ನಟಿ ಶಿಲ್ಪಾ ಶೆಟ್ಟಿಯ AI ವಿಡಿಯೋ, ಫೋಟೋಸ್ ತೆಗೆದು ಹಾಕಿ: ಬಾಂಬೆ ಹೈಕೋರ್ಟ್ ಆದೇಶ
ನಟಿ ಶಿಲ್ಪಾ ಶೆಟ್ಟಿ ಅವರಿಗೆ ಬಾಂಬೆ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಪರಿಹಾರ ನೀಡಿದೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ತನ್ನ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಹಲವಾರು ಪರಿಚಿತ ಮತ್ತು ಅಪರಿಚಿತ ಸಾಮಾಜಿಕ ಮಾಧ್ಯಮ ವೇದಿಕೆಗಳು, ಕೃತಕ ಬುದ್ಧಿಮತ್ತೆ (ಎಐ)ಸಂಬಂಧಿತ ಸಂಸ್ಥೆಗಳು ಅಥವಾ ಮಾರ್ಫ್ ಮಾಡಿದ ತನ್ನ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ನಿರ್ಬಂಧಿಸುವಂತೆ ಅರ್ಜಿ ಸಲ್ಲಿಸಿದ್ದರು.
ಯಾವುದೇ ವ್ಯಕ್ತಿತ್ವವನ್ನು ಅವರ ಗೌಪ್ಯತೆಯ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಚಿತ್ರಿಸಬಾರದು ಎಂದು ಶಿಲ್ಪಾ ಶೆಟ್ಟಿ ಖಂಡಿಸಿದ್ದರು. ಬಾಂಬೆ ಹೈಕೋರ್ಟ್ ಶುಕ್ರವಾರ ತನ್ನ ತಾತ್ಕಾಲಿಕ ಆದೇಶದಲ್ಲಿ ನಟಿ ಶಿಲ್ಪಾ ಶೆಟ್ಟಿಯ ಅರ್ಜಿಯನ್ನು ಪರಿಗಣಿಸಿತು. ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳು, AI ಸಂಬಂಧಿತ ಸಂಸ್ಥೆಗಳು ಮತ್ತು ಇತರರು ಅವರ ಮಾರ್ಫಿಂಗ್ ಅಥವಾ ಮ್ಯಾನಿಪ್ಯುಲೇಟೆಡ್ ಚಿತ್ರಗಳು, ವೀಡಿಯೋಗಳನ್ನು ಪೋಸ್ಟ್ ಮಾಡದಂತೆ ತಡೆಯಲು ಸೂಚಿಸಿದೆ.

ಎಲ್ಲ URL, ಲಿಂಕ್ ಡಿಲೀಟ್ ಮಾಡಿ
ನಟಿ ಮಾರ್ಫ್ ಮಾಡಿದ ಚಿತ್ರಗಳು ಮತ್ತು ವೀಡಿಯೊಗಳನ್ನು ಹೊಂದಿರುವ ಎಲ್ಲ ಯುಆರ್‌ಎಲ್‌ಗಳು, ಲಿಂಕ್‌ಗಳು, ಪೋಸ್ಟ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ಪ್ರವೇಶವನ್ನು ಅಳಿಸಲು ಅಥವಾ ನಿಷ್ಕ್ರಿಯಗೊಳಿಸಲು ಕೋರ್ಟ್ ನಿರ್ದೇಶನ ನೀಡಿದೆ. ಅಂತಹ ವಿಷಯವು "ಮೊದಲ ನೋಟಕ್ಕೆ ಅತ್ಯಂತ ತೊಂದರೆದಾಯಕ ಮತ್ತು ಕನಿಷ್ಠ ಪಕ್ಷ ಹೇಳುವುದಾದರೆ ಅಸಹ್ಯಕರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬೌದ್ಧಿಕ ಆಸ್ತಿ ಕಾನೂನುಗಳ ಅಡಿಯಲ್ಲಿ ನಟಿ ಪ್ರತಿಪಾದಿಸಿದ ವ್ಯಕ್ತಿತ್ವ ಮತ್ತು ಪ್ರಚಾರ ಹಕ್ಕುಗಳ ದೊಡ್ಡ ಪ್ರಶ್ನೆಗಳನ್ನು ನಿಯಮಿತ ಪೀಠವು ನಿರ್ಧರಿಸುತ್ತದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು. ಸಂವಿಧಾನದ 21ನೇ ವಿಧಿಯಡಿ ನಟಿಯ ಗೌಪ್ಯತೆ ಮತ್ತು ಘನತೆಯ ಹಕ್ಕುಗಳನ್ನು ರಕ್ಷಿಸುವುದು ಕರ್ತವ್ಯ. ಯಾವುದೇ ವ್ಯಕ್ತಿತ್ವವನ್ನು, ಒಬ್ಬ ವ್ಯಕ್ತಿಯನ್ನು ಅಥವಾ ಮಹಿಳೆಯನ್ನು ಅವರ ಒಪ್ಪಿಗೆಯಿಲ್ಲದೆ ಮೂಲಭೂತ ಗೌಪ್ಯತೆಯ ಹಕ್ಕಿನ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಚಿತ್ರಿಸುವಂತಿಲ್ಲ ಎಂದು ಮಧ್ಯಂತರ ಆದೇಶದಲ್ಲಿ ಉಲ್ಲೇಖಿಸಿದೆ.

ನಟಿ ಶಿಲ್ಪಾ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 3.33 ಕೋಟಿಗೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿರುವ ಹೆಸರಾಂತ ಚಲನಚಿತ್ರ ಮತ್ತು ಟಿವಿ ವ್ಯಕ್ತಿತ್ವದವರಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿನ ವಿಷಯಗಳು ಅವರನ್ನು ಅನುಚಿತವಾಗಿ ಮತ್ತು ಸ್ವೀಕಾರಾರ್ಹವಲ್ಲದಂತೆ ಚಿತ್ರಿಸಿವೆ. ಇದು ಅವರ ಇಮೇಜ್ ಮತ್ತು ಖ್ಯಾತಿಗೆ ಕಳಂಕ ತರುವ ಸಾಧ್ಯತೆಯಿದೆ. ಅಂತಹ ವಿಷಯಗಳ ನಿರಂತರ ಪ್ರಸಾರಕ್ಕೆ ಅವಕಾಶ ನೀಡುವುದರಿಂದ ನಟಿಯ ಘನತೆಯಿಂದ ಬದುಕುವ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ತಕ್ಷಣವೇ ಅವುಗಳನ್ನು ರದ್ದುಗೊಳಿಸುವಂತೆ ಆದೇಶಿಸಿದೆ.
ಅನುಮತಿಯಿಲ್ಲದೆ ಫೋಟೋ ಬಳಕೆ
ಕೆಲವರು ಅನುಮತಿಯಿಲ್ಲದೆ ಸೀರೆ ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡಲು ನಟಿಯ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಶಿಲ್ಪಾಶೆಟ್ಟಿ ಪರ ವಕೀಲರು ವಾದಿಸಿದರು. ಇದು ಕೂಡ ಹಕ್ಕುಸ್ವಾಮ್ಯ ಕಾಯ್ದೆ ಹಾಗೂ ಶೆಟ್ಟಿ ಅವರ ವ್ಯಕ್ತಿತ್ವ ಮತ್ತು ಗೌಪ್ಯತಾ ಹಕ್ಕುಗಳನ್ನು ಉಲ್ಲಂಘಿಸುತ್ತದೆ ವಾದಿಸಿದರು. ತಮ್ಮ ಧ್ವನಿ ಮತ್ತು ಇನ್ನಿತರ ನಡವಳಿಕೆಗಳನ್ನು ನಕಲು ಮಾಡಲು, ಮಾರ್ಫ್ ಮಾಡಿದ ಚಿತ್ರಗಳು, ಪೋಸ್ಟರ್‌ಗಳು, ಡೈರಿಗಳನ್ನು ರಚಿಸಲು ಎಐ ಸಾಧನಗಳನ್ನು ಬಳಸಲಾಗುತ್ತಿದೆ ಎಂದು ನಟಿ ಆರೋಪಿಸಿದ್ದಾರೆ. ಇವೆಲ್ಲವೂ ತಮ್ಮ ಒಪ್ಪಿಗೆಯಿಲ್ಲದೆ ನಡೆಯುತ್ತಿದ್ದು, ತಮ್ಮನ್ನು ಅಸಹ್ಯಕರ, ಹಾಸ್ಯ ಮತ್ತು ಅಪಹಾಸ್ಯಕ್ಕೆ ಒಳಪಡಿಸುವ ರೀತಿ ಬಿಂಬಿಸಿ ಹಣ ಗಳಿಸಲಾಗುತ್ತಿದೆ ಎಂದು ದೂರಿದ್ದಾರೆ. ಹೀಗಾಗಿ ತಮ್ಮ ಹೆಸರು, ಚಿತ್ರ, ಧ್ವನಿ ಮತ್ತು ಇತರ ವಿಶಿಷ್ಟ ಗುಣಲಕ್ಷಣಗಳನ್ನು ಬಳಸದಂತೆ ತಡೆಯಾಜ್ಞೆ ನೀಡುವಂತೆ ಶಿಲ್ಪಾ ಶೆಟ್ಟಿ ಕೋರಿದ್ದಾರೆ.
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ












Click it and Unblock the Notifications