‘ಡಿ-ಬಾಸ್’ ದರ್ಶನ್ ಫುಲ್ ಗರಂ, ನಸುನಕ್ಕು ಸುಮ್ಮನಾದ ಚಿಕ್ಕಣ್ಣ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ತಮ್ಮ 'ಕಾಟೇರ' ಗೆಲುವಿನ ಸಂಭ್ರಮದಲ್ಲಿ ಇದ್ದಾರೆ. ಮತ್ತೊಂದು ಕಡೆ ಅಭಿಮಾನಿಗಳ ಪಾಲಿನ 'ಡಿ-ಬಾಸ್' ದರ್ಶನ್ ಅವರ ಆತ್ಮೀಯ ಸ್ನೇಹಿತ ಚಿಕ್ಕಣ್ಣ ಅಭಿನಯದ 'ಉಪಾಧ್ಯಕ್ಷ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದರೆ ಈ ಸಮಯದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವ ವಿಚಾರ ಏನು ಅಂದ್ರೆ, ನಟ ದರ್ಶನ್ ಅವರು ಚಿಕ್ಕಣ್ಣ ಮೇಲೆ ಕೋಪ ಮಾಡ್ಕೊಂಡಿದ್ದಾರಂತೆ!
ಹೌದು, ಕರ್ನಾಟಕ ಸೇರಿ ಭಾರತದ ವಿವಿಧ ರಾಜ್ಯಗಳಲ್ಲಿ ಡಿ. 29ಕ್ಕೆ ರಿಲೀಸ್ ಆಗಿದ್ದ ಕನ್ನಡಿಗರ ಕಾಟೇರ ಎಲ್ಲೆಲ್ಲೂ ಅಬ್ಬರಿಸಿದೆ. ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಅರಬ್ ದೇಶದಲ್ಲೂ ಅಬ್ಬರಿಸುತ್ತಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಆಸ್ಟ್ರೇಲಿಯಾ ಮತ್ತಿತರ ಕಡೆ ಕಾಟೇರ ಸಿನಿಮಾ ಇದೇ ರೀತಿ ಅಬ್ಬರದ ಪ್ರದರ್ಶನ ನೀಡ್ತಿದೆ. ಇದರ ಜತೆ 200 ಕೋಟಿ ರೂಪಾಯಿ ಕ್ಲಬ್ ಬೇರೆ ಸೇರಿದೆ.

ದರ್ಶನ್ ಅವರ ಫ್ಯಾನ್ಸ್ ಸಂಭ್ರಮ ಡಬಲ್ ಮಾಡಿದ್ದು, ಸೆಲೆಬ್ರೇಷನ್‌ಗೂ ಕಹಳೆ ಮೊಳಗಿದೆ. ಆದರೆ ಇದೇ ಸಮಯದಲ್ಲಿ ಚಿಕ್ಕಣ್ಣ ಮೇಲೆ ದರ್ಶನ್ ಅವರು ಕೋಪ ಮಾಡ್ಕೊಂಡಿದ್ದಾರೆ ಅನ್ನೋ ವಿಡಿಯೋ ವೈರಲ್ ಆಗುತ್ತಿದೆ. ಹಾಗಾದರೆ ಈ ವಿಡಿಯೋದ ಅಸಲಿಯತ್ತು ಏನು? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಸ್ನೇಹಿತನ ಮೇಲೆ ದರ್ಶನ್ ಹುಸಿ ಮುನಿಸು!
ಮೊದಲೇ ಹೇಳಿದಂತೆ ನಟ ಚಿಕ್ಕಣ್ಣ ಅವರ 'ಉಪಾಧ್ಯಕ್ಷ' ಸಿನಿಮಾ ಇನ್ನೇನು ರಿಲೀಸ್ ಆಗಿ ಅಬ್ಬರಿಸಲಿದೆ. ಆದರೆ ಇದೇ ಸಮಯದಲ್ಲಿ ನಟ ಚಿಕ್ಕಣ್ಣ ಕೂಡ ಫುಲ್ ಬ್ಯುಸಿ ಆಗಿದ್ದಾರೆ. ಅಲ್ಲದೆ ಹಲವರನ್ನ ಭೇಟಿ ಮಾಡುತ್ತಿದ್ದಾರೆ. ಇದೇ ರೀತಿ ಇದೀಗ ನಟ ದರ್ಶನ್ ಅವರನ್ನೂ ಭೇಟಿ ಮಾಡಿದ್ದಾರೆ. ಈ ವೇಳೆ ಇಬ್ಬರೂ ಆತ್ಮೀಯವಾಗಿ ಮಾತನಾಡಿದ್ದಾರೆ. ಅಲ್ಲದೆ ಇದೇ ವೇಳೆ ನಟ ಚಿಕ್ಕಣ್ಣ ಅವರ ಮೇಲೆ ಹುಸಿ ಮುನಿಸು, ಅಂದ್ರೆ ತಮಾಷೆಗೆ ಕೋಪ ಮಾಡಿಕೊಂಡ ರೀತಿ ವರ್ತಿಸಿದ್ದಾರಂತೆ.

ಎಲ್ಲೆಲ್ಲೂ ವೈರಲ್ ಆಗುತ್ತಿದೆ ವಿಡಿಯೋ
ನಟ ದರ್ಶನ್ ಅವರು ಹಾಗೂ ಚಿಕ್ಕಣ್ಣ ವಿಡಿಯೋ ಇದೀಗ ಎಲ್ಲೆಲ್ಲೂ ಫುಲ್ ವೈರಲ್ ಆಗಿ ಎಲ್ಲೆಡೆ ಹಬ್ಬುತ್ತಿದೆ. ಅದರಲ್ಲೂ ದರ್ಶನ್ ಅವರು ಕೋಪ ಮಾಡಿಕೊಂಡ ಸಮಯದಲ್ಲಿ, ನಟ ಚಿಕ್ಕಣ್ಣ ತಮಾಷೆಯಾಗಿ ನಕ್ಕಿದ್ದಾರೆ. ಇನ್ನೇನು ಇದೇ ತಿಂಗಳ 26ಕ್ಕೆ ಅಂದ್ರೆ, ಜನವರಿ 26ಕ್ಕೆ ಚಿಕ್ಕಣ್ಣ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಉಪಾಧ್ಯಕ್ಷ ಸಿನಿಮಾ ರಿಲೀಸ್ ಆಗಲಿದೆ. ಈ ಸಮಯದಲ್ಲಿ ಭರ್ಜರಿಯಾಗಿ ಪ್ರಚಾರ ಕಾರ್ಯ ಕೂಡ ಸಾಗುತ್ತಿದೆ. ಈ ಸಿನಿಮಾ ಸಂಚಲನ ಸೃಷ್ಟಿ ಮಾಡುತ್ತಿದ್ದು ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ದೊಡ್ಡ ಹೆಸರು ಮಾಡುವ ಮುನ್ಸೂಚನೆ ನೀಡುತ್ತಿದೆ.
250 ಕೋಟಿ ಕ್ಲಬ್ ಕಡೆ ಹೆಜ್ಜೆ
ನಟ ದರ್ಶನ್ ಅವರ ಇಡೀ ಸಿನಿ ಕರಿಯರ್ ಈಗ ಝಗಮಗಿಸಿದೆ. ಕೋಟ್ಯಂತರ ಫ್ಯಾನ್ಸ್ ಕಾಟೇರ ಹಬ್ಬ ಎಂಜಾಯ್ ಮಾಡಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲಿ ಕಾಟೇರ ಹೀಗೆ ಅಬ್ಬರಿಸಿದ್ದನ್ನು ಕಂಡು ಖುಷ್ ಆಗಿದ್ದಾರೆ. ಜೊತೆಗೆ ಸ್ಯಾಂಡಲ್‌ವುಡ್‌ಗೆ ಈಗ ಹೊಸ ಗತ್ತು ಬಂದಿದೆ. ಹಿಂದೆ ಕೆಜಿಎಫ್ & ಕಾಂತಾರ ಕೊಟ್ಟ ಶೈನಿಂಗ್ ಮತ್ತಷ್ಟು ಹೆಚ್ಚಾಗಿದೆ. ಈ ಖುಷಿ ಹೆಚ್ಚಾಗಲು ಕಾಟೇರ ಸಿನಿಮಾನೇ ಕಾರಣವಾಗಿದೆ. ಈಗಿನ ಮಾಹಿತಿಯಂತೆ ಕಾಟೇರ ಒಟ್ಟಾರೆ 200 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದ್ದು, ಇನ್ನೇನು 250 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ.
ಒಟ್ನಲ್ಲಿ ಕಾಟೇರ ಸಿನಿಮಾ ಸಂಭ್ರಮದ ನಡುವೆ ಇದೀಗ ಮತ್ತೊಂದು ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಅದರಲ್ಲೂ ಚಿಕ್ಕಣ್ಣ ಅವರು ಮೊದಲ ಬಾರಿಗೆ ಹೀರೋ ಆಗಿ ಎಂಟ್ರಿಯನ್ನ ಕೊಡುತ್ತಿದ್ದು, ಉಪಾಧ್ಯಕ್ಷ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನ ಹೊತ್ತು ಬರುತ್ತಿದೆ. ಹೀಗಾಗಿ ಉಪಾಧ್ಯಕ್ಷ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ, ಗಲ್ಲಾಪೆಟ್ಟಿಯಲ್ಲಿ ದಾಖಲೆಗಳನ್ನ ನಿರ್ಮಾಣ ಮಾಡುವ ನಿರೀಕ್ಷೆ ಇದೆ.












Click it and Unblock the Notifications