ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಹೇಗಿದೆ ಗೊತ್ತಾ?
ನಟ ಶಾರುಖ್ ಅಭಿನಯದ ಬಹು ನಿರೀಕ್ಷಿತ 'ಡಂಕಿ' ಇಂದು ಅದ್ಧೂರಿಯಾಗಿ, ಜಗತ್ತಿನಾದ್ಯಂತ ರಿಲೀಸ್ ಆಗಿದೆ. ಹಲವು ತಿಂಗಳಿಂದ ಕೋಟ್ಯಂತರ ಅಭಿಮಾನಿಗಳು ಈ ಸಿನಿಮಾಗೆ ಉಸಿರು ಬಿಗಿ ಹಿಡಿದು ಕಾಯ್ತಾ ಇದ್ರು. ಹೀಗಾಗಿ 'ಡಂಕಿ' ರಿಲೀಸ್‌ಗೆ ದೊಡ್ಡ ಮಟ್ಟದಲ್ಲಿ ಸಂಭ್ರಮ ಕೂಡ ಮನೆಮಾಡಿತ್ತು. ಇದೀಗ ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಇಂದು ರಿಲೀಸ್ ಆಗಿರುವ ಶಾರುಖ್ ಸಿನಿಮಾಗೆ ರೆಸ್ಪಾನ್ಸ್ ಹೇಗಿದೆ ಗೊತ್ತಾ?
ಶಾರುಖ್ ಖಾನ್ & ರಾಜ್ ಕುಮಾರ್ ಹಿರಾನಿ, ಈ ಕ್ರೇಜಿ ಕಾಂಬಿನೇಷನ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಡಂಕಿ'. ಶಾರುಖ್ ಖಾನ್ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ಮೇಲೆ ಹೊಸ ಹೊಸ ದಾಖಲೆ ಸೃಷ್ಟಿಸೋಕೆ ಎಂಟ್ರಿ ಕೊಟ್ಟಿದ್ದಾರೆ. '3 ಇಡಿಯಟ್ಸ್' ಮತ್ತು 'ಲಗೆ ರಹೋ ಮುನ್ನಾಭಾಯಿ' ಹಾಗೂ 'ಪಿಕೆ' ಸೇರಿದಂತೆ 'ಸಂಜು' & 'ಮುನ್ನಾಭಾಯಿ ಎಂಬಿಬಿಎಸ್' ರೀತಿಯ ಅತ್ಯುತ್ತಮ ಸಿನಿಮಾ ನೀಡಿರುವ ರಾಜ್‌ಕುಮಾರ್ ಹಿರಾನಿ ಇದೇ ಮೊದಲ ಬಾರಿಗೆ, ಶಾರುಖ್ ಖಾನ್ ಜೊತೆ ಸೇರಿ 'ಡಂಕಿ' ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಾಗಾದರೆ ಸಿನಿಮಾ ಹೇಗಿದೆ ಅಂತಿದ್ದಾರೆ ಫ್ಯಾನ್ಸ್?

ಹೇಗಿದೆ ಶಾರುಖ್ ಖಾನ್ ಸಿನಿಮಾ?
ಬಾಲಿವುಡ್ ಬಾದ್ ಶಾ ಅಂತಾ ಬಿರುದು ಪಡೆದಿರುವ ನಟ ಶಾರುಖ್ ಖಾನ್ ಈ ವರ್ಷವೇ ಎರಡೆರಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದಾರೆ. ಹೀಗೆ 2023ರಲ್ಲಿ ಶಾರುಖ್ ಅವರ ಸಾಧನೆ ಕಂಡು ಅವರ ಅಭಿಮಾನಿಗಳು ಖುಷ್ ಆಗಿದ್ದಾರೆ. 'ಜವಾನ್' ಹಾಗೂ 'ಪಠಾಣ್' ಸಿನಿಮಾ ಮೂಲಕ ಅಪ್ಪಟ ಮಾಸ್ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದ ಶಾರುಖ್ ಖಾನ್ ಕೇವಲ ಒಂದೇ ರೀತಿಯ ಸಿನಿಮಾಗೆ ಅಂಟಿಕೊಂಡಿಲ್ಲ. ಇದರ ಭಾಗವಾಗಿ ಇದೀಗ ಡಿಫರೆಂಟ್ ಚಿತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಅದೂ 'ಡಂಕಿ' ಸಿನಿಮಾ ಮೂಲಕ ಸಾಬೀತಾಗಿದೆ. ಹಾಗಾದ್ರೆ ಡಂಕಿ ಸಿನಿಮಾ ಕಥೆ ಎಳೆ ಏನು?
ಡಿಫರೆಂಟ್ ಖಾನ್ ಇಲ್ಲಿದ್ದಾರೆ ನೋಡಿ!
ನಟ ಶಾರುಖ್ ಖಾನ್ 'ಡಂಕಿ' ಸಿನಿಮಾದಲ್ಲಿ ಬೇರೆಯದ್ದೇ ಅವತಾರದಲ್ಲಿ ಎಂಟ್ರಿ ಕೊಟ್ಟು ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಿದ್ದಾರೆ. ಹಾರ್ಡಿ ಸಿಂಗ್ ದಿಲೋನ್ ಎಂಬ, ಮಾಜಿ ಸೈನಿಕನ ಪಾತ್ರ ನಿರ್ವಹಿಸಿದ್ದಾರೆ ಶಾರುಖ್ ಖಾನ್. ಬೇರೆ ದೇಶಕ್ಕೆ ಹೋಗಬೇಕು ಎಂಬ ಹಂಬಲ ಹೊಂದಿದ್ದ ಗೆಳೆಯರ ಗುಂಪು, ಅಚಾನಕ್ ಆಗಿ ಶಾರುಖ್ ಖಾನ್ ಅವರಿಗೆ ಈ ಸಿನಿಮಾದಲ್ಲಿ ಪರಿಚಯ ಆಗುತ್ತದೆ. ಮುಂದೆ ಅವರು ವಿದೇಶಕ್ಕೆ ಹೋಗಲು ಕಳ್ಳದಾರಿ ಮೂಲಕ ಏನೇನೋ ಪ್ಲ್ಯಾನ್ ಮಾಡುತ್ತಾರೆ. ಆದರೆ ಅದರಲ್ಲಿ ಇವರೆಲ್ಲಾ ಸಕ್ಸಸ್ ಆಗ್ತಾರಾ? ಇಲ್ಲ ಸಿಕ್ಕಿಬಿದ್ದು ಸಮಸ್ಯೆಗೆ ಸಿಲುಕುತ್ತಾರಾ? ಎಂಬ ಕಥೆಯನ್ನ ರೋಚಕವಾಗಿ ಕೆತ್ತಿಕೊಡಲಾಗಿದೆ.

ನಿರ್ಮಾಣ ಮಾಡಿರೋದು ಯಾರು?
ಸಿನಿಮಾದಲ್ಲಿ ಶಾರುಖ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು & ವಿಕ್ಕಿ ಕೌಶಲ್ ಸೇರಿ ಇನ್ನೂ ಪ್ರಮುಖ ಸ್ಟಾರ್‌ಗಳು ನಟಿಸಿದ್ದಾರೆ. ಬಾಲಿವುಡ್ ಬಾದ್ ಶಾ ಶಾರುಖ್‌ರ ಸಿನಿಮಾಗಳಲ್ಲೇ ಈ ಸಿನಿಮಾ, ಅತ್ಯುದ್ಭುತ ಎನಿಸಿಕೊಳ್ಳುತ್ತಿದೆ. 'ಡಂಕಿ' ಸಿನಿಮಾವನ್ನು ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್, ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಸೇರಿದಂತೆ ಜಿಯೋ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ.
ಒಟ್ನಲ್ಲಿ ರಾಜ್‌ಕುಮಾರ್ ಹಿರಾನಿ ಮತ್ತೊಮ್ಮೆ ತಾವು ಏಕೆ ಡಿಫರೆಂಟ್? ಅನ್ನೋದನ್ನ 'ಡಂಕಿ' ಸಿನಿಮಾ ಮೂಲಕ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಹಾಗೇ ಶಾರುಖ್ ಖಾನ್ ಫ್ಯಾನ್ಸ್‌ಗು ಮತ್ತಷ್ಟು ಹತ್ತಿರವಾಗಿದ್ದಾರೆ. ಸಿನಿಮಾಗೆ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಸಿಕ್ಕಿದೆ. ಇಷ್ಟೆಲ್ಲದರ ನಡುವೆ ಜಗತ್ತಿನ ವಿವಿಧ ದೇಶದಲ್ಲಿ 'ಡಂಕಿ' ಅಬ್ಬರ ಅದ್ಧೂರಿಯಾಗಿ ಆರಂಭವಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಗಲ್ಲಾಪೆಟ್ಟಿಗೆ ದಾಖಲೆ ಉಡೀಸ್ ಮಾಡುವ ಸೂಚನೆ ಸಿಕ್ಕಿದೆ.












Click it and Unblock the Notifications