Salman Khan: ಸಿಕ್ಸ್‌ಪ್ಯಾಕ್‌ ಕಳೆದುಕೊಂಡ್ರಾ ಸಲ್ಮಾನ್‌ ಖಾನ್‌? ಹೊಟ್ಟೆ ಬೊಜ್ಜಿನ ವಿಡಿಯೋ ವೈರಲ್‌

ಬಾಲಿವುಡ್‌ನ ಟಾಪ್‌ ನಟರಾದ ಸಲ್ಮಾನ್‌ ಖಾನ್‌ (Salman Khan) ಅವರು ತಮ್ಮ ಸಿಕ್ಸ್‌ಪ್ಯಾಕ್‌ ಮೈಕಟ್ಟಿನಿಂದಲೇ ಸಖತ್‌ ಫೇಮಸ್‌. ಇದಕ್ಕೆ ಅಪಾರ ಅಭಿಮಾನಿಗಳು ಕೂಡ ಇದ್ದಾರೆ. ಸದಾ ಜಿಮ್‌ನಲ್ಲಿ ವರ್ಕೌಟ್‌ ಮಾಡಿ ಸಿನಿಮಾಗಳಲ್ಲಿ ತಮ್ಮ ದೇಹ ಪ್ರದರ್ಶಿಸಿ ಯುವತಿಯರ ನಿದ್ದೆಕೆಡಿಸುತ್ತಿದ್ದರು ಸಲ್ಲು. ಆದ್ರೆ ಇತ್ತೀಚೆಗೆ ಸಲ್ಮಾನ್‌ ಅವರ ಸಿಕ್ಸ್‌ಪ್ಯಾಕ್‌ ಕಣ್ಮರೆಯಾಗಿದೆ ಎಂದು ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

59 ವರ್ಷದ ಸಲ್ಲು ಭಾಯ್‌ ಇವರೆಗೆ ಮದುವೆಯಾಗುವ ಗೋಜಿಗೆ ಹೋಗಿಲ್ಲ. ಆದರೂ ಅವರಿಗೆ ಮಹಿಳಾ ಅಭಿಮಾನಿಗಳ ಸಂಖ್ಯೆಯೇನೂ ಕಡಿಮೆ ಇಲ್ಲ. ಈಗಿನ ಜನರೇಷನ್‌ ಹುಡುಗಿಯರಿಗೂ ಸಲ್ಮಾನ್‌ ಖಾನ್‌ ಅಂದ್ರೆ ಒಂಥರಾ ಪಂಚಪ್ರಾಣ. ಇದಕ್ಕೆ ಮುಖ್ಯ ಕಾರಣವೇ ಅವರ ಜಿಮ್‌ ಬಾಡಿ. ಮೈಕಟ್ಟಾದ ದೇಹದೊಂದಿಗೆ ತಮ್ಮ ಸಿನಿಮಾಗಳಲ್ಲಿನ ಆಕ್ಷನ್‌ ಸೀನ್‌ಗಳಲ್ಲಿ ಸಲ್ಲು ಬಾಡಿ ತೋರಿಸೋದು ಫಿಕ್ಸ್‌. ಇದನ್ನು ನೋಡಲೆಂದೇ ಅಭಿಮಾನಿಗಳು ಥಿಯೇಟರ್‌ಗಳಿಗೆ ನುಗ್ಗೋದು ಕೂಡ ಸತ್ಯ. ಈ ರೀತಿ ಕ್ರೇಜ್‌ ಹುಟ್ಟಿಸಿದ್ದ ಸಲ್ಮಾನ್‌ ಅವರು ಸಿಕ್ಸ್‌ಪ್ಯಾಕ್‌ ಕಳೆದುಕೊಂಡ್ರಾ ಎಂದು ಚರ್ಚೆ ನಡೆಯುತ್ತಿದೆ.

Bollywood Salman Khan Belly In Viral Video Sparks Buzz Over Missing Six-Pack

ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಸಲ್ಮಾನ್‌ ಖಾನ್‌ಗೆ ಸಿಕ್ಸ್‌ಪ್ಯಾಕ್‌ ಇಲ್ಲ, ಬದಲಿಗೆ ಹೊಟ್ಟೆ ಬೊಜ್ಜು ಬಂದಿದೆ ಎಂದು ಹಲವರು ಈ ವಿಡಿಯೋ ಶೇರ್‌ ಮಾಡಿದ್ದಾರೆ. ಇಷ್ಟಕ್ಕೂ ವಿಡಿಯೋದಲ್ಲಿ ಸಲ್ಮಾನ್‌ ಖಾನ್‌ ಇಬ್ಬರು ಯುವತಿಯರೊಂದಿಗೆ ಡ್ಯಾನ್ಸ್‌ ಮಾಡಿದ್ದಾರೆ. ಈ ವೇಳೆ ಕುಣಿಯುತ್ತಿದ್ದಾಗ ಸಲ್ಮಾನ್‌ ಅವರ ಹೊಟ್ಟೆ ಭಾಗದಲ್ಲಿ ಬೊಜ್ಜು ಇರುವಂತೆ ಕಂಡುಬಂದಿದೆ.

ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ನಾವು ನೋಡಿದ ಸಲ್ಲು ಭಾಯ್‌ ಇವರೇನಾ? ಎಂದು ಶಾಕ್‌ ಆಗಿದ್ದಾರೆ. ಅಸಲಿಗೆ ಇದು ನಿಜವೋ ಸುಳ್ಳೋ ಎಂಬ ಬಗ್ಗೆ ಇನ್ನೂ ದೃಢವಾಗಿಲ್ಲ. ಸೋಶಿಯಲ್‌ ಮೀಡಿಯಾದಲ್ಲಂತೂ ವಿಡಿಯೋ ಸಖತ್‌ ಸೌಂಡ್‌ ಮಾಡ್ತಿದೆ. ಇದಕ್ಕೆ ಕಾಮೆಂಟ್‌ ಮಾಡಿರುವ ಹಲವರು ಸಲ್ಲುಗೆ ವಯಸ್ಸಾಯ್ತು ಎಂದು ಗೇಲಿ ಮಾಡಿದ್ದಾರೆ. ಇದಕ್ಕೆ ಇನ್ನಷ್ಟು ವಿಡಿಯೋಗಳ ಮೂಲಕ ಕಾಮೆಂಟ್‌ ಮಾಡಿದ್ದು, ಸಲ್ಮಾನ್‌ ಭಾಯ್‌ಗೆ ಸಿಕ್ಸ್‌ಪ್ಯಾಕ್‌ ಇದೆ, ಚೂರು ದೊಡ್ಡದಾದ ಹೊಟ್ಟೆಯೊಂದಿಗೆ ಇದೆ ಎಂದು ಕಾಲೆಳೆದಿದ್ದಾರೆ.

Bollywood Salman Khan Belly In Viral Video Sparks Buzz Over Missing Six-Pack

ಸಲ್ಲು ಪೋಸ್ಟ್‌ ವಿವಾದ

ಇತ್ತೀಚೆಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮದ ಬಗ್ಗೆ ಪೋಸ್ಟ್‌ ಮಾಡುವ ಮೂಲಕ ಸಲ್ಮಾನ್‌ ಖಾನ್‌ ವಿವಾದಕ್ಕೆ ಕಾರಣವಾಗಿದ್ದರು. ಭಾರತ-ಪಾಕ್ ನಡುವಿನ ಕದನ ವಿರಾಮಕ್ಕೆ ಧನ್ಯವಾದಗಳು ದೇವರೇ ಎಂದು ಸಲ್ಲು ಮಾಡಿದ್ದ ಪೋಸ್ಟ್‌ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಭಾರಿ ವಿರೋಧಕ್ಕೆ ಕಾರಣವಾಗಿದ್ದರಿಂದ ಕೂಡಲೇ ಆ ಪೋಸ್ಟ್ ಡಿಲೀಟ್ ಮಾಡಿದ್ದರು.

ಆಪರೇಷನ್ ಸಿಂಧೂರ್‌ ಮೂಲಕ ಉಗ್ರರಿಗೆ ಭಾರತ ತಕ್ಕ ಪಾಠ ಕಲಿಸಿದೆ ಎಂದು ಸಿನಿಮಾ ರಂಗದ ಹಲವರು ಶ್ಲಾಘಿಸಿ ಸೇನೆಯ ಪರ ಪೋಸ್ಟ್‌ ಹಂಚಿಕೊಂಡಿದ್ದರು. ಆದರೆ, ಸಲ್ಮಾನ್ ಖಾನ್‌ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕದನ ವಿರಾಮ ಘೋಷಣೆ ಆದ ಕೂಡಲೇ ಸಲ್ಮಾನ್‌ ಪ್ರತಿಕ್ರಿಯಿಸಿದ್ದಕ್ಕೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಜಾಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+