಓದಿ.

ಕಾಟೇರ ಸಿನಿಮಾ ನೋಡ ನೋಡುತ್ತಲೇ ಎಲ್ಲಾ ದಾಖಲೆ ಮೀರಿ ಮುನ್ನುಗ್ಗಿದೆ. ಕನ್ನಡಿಗರ ಚಿತ್ರ ಕಾಟೇರ ಒಂದು ಗತ್ತು ಕೊಟ್ಟಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆದ್ರೂ ಕಾಟೇರ ಸಿನಿಮಾ ಮಾತ್ರ ಪ್ಯಾನ್ ಇಂಡಿಯಾ ಲೆವೆಲ್‌ಗೆ ಹಣ ಮಾಡಿದೆ. ಹೀಗಿದ್ದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿ ಸಾಧನೆ ಮಾಡಿದೆ. ಹಾಗೇ ಓಟಿಟಿಗೆ ಕೂಡ, ಅದ್ಧೂರಿಯಾಗಿ ಎಂಟ್ರಿ ಕೊಡಲು ಸಜ್ಜಾಗಿದೆ. ಹಾಗಾದ್ರೆ ಕಾಟೇರ ಓಟಿಟಿ ರಿಲೀಸ್ ಯಾವಾಗ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

Challenging Star Darshan Movie Kaatera Will Release On OTT Of This Month

ಕಾಟೇರ ಹವಾ ಈಗಲೂ ನಿಂತಿಲ್ಲ!

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ 6ನೇ ವಾರ ಕೂಡ ಅದ್ಭುತ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. 196 ಚಿತ್ರಮಂದಿರ & 63 ಮಲ್ಟಿಫ್ಲೆಕ್ಸ್‌ಗಳಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ದರ್ಶನ್ ಅವರ ಸಿನಿಮಾ ಇನ್ನೇನು ಓಟಿಟಿಗೆ ಕೂಡ ಬರಲಿದೆ. ಹೀಗಾಗಿ ಈಗಾಗಲೇ Zee5 ಜೊತೆ ವ್ಯಾಪಾರ ವಹಿವಾಟು ಮುಗಿಸಿದೆ ಎನ್ನಲಾಗಿದೆ. ಅಂದಹಾಗೆ ಡಿ-ಬಾಸ್ ದರ್ಶನ್ ಅವರ ಸಿನಿಮಾ ಕರಿಯರ್‌ನಲ್ಲೇ ಅತಿಹೆಚ್ಚು ಕಲೆಕ್ಷನ್ ಮಾಡಿರುವ ದಾಖಲೆಯನ್ನ ಹೊಂದಿರುವ ಕಾಟೇರ ಸಿನಿಮಾ ಫೆಬ್ರವರಿ 9ರಂದು ಓಟಿಟಿ ಅಖಾಡಕ್ಕೆ ಎಂಟ್ರಿ ಕೊಡಲಿದೆ, ಅಂತಾ ಹೇಳಲಾಗುತ್ತಿದೆ.

ಪರಭಾಷಿಕರ ಹಾವಳಿಗೂ ಬಿತ್ತು ಬ್ರೇಕ್!

ಕ್ರಿಸ್‌ಮಸ್ ರಜೆ ಸಂಭ್ರಮದಲ್ಲೇ 'ಕಾಟೇರ' ಸಿನಿಮಾ ಹೊಸ ವರ್ಷಕ್ಕೆ ಗಿಫ್ಟ್ ಎನ್ನುವಂತೆ ರಿಲೀಸ್ ಆಗಿತ್ತು. ಡಿಸೆಂಬರ್ 29ಕ್ಕೆ ರಿಲೀಸ್ ಆಗಿದ್ದ ಕಾಟೇರ ಸಿನಿಮಾ ಹೊಸ ಹೊಸ ದಾಖಲೆ ನಿರ್ಮಾಣ ಮಾಡಿತ್ತು. ನೋಡ ನೋಡುತ್ತಲೇ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದು, ತನ್ನ ತಾಕತ್ ತೋರಿಸಿತ್ತು ಕನ್ನಡಿಗರ ಈ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಎದುರು ಪರಭಾಷಿಕರ ಸಿನಿಮಾಗಳನ್ನೂ ಮೀರಿಸಿ ಕನ್ನಡಿಗರ 'ಕಾಟೇರ' ಅಭಿಮಾನಿಗಳಿಗೆ ಹಬ್ಬವನ್ನೇ ಕೊಟ್ಟಿದೆ.

ಹಳೇ ದಾಖಲೆಗಳು ಉಡೀಸ್

ಕೆಜಿಎಫ್ & ಕಾಂತಾರ ಸಿನಿಮಾಗಳು ಈ ಮೊದಲು ಮಿಂಚಿದ್ದವು. 'KGF ಚಾಪ್ಟರ್-1' ಮತ್ತು 'KGF ಚಾಪ್ಟರ್‌ -2 & 'ಕಾಂತಾರ' ಭರ್ಜರಿ ದಾಖಲೆ ಬರೆದಿದ್ದು ಬಾಕ್ಸ್ ಆಫಿಸ್‌ನಲ್ಲು ಕೋಟಿ ಕೋಟಿ ಗಳಿಸಿದ್ದವು. ಆದರೆ ಕಾಂತಾರ & ಕೆಜಿಎಫ್ ದಾಖಲೆಯನ್ನು ಕೂಡ 'ಕಾಟೇರ' ಅಳಿಸಿ ಹೊಸ ದಾಖಲೆ ನಿರ್ಮಿಸಿದೆ ಎಂಬ ಚರ್ಚೆ ನಡಿತಿದೆ. 'KGF-2' 1200 ಕೋಟಿ ರೂಪಾಯಿಯ ಗಳಿಸಿ ಅತಿಹೆಚ್ಚು ಗಳಿಸಿದ ಕನ್ನಡ ಸಿನಿಮಾ ಎನಿಸಿಕೊಂಡಿದೆ. 2ನೇ ಸ್ಥಾನದಲ್ಲಿ ರಿಷಬ್ ಶೆಟ್ಟಿ, ನಿರ್ದೇಶಿಸಿ & ನಟಿಸಿದ್ದ 'ಕಾಂತಾರ' ಸಿನಿಮಾ ಇದೆ.

Challenging Star Darshan Movie Kaatera Will Release On OTT Of This Month

ಅಷ್ಟಕ್ಕೂ 'KGF'-1 ಸಿನಿಮಾ ಕನ್ನಡ ವರ್ಷನ್ 134 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಆ ದಾಖಲೆ 'ಕಾಟೇರ' ಮುರಿದಿದೆ ಎನ್ನಲಾಗಿದೆ. 'ಕಾಂತಾರ' ಕನ್ನಡ ವರ್ಷನ್ 160 ಕೋಟಿ ರೂಪಾಯಿ & 'KGF-2' ಸಿನಿಮಾ 165 ಕೋಟಿ ರೂ. ಬಾಚಿತ್ತು. ಹೀಗೆ 'ಕಾಟೇರ' ಸಿನಿಮಾ ಸದ್ಯ ಈ ದಾಖಲೆ ಮುರಿದು ದೊಡ್ಡ ಮೊತ್ತ ಸಂಪಾದಿಸಿದೆ ಅಂತಾ ಹೇಳಲಾಗುತ್ತಿದೆ. ಈ ಚಿತ್ರ ತನ್ನ ಅಬ್ಬರ ಮುಂದುವರಿಸುತ್ತಾ ಇಂದಿಗೂ ಬಾಕ್ಸ್ ಆಫಿಸ್ ಅಖಾಡದಲ್ಲಿ ಅಬ್ಬರಿಸುತ್ತಿದೆ. ಹೀಗಾಗಿ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+