Hanumantha: ಅಭಿಮಾನಿಗೆ ಸನ್ಮಾನ ಮಾಡಿದ ಬಿಗ್‌ಬಾಸ್ ವಿನ್ನರ್ ಹನುಮಂತ
ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆದ ಬಳಿಕ ಹನುಮಂತ ಅವರು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಎಲ್ಲರೂ ಕೂಡ ಭಾವಿಸಿದ್ದರು. ಆದರೆ ಹನುಮಂತ ಈಗ ಯಾವ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ತಾನಾಯ್ತು, ತನ್ನ ಹಾಡಾಯ್ತು, ತನ್ನ ಊರು ಆಯ್ತು ಅಂತ ಸುಮ್ಮನಿದ್ದಂತೆ ಕಾಣಿಸುತ್ತಿದೆ. ಇದೀಗ ಹನುಮಂತನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆ ವೀಡಿಯೋದಲ್ಲಿನ ದೃಶ್ಯ ಕಂಡು ಜನ ತುಂಬಾ ಸಂತೋಷಗೊಂಡಿದ್ದಾರೆ.
ಹೌದು... ಹನುಮಂತ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಅವರು ರಿಯಾಲಿಟಿ ಶೋಗೆ ಹೋಗುತ್ತಲೇ ಇಲ್ಲ. ಇನ್ನೂ ಹನುಮಂತ ಊರಲ್ಲಿ ಜನರ ಜೊತೆಗೆ ಬೆರೆತು ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಜನರಿಗೆ ಹತ್ತಿರವಾಗುತ್ತಿದ್ದಾರೆ.

ಹನುಮಂತ ಅವರಿಗೆ ಸಿನಿಮಾ ಆಫರ್ ಕೂಡ ಬಂದಿತ್ತು. ಆದರೆ ಸದ್ಯಕ್ಕೆ ಸಿನಿಮಾದಲ್ಲಿ ನಟಿಸಲು ಹನುಮಂತ ಮನಸ್ಸು ಮಾಡಿಲ್ಲ. ಬದಲಿಗೆ ತಾವು ಕಿರುತೆರೆಯಲ್ಲೇ ಇರಲು ಇಷ್ಟಪಟ್ಟಿದ್ದಾರೆ. ಅಲ್ಲದೆ ಹನುಮಂತ ಅವರಿಗೆ ರಾಜಕೀಯಕ್ಕೆ ಸೇರಿಕೊಳ್ಳಲು ಹಲವಾರು ಪಕ್ಷದ ನಾಯಕರು ಮಾತುಕತೆ ನಡೆಸಿದ್ದಾರೆ. ಆದರೆ ಅದಕ್ಕೂ ಕೂಡ ಹನುಮಂತ ಆಸಕ್ತಿ ತೋರಿಸಿಲ್ಲ. ಇನ್ನೂ ರಿಯಾಲಿಟಿ ಶೋನಲ್ಲೂ ಹನುಮಂತ ಕಳೆದ ವಾರದಿಂದ ಕಾಣಿಸಿಕೊಳ್ಳುತ್ತಿಲ್ಲ.
ಅಭಿಮಾನಿಗೆ ಸನ್ಮಾನ ಮಾಡಿದ ಹನುಮಂತ
ಇದೀಗ ಹನುಮಂತನ ಅಭಿಮಾನಿಯೊಬ್ಬರು ಅವರ ಮನೆಗೆ ತೆರಳಿ ಸನ್ಮಾನ ಮಾಡಲು ಬಯಸಿದ್ದರು. ಇದಕ್ಕೆ ಹನುಮಂತ ಮಾಡಿದ್ದು ಏನು ಗೊತ್ತಾ? 'ಅಣ್ಣ ನೀನು ನನ್ನ ಅಭಿಮಾನಿ ಅಲ್ಲ ನಾನು ನಿನ್ನ ಅಭಿಮಾನಿ' ಎಂದು ಅವರಿಗೇ ಸನ್ಮಾನ ಮಾಡಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಹನುಮಂತ ಎಷ್ಟೇ ದೊಡ್ಡ ಹೆಸರು ಮಾಡಿದ್ದರೂ ಕೂಡ ಸಾಮಾನ್ಯ ಜನರಂತೆ ಜೀವನ ಮಾಡುತ್ತಾರೆ. ಮನೆಗೆ ಬಂದ ಅಭಿಮಾನಿಯನ್ನು ಅತಿಥಿಯಂತೆ ಸತ್ಕರಿಸಿ ಕಳುಹಿಸಿದ್ದಾರೆ. ಈ ವೇಳೆ ಹನುಮಂತ ಅವರ ಭಾವ ಚಿತ್ರವನ್ನು ಬಿಡಿಸಿದ ಅಭಿಮಾನಿಯ ಕಲೆಯನ್ನು ಹನುಮಂತ ಮೆಚ್ಚಿಕೊಂಡಿದ್ದಾರೆ.
ಅಭಿಮಾನಿಯ ಕಲೆಗೆ ಮೆಚ್ಚಿದ ಹಳ್ಳಿ ಹೈದ
ಅಭಿಮಾನಿಯ ಕಲೆಯನ್ನು ಮೆಚ್ಚಿಕೊಂಡ ಹನುಮಂತ ಅಭಿಮಾನಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಇದು ಹನುಮಂತನ ನಿಜವಾದ ವ್ಯಕ್ತಿತ್ವವನ್ನು ತೋರಿಸುತ್ತದೆ. ಹನುಮಂತನ ಈ ಗುಣ ಅವರ ಅಭಿಮಾನಿಗಳ ಹೃದಯದ ಬಾಗಿಲನ್ನು ತಟ್ಟಿದೆ.
ಬಿಗ್‌ಬಾಸ್ ಮನೆಯಲ್ಲಿ ಇರುವಷ್ಟು ದಿನ ಹನುಮಂತ ಸಾಕಷ್ಟು ಅಭಿಮಾನಿಗಳನ್ನು ಆಸ್ತಿಯಂತೆ ಗಳಿಸಿದ್ದಾರೆ. ಒಂದು ಪಕ್ಷ ಆಸ್ತಿ ಕರಗಬಹುದು. ಆದರೆ ಹನುಮಂತನ ಆಸ್ತಿ ಕರಗಲು ಅಥವಾ ಕಳೆದು ಹೋಗಲು ಸಾಧ್ಯವೇ ಇಲ್ಲ. ಹನುಮಂತನ ಸರಳತೆ, ಮಾತು, ಹಾಡು ಎಲ್ಲವೂ ಕೂಡ ಅಭಿಮಾನಿಗಳಿಗೆ ತುಂಬಾ ಹತ್ತಿರವಾಗಿದೆ. ಹನುಮಂತನ ಹಾಡಿಗಂತೂ ಜನ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ಹೀಗಾಗಿ ಹನುಮಂತ ಹೋದಲ್ಲಿ ಬಂದಲ್ಲಿ ಜನ ಸಾಗರವೇ ಸೇರುತ್ತಿದೆ.
ಐಷಾರಾಮಿ ಜೀವನ ಬಿಟ್ಟು ಎಷ್ಟೇ ಹೆಸರು ಮಾಡಿದ್ದರೂ ಕೂಡ ಸರಳವಾಗಿ ಇರುವ ಹನುಮಂತನನ್ನು ಜನ ಮೆಚ್ಚಿಕೊಂಡಿದ್ದಾರೆ. ಹನುಮಂತ ಕೂಡ ಜನಸಾಮಾನ್ಯರ ನಡುವೆ ಇರಲು ಬಯಸುವುದರಿಂದ ಜನರಿಗೆ ತುಂಬಾ ಇಷ್ಟವಾಗುತ್ತಿದ್ದಾರೆ.












Click it and Unblock the Notifications