ಕೈಯಲ್ಲಿ ಕರ್ಪೂರ, ಆಕಾಶದೆತ್ತರ ಕಟೌಟ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಸಂಭ್ರಮ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ, 2023ರ ಬಹು ನಿರೀಕ್ಷಿತ ಸಿನಿಮಾ 'ಕಾಟೇರ' ದೇಶದ ವಿವಿಧ ರಾಜ್ಯಗಳಲ್ಲಿ ಅಧಿಕೃತವಾಗಿ ರಿಲೀಸ್ ಆಗಿದೆ. ನಿನ್ನೆ ಮಧ್ಯರಾತ್ರಿಯಿಂದ ಶುರುವಾಗಿರುವ ಈ ಸಂಭ್ರಮದಲ್ಲಿ ಅಭಿಮಾನಿಗಳು ಮಿಂದು ಸಂಭ್ರಮಿಸಿದ್ದಾರೆ. ಅದರಲ್ಲೂ ಮುಗಿಲೆತ್ತರಕ್ಕೆ ಚಾಚಿದ್ದ ಕಟೌಟ್‌ಗಳು ಥಿಯೇಟರ್ ಎದುರು ರಾರಾಜಿಸಿವೆ. ಮತ್ತೊಂದು ಕಡೆ ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಗೌರವ ಸಲ್ಲಿಸಿದ್ದು ಹೇಗೆ ಗೊತ್ತಾ?

'ಕಾಟೇರ' ಅಬ್ಬರವು ಶುರುವಾಗಿದ್ದು ಕೆಲ ಥಿಯೇಟರ್‌ಗಳಲ್ಲಿ ನಿನ್ನೆ ಮಧ್ಯ ರಾತ್ರಿಯಿಂದಲೇ ಸಂಭ್ರಮ ಮೇಳೈಸಿದೆ. ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ಅವರು ಅಭಿನಯಿಸಿರುವ, ಬಹು ನಿರೀಕ್ಷಿತ ಸಿನಿಮಾ ಇದಾಗಿದೆ. ಕೋಟ್ಯಂತರ ಫ್ಯಾನ್ಸ್, ಕಾಟೇರ ಕಣ್ತುಂಬಿಕೊಂಡಿದ್ದಾರೆ. ಸುಮಾರು 1000ಕ್ಕೂ ಹೆಚ್ಚು ಪ್ರದರ್ಶನ ಮೊದಲ ದಿನ ಅಭಿಮಾನಿಗಳಿಗೆ ನೀಡ್ತಿರುವ ಕಾಟೇರ, ಬೆಳ್ಳಿತೆರೆ ಮೇಲೆ ರಾರಾಜಿಸಿದೆ. ಇದೇ ಸಮಯದಲ್ಲೇ, ಅಭಿಮಾನಿಗಳು ಕೂಡ ಸಖತ್ ಸಂತಸ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿವೆ.

Challenging Star Darshan Fans Are Celebrating Kaatera Movie

ಕೈಯಲ್ಲಿ ಕರ್ಪೂರ, ಆಕಾಶದೆತ್ತರ ಕಟೌಟ್

ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ, ಉತ್ತರ ಕರ್ನಾಟಕದ ಧಾರವಾಡ & ಹುಬ್ಬಳ್ಳಿ ಹಾಗೂ ಗಡಿನಾಡ ಜಿಲ್ಲೆಗಳಲ್ಲೂ 'ಕಾಟೇರ' ಸಂಭ್ರಮ ಬಲು ಜೋರಾಗಿದೆ. ಪಕ್ಕಾ ಮಾಸ್ ಎಂಟರ್‌ಟೈನ್‌ಮೆಂಟ್ ಜೊತೆಗೆ ಗಟ್ಟಿಯಾದ ಕಥೆಯನ್ನ ಈ ಸಿನಿಮಾ ಒಳಗೊಂಡಿರುವುದು, ಫ್ಯಾನ್ಸ್ ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ. ಅದ್ರಲ್ಲೂ ರೈತರ ಬಗ್ಗೆ ಈ ಸಿನಿಮಾದಲ್ಲಿ ತೋರಿಸಿದ ಕಂಟೆಂಟ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ. ಹೀಗಾಗಿಯೇ ಕೈಯಲ್ಲಿ ಕರ್ಪೂರ ಹಿಡಿದು, ಆಕಾಶದೆತ್ತರ ನಿಂತ ನಟ ದರ್ಶನ್ ಅವರ ಕಟೌಟ್‌ಗಳಿಗೆ ಫ್ಯಾನ್ಸ್ ಪ್ರೀತಿಯಿಂದ ನಮಿಸಿದ್ದಾರೆ.

ಟಿಕೆಟ್ ಪಡೆಯಲು ಭರ್ಜರಿ ಪೈಪೋಟಿ

ರಾಕ್‌ಲೈನ್‌ ಸಿನಿಮಾಸ್‌ನಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಕಾಟೇರ ಶೋ ಶುರುವಾದವು. ಕಳೆದ 1 ವಾರದಿಂದಲೇ ಕಾಟೇರ ಟಿಕೆಟ್ ಭರ್ಜರಿಯಾಗಿ ಸೇಲ್ ಆಗಿವೆ. ಹೀಗಾಗಿ, ಸಿನಿಮಾ ಬಿಡುಗಡೆ ಆದ ಮೊದಲ 3 ದಿನಗಳ ಕಾಲ ಟಿಕೆಟ್ ಬಹುತೇಕ ಬುಕ್ ಆಗಿದ್ದು, ಅಭಿಮಾನಿಗಳು 'ಕಾಟೇರ' ಕಾಣ್ತುಂಬಿಕೊಳ್ಳುತ್ತಿದ್ದಾರೆ. ಸಿಂಗಲ್ ಸ್ಕ್ರೀನ್ ಸೇರಿ ಮಾಲ್‌ಗಳಲ್ಲಿ ಕೂಡ ಅಬ್ಬರಿಸಲು ಕಾಟೇರ ಸಿನಿಮಾ ಸಜ್ಜಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಈ ಸಿನಿಮಾ ಬಿಡುಗಡೆ ಆಗಿದ್ದು, ನೆರೆ ರಾಜ್ಯಗಳಲ್ಲೂ ಕನ್ನಡ ಸಿನಿಮಾ ಅಬ್ಬರಿಸಲು ಸಜ್ಜಾಗಿದೆ.

Challenging Star Darshan Fans Are Celebrating Kaatera Movie

'ಕ್ರಾಂತಿ' ನಂತರ 'ಕಾಟೇರ' ಅಬ್ಬರ

2023 ದರ್ಶನ್ ಅವರ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದ್ದು ಇದೇ ವರ್ಷವೇ ಎರಡೆರಡು ಸಿನಿಮಾಗಳು ರಿಲೀಸ್ ಆಗಿವೆ. ಕೆಲ ತಿಂಗಳ ಹಿಂದಷ್ಟೇ ಕ್ರಾಂತಿ ಸಿನಿಮಾ ರಿಲೀಸ್ ಆಗಿ, ದಾಖಲೆ ಧೂಳ್ ಮಾಡಿತ್ತು. ಇದೀಗ ಫ್ಯಾನ್ಸ್ ಪಾಲಿನ ಡಿ-ಬಾಸ್ ದರ್ಶನ್ ಅವರು ಕಾಟೇರ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇದೆ. ಸಿನಿಮಾ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ಎಲ್ಲೆಲ್ಲೂ ಸಂಭ್ರಮಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+