Gauthami Jadav: ಮಂಜಣ್ಣ-ಗೌತಮಿ ನಡುವೆ ಗೆಳೆತನಕ್ಕೂ ಮೀರಿದ ಬಾಂಧವ್ಯ ಇದ್ಯಾ?
ಬಿಗ್ ಬಾಸ್ ಕನ್ನಡ ಸೀಜನ್ 11 ಅಂತಿಮ ದಿನಗಳತ್ತ ಸಾಗುತ್ತಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರ ಬಾಕಿ ಇರುವಾಗಲೇ ಕಳೆದ ವಾರದ ವೀಕೆಂಡ್ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸಂದರ್ಶನಗಳಲ್ಲಿ ಬ್ಯೂಸಿಯಾಗಿರುವ ಚೈತ್ರಾ ಕುಂದಾಪುರ ಮನೆಯೊಳಗಿರುವ ಇತರ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಫಿಲ್ಮೀ ಬಿಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯೊಳಗೆ ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಗೆಳತನದ ಬಗ್ಗೆ ಮಾತನಾಡಿದ್ದಾರೆ. 'ಮಂಜಣ್ಣ ಮನೆಯವರಿಗೆ ಮಾತು ಕೊಟ್ಟಿರುವುದು ನನಗೆ ವೀಕೆಂಡ್ ಸಂಚಿಕೆಯಲ್ಲಿ ಗೊತ್ತಾಗಿದ್ದು. ದೂರ ಇರಲು ಇಬ್ಬರು ಕಡೆಯಿಂದಲೂ ಪ್ರಯತ್ನ ಆಗಿದೆ. ಆದರೆ ಎಲ್ಲೋ ಒಂದು ಕಡೆ ಒಂದೇ ಬಾರಿಗೆ ಕಡಿದುಕೊಳ್ಳಲಾಗದ ಬಾಂಧವ್ಯ ಅದಾಗಿತ್ತು. ಆಟ ಅಂತಾ ಬಂದಾಗ ಅನಿವಾರ್ಯವಾಗಿ ಒಂದೇ ತಂಡದಲ್ಲಿ ಆಡಬೇಕಾದ ಪರಿಸ್ಥಿತಿ ಬಂತು ಎಂದು ಮಂಜಣ್ಣ ಹೇಳಿದರು. ಆದರೆ ಅದು ಅನಿವಾರ್ಯ ಅಂತಾ ನಮಗೆ ಅನಿಸಲಿಲ್ಲ'.

'ಅದರಿಂದ ಆಚೆಗೆ ಅವರು ಆಟ ಆಡುವಾಗ ತೆಗೆದುಕೊಂಡ ನಿಲುವುಗಳನ್ನು ನೋಡಿದಾಗ ಜೊತೆಗೆ ಗೌತಮಿಗೆ ಪೆಟ್ಟಾದಾಗ ಕೊಟ್ಟಿರುವ ಪ್ರತಿಕ್ರಿಯೆಗಳನ್ನು ನೋಡಿದಾಗ ಅಷ್ಟು ಸುಲಭಕ್ಕೆ, ಯಾರಿಗೋ ಕೊಟ್ಟಿರುವ ಮಾತಿಗೆ ಮುರಿದು ಬೀಳಬಹುದಾದ ಬಾಂಧವ್ಯ ಅದಾಗಿರಲಿಲ್ಲ ಅಂತಾ ನನಗೆ ಅನಿಸುತ್ತದೆ' ಎಂದರು.
ಗೆಳೆಯ-ಗೆಳತಿ ಎನ್ನುವ ಬಾಂಧವ್ಯಕ್ಕೂ ಮೀರಿದ ಬಂಧ ಅವರ ಮಧ್ಯೆ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಚೈತ್ರಾ ಕುಂದಾಪುರ, 'ಅದರ ಬಗ್ಗೆ ನನಗೂ ಸ್ಪಷ್ಟನೆ ಇಲ್ಲ' ಎಂದು ಹೇಳಿದ್ದಾರೆ. ಮಾತು ಮುಂದುವರಿಸಿದ ಅವರು, 'ಅವರಿಬ್ಬರ ಹತ್ತಿರದ ಸರ್ಕಲ್‌ನಲ್ಲಿ ನಾನು ಇರಲಿಲ್ಲ. ಗೌತಮಿ, ಮಂಜಣ್ಣ ಅವರನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಬಿಗ್ ಬಾಸ್ ಮನೆಯಲ್ಲೂ ಕೇಳಿ ಬಂದಿತ್ತು. ಮಂಜಣ್ಣನೇ ಆ ಸಲುಗೆ ಜಾಸ್ತಿ ಕೊಟ್ಟಿದ್ದು ಅಂತಾ ನನಗೆ ಅನಿಸುತ್ತದೆ' ಎಂದರು.
'ಮನುಷ್ಯನಿಗೆ ಸ್ವಂತ ಬುದ್ಧಿ ಅಂತಾ ಇದ್ದೇ ಇರುತ್ತದೆ. ನಿಮ್ಮ ಆಯ್ಕೆಗಳನ್ನು ಬೇರೆಯವರಿಗೆ ಕೊಡಬೇಕಾದ ಅವಶ್ಯಕತೆನೇ ಇಲ್ಲ. ನೀವು ಬೇರೆಯವರಿಗೆ ಅವಲಂಬಿತರಾದರೆ ಅದು ನಿಮ್ಮದೇ ತಪ್ಪು. ನಿಮ್ಮ ಆಟ ಹಾಳಾಗುತ್ತದೆ ಅಂತಾ ಗೊತ್ತಿದ್ದರೂ ಹಾಗೇ ಇರುವುದು ಅದು ನಿಮ್ಮ ತಪ್ಪು. ಅದು ನಿಮ್ಮದೇ ಆಯ್ಕೆ. ಅದಕ್ಕೆ ಇನ್ನೊಬ್ಬರನ್ನು ದೂಷಿಶಿಸಿ ಪ್ರಯೋಜನ ಇಲ್ಲ' ಎಂದು ಹೇಳಿದರು.

'ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ಸಂಬಂಧಗಳನ್ನು ಮುರಿದು ಬರಲು ಒಂದು ಧೈರ್ಯ ಬೇಕು. ಬಹುತೇಕರು ಅಂತಹ ಧೈರ್ಯವನ್ನು ಪಾಲನೆ ಮಾಡುವುದಿಲ್ಲ. ನನಗೆ ಮೊದಲು ತ್ರಿವಿಕ್ರಮ್ ಅಣ್ಣನ ಜೊತೆ ಆತ್ಮೀಯತೆ ಇತ್ತು. ಒಂದು ಜಗಳ ಆಯ್ತು ಆಗ ನಾನು ಕೂಡಲೇ ಅದರಿಂದ ಹೊರ ಬರುತ್ತೇನೆ. ಶಿಶಿರ್ ಅಣ್ಣನ ಜೊತೆಗೂ ಹೀಗೆ ಆಯ್ತು. ಯಾರನ್ನೂ ಅಂಟಿಸಿಕೊಳ್ಳದ ಹಾಗೇ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವುದು ಬಹಳ ಕಷ್ಟದ ಕೆಲಸ. ಬಿಗ್ ಬಾಸ್ ಮನೆಯಲ್ಲಿ ಇದು ಅನಿವಾರ್ಯದ ಕೆಲಸ. ಇದನ್ನು ಮಂಜಣ್ಣ ಮತ್ತು ಗೌತಮಿ ಮಾಡಬೇಕಾಗಿತ್ತು' ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.












Click it and Unblock the Notifications