Sherlyn Chopra: ರಾಹುಲ್ ಗಾಂಧಿ ಜತೆ ಮದುವೆಗೆ ಷರತ್ತು ಹಾಕಿದ ಬಾಲಿವುಡ್ ನಟಿ
ಬೆಂಗಳೂರು, ಆಗಸ್ಟ್ 08: ಸ್ಟಿಲ್ ಬ್ಯಾಚುಲರ್ ರಾಜಕಾರಣಿಯಾಗಿರುವ ಏಳು ದಶಕ ದೇಶವಾಳಿದ ಕಾಂಗ್ರೆಸ್ ಪಕ್ಷದ ಅಗ್ರ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಅದೇಷ್ಟೋ ಹೆಣ್ಣುಮಕ್ಕಳಿಗೆ ಕ್ರಶ್ ಆಗಿದ್ದೂ ಇದೆ. ಈ ಪೈಕಿ ಕೆಲವು ಮಹಿಳಾ ಸೆಲೆಬ್ರೆಟಿಗಳು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳಿದ್ದಾರೆ. ಇದರಲ್ಲಿ ಇಬ್ಬರು ಬಾಲಿವುಡ್ ನಟಿಯರು ಇದ್ದಾರೆ.
ದೈಹಿಕವಾಗಿ ಫಿಟ್ ಇರುವ ರಾಹುಲ್ ಗಾಂಧಿ ಅವರು ವಯನಾಡಿನ ಸಂಸದರು. ರಾಜಕೀಯವಾಗಿ ಅವರು ಒಂದಿಲ್ಲ ಒಂದು ವಿಚಾರವಾಗಿ ಅವರು ಚರ್ಚೆಯಲ್ಲಿರುತ್ತಾರೆ. ಇದೀಗ ಅವರನ್ನು ತಾನು ಮದುವೆ ಆಗುತ್ತೇನೆ, ಆದರೆ ಒಂದು ಕಂಡೀಷನ್ ಇದೆ ಎಂದು ಹೇಳುವ ಮೂಲಕ ನಟಿ ಶೆರ್ಲಿನ್ ಚೋಪ್ರಾ ಅಚ್ಚರಿ ಮೂಡಿಸಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಟಿ ಶೆರ್ಲಿನ್ ಚೋಪ್ರಾಗೂ ಮೊದಲು ಹಿಂದಿ (ಬಾಲಿವುಡ್) ನಟಿ ಕರೀನಾ ಕಪೂರ್ ಅವರಿಗೂ ರಾಹುಲ್ ಗಾಂಧಿ ಅವರ ಮೇಲೆ ಕ್ರಶ್ ಆಗಿತ್ತು ಎಂಬುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ರಾಹುಲ್ ಗಾಂಧಿ ಜೊತೆಗೆ ಡೇಟಿಂಗ್ ಹೋಗಬೇಕು
ಹಲವು ವರ್ಷಗಳ ಹಿಂದೆ ಶಾಹಿದ್ ಕಪೂರ್, ಹೃತಿಕ್ ರೋಷನ್ ಜತೆಗೆ ಡೇಟಿಂಗ್ ಮುಗಿಸಿ ಕೊನೆಗೆ ಮತ್ತೊಬ್ಬ ಹಿಂದಿ ನಟರಾದ ಸೈಫ್ ಅಲಿ ಖಾನ್ ಅವರನ್ನು ಕರೀನಾ ಕಫೂರ್ ವರಿಸಿದರು. ಕರೀನಾ ತಮಗೂ ಸಹ ರಾಹುಲ್ ಗಾಂಧಿ ಎಂದರೆ ಇಷ್ಟವೆಂದು ಅವರು ಹೇಳಿಕೊಂಡಿದ್ದರು. ಅದಷ್ಟೇ ಅಲ್ಲ ನಟಿಯಾಗಿರುವ ಅವರು ರಾಜಕಾರಣಿಯಾದ ರಾಹುಲ್ ಗಾಂಧಿ ಅವರ ಜೊತೆಗೆ ಡೇಟಿಂಗ್ ಮಾಡಬೇಕೆಂದು ಹೇಳಿದ್ದರು.
ಚಾಟ್ ಶೋ 'Rendezvous with Simi Garewal' ನಲ್ಲಿ ಸಂದರ್ಶನ ವೇಳೆ ಕರೀನಾ ಕಪೂರ್ ತಾವು ಯಾರೊಂದಿಗೆ ಡೇಟ್ ಮಾಡಲು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತಿರಿಸಿದ ಅವರು, ರಾಹುಲ್ ಗಾಂಧಿ ಎಂದು ತಿಳಿಸಿದ್ದರು. ರಾಜಕಾರಣಿಯಾಗಿರುವ ಅವರಲ್ಲಿ ಏನೋ ವಿಶೇಷತೆ ಇದೆ. ಅವರೊಂದಿಗೆ ಮಾತನಾಡಲು ಉತ್ಸುಕಳಾಗಿದ್ದೇನೆ. ನಾನು ನಟಿ, ಅವರು ರಾಜಕಾರಣಿ ಹೀಗಾಗಿ ಅವರೊಂದಿಗೆ ಡೇಟ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.

ಮದುವೆ ಆಗ್ತೀನಿ ಆದ್ರೆ 'ಸರ್‌ನೇಮ್' ಬದಲಿಸಲ್ಲ
ಇದೀಗ ಬ್ಯೂಟಿ ಶೆರ್ಲಿನ್ ಚೋಪ್ರಾ ಅವರು ಕರೀನಾ ಕಪೂರ್‌ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ನಾನು ರಾಹುಲ್ ಗಾಂಧಿ ಅವರನ್ನು ಮದುವೆ ಆಗುತ್ತೇನೆ ಆದರೆ, ಎಂದು ಷರತ್ತು ವಿಧಿಸಿದ್ದಾರೆ. ಮುಂಬೈ ಬಾಂದ್ರಾದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ಶೆರ್ಲಿನ್‌ಗೆ ಪಾಪರಾಜಿ ಒಬ್ಬರು ರಾಹುಲ್ ಗಾಂಧಿ ಅವರನ್ನು ಮದುವೆ ಆಗುತ್ತೀರಾ ಎಂದು ಫನ್ನಿಯಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಹೌದು ಅವರನ್ನು ಮದುವೆಯಾಗುತ್ತೇನೆ, ಆದರೆ ನನ್ನ ಸರ್‌ನೇಮ್ ಬದಲಿಸಲ್ಲ ಎಂದು ಫನ್ನಿಯಾಗಿ ಕಂಡಿಷನ್ ಹಾಕಿದ್ದಾರೆ.
53ವರ್ಷದ ಸ್ಟಿಲ್ ಬ್ಯಾಚುಲರ್ ರಾಹುಲ್ ಗಾಂಧಿ ಅವರು ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಜೀವಿತಾವಧಿಯ ಅರ್ಧ ಆಯಸ್ಸು ಕಳೆದರೂ ಅವರಿಗೆ ಇನ್ನೂ ವಿವಾಹವಾಗಿಲ್ಲ.












Click it and Unblock the Notifications