Bigg Boss: ಟ್ರೋಫಿ ಗೆಲ್ಲಬೇಕಿದ್ದ ಟಾಪ್ ಸ್ಪರ್ಧಿ ಔಟ್
ಬಿಗ್‌ಬಾಸ್ ವೀಕ್ಷಕರ ಬಹುನಿರೀಕ್ಷಿತ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಇಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಭರ್ಜರಿ ಡ್ಯಾನ್ಸ್ ಮಾಡಲಿದ್ದಾರೆ. ಈ ಪ್ರೋಮೋವನ್ನು ಕಲರ್ಸ್ ಕನ್ನಡ ಈಗಾಗಲೇ ಹಂಚಿಕೊಂಡಿದ್ದು ಭಾರೀ ಕುತೂಹಲವನ್ನು ಮೂಡಿಸಿದೆ. ಅಲ್ಲದೆ ಈ ವೀಡಿಯೋ ಕ್ಲಿಪ್‌ನಲ್ಲಿ ಕಿಚ್ಚನ ಡ್ಯಾನ್ಸ್ ಕಂಡು ಅಭಿಮಾನಿಗಳಲ್ಲಿ ಪುಳಕ ಹೆಚ್ಚಾಗಿದೆ. ಆದರೀಗ ಬಂದ ಸುದ್ದಿ ಪ್ರಕಾರ ಬಿಗ್‌ಬಾಸ್ ಮನೆಯಲ್ಲಿ ಉಳಿದಿದ್ದ ಆರು ಜನ ಸ್ಪರ್ಧಿಗಳಲ್ಲಿ ಒಬ್ಬರು ಎಲಿಮಿನೇಟ್ ಆಗಿದ್ದಾರೆ. ಹಾಗಾದರೆ ಆ ಸ್ಪರ್ಧಿ ಯಾರು?
ಇಂದು (ಜನವರಿ 25) ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗಿದ್ದು ಕಾರ್ಯಕ್ರಮ ಪ್ರಸಾರವಾಗುವುದದೊಂದೇ ಬಾಕಿ ಇದೆ. ಈಗಾಗಲೇ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇಂದಿನ ದಿನ ಏನೆಲ್ಲಾ ನಡೆಯಲಿದೆ ಎನ್ನುವ ಕುತೂಹಲ ಮೂಡಿದೆ.

ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದು, ಇತ್ತೀಚೆಗೆ ತೆರೆಕಂಡ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದ ಹಾಡಿಗೆ ಅವರು ನೃತ್ಯ ಮಾಡಿದ್ದು ಪ್ರೋಮೋದಲ್ಲಿ ಕಂಡು ಬಂದಿದೆ. ಅಲ್ಲದೆ ಶಾಕಿಂಗ್ ವಿಚಾರ ಅಂದರೆ ಮನೆಯಲ್ಲಿ ಉಳಿದ ಟಾಪ್ ಆರು ಸ್ಪರ್ಧಿಗಳಲ್ಲಿ ಒಬ್ಬರು ಗ್ರ್ಯಾಂಡ್ ಫಿನಾಲೆಗೂ ಮುನ್ನ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ಟ್ರೋಫಿ ಗೆಲ್ಲಬೇಕಿದ್ದ ಟಾಪ್ ಸ್ಪರ್ಧಿ ಔಟ್
ಹೌದು.. ಬಿಗ್‌ಬಾಸ್ ಮನೆಯಲ್ಲಿ ತ್ರಿವಿಕ್ರಮ್, ಹನುಮಂತ, ಮಂಜು, ರಜತ್, ಭವ್ಯಾ ಹಾಗೂ ಮೋಕ್ಷಿತಾ ಉಳಿದುಕೊಂಡಿದ್ದಾರೆ. ಈ ಸ್ಪರ್ಧಿಗಳಲ್ಲಿ ಗ್ರ್ಯಾಂಡ್ ಫಿನಾಲೆಗೂ ಮೊದಲು ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಭವ್ಯಾ ಗೌಡ ಅವರು ಅತೀ ಕಡಿಮೆ ಓಟ್ ಪಡೆದುಕೊಂಡು ಗ್ರ್ಯಾಂಡ್ ಫಿನಾಲೆಗೂ ಮೊದಲೇ ಎಲಿಮಿನೇಟ್ ಆಗಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಭವ್ಯಾ ತುಂಬಾ ಸ್ಟ್ರಾಂಗ್ ಸ್ಪರ್ಧಿ ಆಗಿದ್ದರು. ಯಾವುದೇ ಕಾರಣಕ್ಕೂ ಅವರು ಎಲಿಮಿನೇಟ್ ಆಗಲ್ಲ ಎಂದು ಭಾವಿಸಲಾಗಿತ್ತು. ಆದರೆ ಭವ್ಯಾ ಗೌಡ ಗ್ರ್ಯಾಂಡ್ ಫಿನಾಲೆಗೂ ಮುನ್ನ ಮನೆಯಿಂದ ಹೊರ ಬಂದಿದ್ದಾರೆ. ಇದರಿಂದಾಗಿ ಟ್ರೋಫಿ ಪಡೆಯುವ ಕನಸು ನುಚ್ಚು ನೂರಾಗಿದೆ. ವಿನ್ನರ್ ರೇಸ್‌ನಲ್ಲಿ ಇದ್ದ ಭವ್ಯಾ ಗೌಡ ಅವರು ಹೊರ ಬಂದಿದ್ದಕ್ಕಾಗಿ ಅವರು ಕುಟುಂಬಸ್ಥರು ಹಾಗೂ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಮನೆಯಲ್ಲಿ ಐದು ಜನ ಉಳಿದುಕೊಂಡಿದ್ದು ವಿಜೇತರ ಓಟದಲ್ಲಿ ತ್ರಿವಿಕ್ರಮ್ ಹಾಗೂ ಹನುಮಂತ ಇದ್ದಾರೆ. ಭವ್ಯಾ ಬಳಿಕ ಮನೆಯಿಂದ ಹೊರ ಬರುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಗ್ರ್ಯಾಂಡ್ ಫಿನಾಲೆ ಆರಂಭವಾಗಲಿದ್ದು ಮನೆಯಿಂದ ಹೊರ ಬಂದ ಭವ್ಯಾ ಏನ್ ಹೇಳಿದ್ರು? ಯಾರನ್ನು ಔಟ್ ಮಾಡಲು ಇತ್ತಿಸುತ್ತಾರೆ? ಯಾರನ್ನು ಉಳಿಸಲು ಇಚ್ಚಿಸಿದ್ದಾರೆ ಎಲ್ಲವೂ ಗೊತ್ತಾಗಲಿದೆ.












Click it and Unblock the Notifications