Bigg Boss: ಬಿಗ್‌ಬಾಸ್‌ ಮನೆಯಲ್ಲಿ ಶಿಶಿರ್ ಐಶ್ವರ್ಯಾ ಫೇವರ್ ಗೇಮ್- ಐಶ್‌ಗೆ ಕಿಸ್ ಕೇಳಿದ ರಜತ್!

ವಾರಾಂತ್ಯದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಿಗೆ ತರಾಟೆ ತೆಗೆದುಕೊಂಡಿದ್ದ ಕಿಚ್ಚ ಸುದೀಪ್ ಫೇವರ್‌ ಗೇಮ್ ಸಿಲ್ಲಿಸುವಂತೆ ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದರು. ಈ ವಿಚಾರದಲ್ಲಿ ಗೌತಮಿ, ಉಗ್ರಂ ಮಂಜು ಹಾಗೂ ಮೋಕ್ಷಿತಾಗೆ ಸರಿಯಾಗೇ ಕ್ಲಾಸ್ ತೆಗೆದುಕೊಳ್ಳಲಾಗಿತ್ತು. ಆದರೀಗ ಮತ್ತೊಂದು ಜೋಡಿ ಮತ್ತದೇ ಆಟ ಶುರು ಮಾಡಿದೆ. ಉಗ್ರಂ ಮಂಜು, ಮೋಕ್ಷಿತಾ, ಗೌತಮಿ ಅವರ ಫೇವರ್ ಗೇಮ್ ಅಂತ್ಯ ಕಂಡಿದೆ ಎಂದು ಅಂದುಕೊಳ್ಳುವಾಗ ಕಳೆದ ದಿನದ ಟಾಸ್ಕ್‌ನಲ್ಲಿ ಮತ್ತದೇ ಆಟ ಮುಂದುವರೆಸಿದ್ದಾರೆ ಕೆಲ ಸ್ಪರ್ಧಿಗಳು.

ಹೌದು... ಬಿಗ್‌ಬಾಸ್‌ ಮನೆಯಲ್ಲಿ ಶಿಶಿರ್ ಹಾಗೂ ಐಶ್ವರ್ಯ ಸಿಂಧೋಗಿ ನಡುವೆ ಸಂಥಿಂಗ್ ಸಂಥಿಂಗ್ ನಡೆದಿದೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈ ವಾರ ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋಗಬೇಕಿದ್ದ ಐಶ್ವರ್ಯ ಬೈ ಲಕ್ ಉಳಿದುಕೊಂಡು ಬಿಟ್ಟರು. ಈ ಸಮಯವನ್ನು ಸದುಪಯೋಗ ಪಡಿಸಿಕೊಂಡು ಜನರ ಮನ ಗೆಲ್ಲುವಂತೆ ಆಡಬೇಕಿದ್ದ ಐಶ್ವರ್ಯರನ್ನು ಮನೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಶಿಶಿರ್.

Bigg boss shishir shastry played favor of aishwarya shindogi rajat asked kiss to aishwarya

ಕಳೆದ ದಿನ ಬಿಗ್‌ಬಾಸ್‌ ಈ ವಾರದ ಟಾಸ್ಕ್‌ನ್ನು ಸ್ಪರ್ಧಿಗಳಿಗೆ ನೀಡಿದ್ದರು. ಇದರಲ್ಲಿ ಮಸ್ತ್‌ ಮಗಾ (MMTv) ಹಾಗೂ ಧೂಳ್ ದಮಾಕಾ (DDTv) ಎಂದು ಎರಡು ತಂಡಗಳನ್ನು ರಚನೆ ಮಾಡಲಾಗುತ್ತದೆ. ಈ ಟಾಸ್ಕ್‌ನಲ್ಲಿ ತಂಡದ ಒಬ್ಬ ಸದಸ್ಯರು ವಾರ್ತೆಗಳನ್ನು ಓದಬೇಕು. ಮುಖ್ಯಾಂಶಗಳು ಎದುರಾಳಿ ತಂಡದವರನ್ನೊಳಗೊಂಡಂತೆ ರಚಿಸಿರಬೇಕು.

ವಾರ್ತೆ ಓದಿದ ಚೈತ್ರಾ-ಐಶ್ವರ್ಯ: ಯಾರದ್ದು ಹೇಗಿತ್ತು?

ಒಂದು ತಂಡದಿಂದ ಚೈತ್ರಾ ಕುಂದಾಪುರ ಅವರು ಬಂದು ವಾರ್ತೆಗಳನ್ನು ಓದುತ್ತಾರೆ. ಚೈತ್ರಾ ಅವರು ಮೊದಲು ಮುಖ್ಯಾಂಶಗಳನ್ನು ಓದಿ ನಂತರ ವಾರ್ತೆಗಳ ವಿವರಣೆಯನ್ನು ನೀಡುತ್ತಾರೆ. ಚೈತ್ರಾ ಓದಿದ ವಾರ್ತೆಯ ತಯಾರಿ ತುಂಬಾ ಚೆನ್ನಾಗಿರುತ್ತದೆ. ಹಳೆಯ ದೂರದರ್ಶನ ವಾಹಿನಿಯಲ್ಲಿ ಹೇಳಿದ ರೀತಿ ಚೈತ್ರಾ ಅವರು ವಾರ್ತೆಗಳನ್ನು ಓದುತ್ತಾರೆ.

ಜೊತೆಗೆ ಐಶ್ವರ್ಯ ಅವರು ಇಡೀ ವೇದಿಕೆಯನ್ನು ಬಳಸಲಿಕೊಂಡು ನೇರವಾಗಿ ವಾರ್ತೆಗಳ ವಿವರಣೆಯನ್ನು ಕೊಡುತ್ತಾರೆ. ಅವರು ವಾರ್ತೆ ಓದುವ ರೀತಿ ಕೂಡ ತುಂಬಾ ಚೆನ್ನಾಗಿ ಇತ್ತು. ಐಶ್ವರ್ಯ ಅವರ ಕೆಲ ಪದಗಳು ಸ್ಪಷ್ಟತೆ ಇರಲಿಲ್ಲ. ಚೈತ್ರ ಅವರು ಓದಿದ ವಾರ್ತೆಯಲ್ಲಿ ಸ್ಪಷ್ಟತೆ ಇತ್ತು, ಚೆನ್ನಾಗಿ ಅದನ್ನು ಪ್ರಸೆಂಟ್ ಕೂಡ ಮಾಡಿದರು. ಚೈತ್ರ ಜಾಸ್ತಿ ರೀಡಿಂಗ್ ಬುಕ್ ನೋಡಿಕೊಂಡು ಹೇಳ್ತಾಯಿದ್ದರು ಆದರೆ ಐಶ್ವರ್ಯ ಸ್ವಲ್ಪ ನೋಡುವುದನ್ನು ಅವೈಡ್ ಮಾಡಿದರು.

Bigg boss shishir shastry played favor of aishwarya shindogi rajat asked kiss to aishwarya

ಈ ಟಾಸ್ಕ್‌ನ ಉಸ್ತುವಾರಿಯನ್ನು ಗೌತಮಿ ಹಾಗೂ ಇನ್ನೊಂದು ತಂಡದಿಂದ ಶಿಶಿರ್ ಅವರು ವಹಿಸಿಕೊಂಡಿರುತ್ತಾರೆ. ಇವರಿಬ್ಬರೂ ತಮ್ಮ ತಮ್ಮ ಎದುರಾಳಿ ತಂಡದವರಿಗೆ ಕೊನೆಯಲ್ಲಿ ಅಂಕಗಳನ್ನು ನೀಡಬೇಕು. ಶಿಶಿರ್ ತಂಡದಲ್ಲಿ ಐಶ್ವರ್ಯ ಇರಲಿಲ್ಲ. ಎದುರಾಳಿ ತಂಡದಲ್ಲಿ ಇದ್ದ ಐಶ್ವರ್ಯ ನ್ಯೂಸ್ ರೀಡ್ ಮಾಡಿದ್ದರು. ಕೊನೆಯಲ್ಲಿ ಶಿಶಿರ್ ಐಶ್ವರ್ಯ ಅವರ ತಂಡಕ್ಕೆ ಹೆಚ್ಚಿನ ಅಂಕ ನೀಡಿದರು. ಇದರಿಂದ ಶಿಶಿರ್ ತಂಡದವರು ಬೇಸರ ವ್ಯಕ್ತಪಡಿಸಿದ್ದಾರೆ.

ಶಿಶಿರ್ ನಿರ್ಧಾರದಿಂದ ಬೇಸರಗೊಂಡ ಧನ್‌ರಾಜ್

ಧನ್‌ರಾಜ್ ಆಟದ ಬಳಿಕ ರಜತ್‌ ಬಳಿ ಶಿಶಿರ್ ಐಶ್ವರ್ಯ ಅವರಿಗೆ ಹೆಚ್ಚಿನ ಅಂಕ ನೀಡಿರುವ ಬಗ್ಗೆ ಹೇಳಿಕೊಳ್ಳುತ್ತಾರೆ. ನಮ್ಮ ತಂಡದಲ್ಲಿ ಚೈತ್ರಾ ಅವರು ಎಷ್ಟೊಂದು ಚೆನ್ನಾಗಿ ನ್ಯೂಸ್ ರೀಡ್ ಮಾಡಿದ್ರು. ಆದರೆ ಶಿಶಿರ್ ಅವರು ಐಶ್ವರ್ಯ ಅವರಿಗೆ ಹೆಚ್ಚು ಅಂಕ ಕೊಟ್ಟರು ಎನ್ನುವ ಮಾತನ್ನ ಹೇಳುತ್ತಾರೆ. ಶಿಶಿರ್ ತಾವು ತಮ್ಮ ತಂಡವನ್ನು ಎತ್ತಿ ಹಿಡಿಯುವ ಬದಲು ಎದುರಾಳಿ ತಂಡಕ್ಕೆ ಹೆಚ್ಚಿನ ಅಂಕ ನೀಡಿ ಐಶ್ವರ್ಯ ಪರವಾಗಿ ಗೇಮ್ ಆಡಿದ್ದು ಸ್ಪಷ್ಟವಾಗಿ ಕಂಡು ಬಂದಿದೆ.

ಐಶ್ವರ್ಯಗೆ ಕಿಸ್ ಕೇಳಿದ ರಜತ್

ಈ ವೇಳೆ ಖುಷಿಯಾಗಿ ಕುಣಿದಾಡಿದ ಐಶ್ವರ್ಯ ಶಿಶಿರ್‌ಗೆ ಒಂದು ಆಫರ್ ಕೊಡುತ್ತಾರೆ. ನೀವು ನಮ್ಮ ಚಾನಲ್‌ಗೆ ಬಂದು ಬಿಡಿ ಒಳ್ಳೆ ಸಂಬಳ ಕೊಡಿಸುತ್ತೇನೆ ಎಂದು ಕರೆ ಕೊಡುತ್ತಾರೆ. ಆಗ ರಜತ್ ನಾನು ನಿಮ್ಮ ಚಾನಲ್‌ಗೆ ಬರುತ್ತೇನೆ ನನಗೆ ಕೆಲಸದ ಜೊತೆಗೆ ಒಂದು ಕಿಸ್ ಕೊಡಬೇಕು ಎಂದು ಐಶ್ವರ್ಯ ಅವರಿಗೆ ಕೇಳುತ್ತಾರೆ. ಆಗ ಐಶ್ವರ್ಯ ಮುಖದಲ್ಲಿ ಅದೆನೋ ಒಂದು ರೀತಿಯ ಬದಲಾವಣೆ ಕಂಡು ಬರುತ್ತದೆ. ಈ ವೇಳೆ ಐಶ್ವರ್ಯ ರಜತ್‌ ಸುತ್ತಮತ್ತು ಹಣ್ಣು ತಿನ್ನುತ್ತಾ ಕೆಲ ಹೊತ್ತು ಒಯ್ಯಾರದಿಂದ ಓಡಾಡುವ ದೃಶ್ಯ ನೋಡುಗರಿಗೆ ಕೊಂಚ ಮಿಸ್ ಹೊಡೆದಿದೆ.

ಇದೊಂದೇ ಟಾಸ್ಕ್‌ ಅಲ್ಲಿ ಅಲ್ಲ. ನಂತರದ ಸವಿ ರುಚಿ ಟಾಸ್ಕ್‌ನಲ್ಲೂ ಧನ್‌ರಾಜ್‌ ತಂಡದ ಹನುಮಂತ ಮಾಡಿದ ಅಡುಗೆ ರುಚಿಯಾಗಿದ್ದರೂ ತ್ರಿವಿಕ್ರಮ್ ಮಾಡಿದ ಅಡುಗೆಗೆ ಅಂಕ ಹೆಚ್ಚಾಗಿ ನೀಡಲಾಗಿದೆ. ಒಟ್ಟಿನಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಮತ್ತದೇ ವರಸೆ ಶುರುವಾಗಿದ್ದು, ಇದೂ ಈ ವಾರವೂ ಮುಂದುವರೆಯುತ್ತಾ ಅಥವಾ ಇಂದಿಗೆ ನಿಲ್ಲುತ್ತಾ ಕಾದು ನೋಡಬೇಕಿದೆ.

ಸವಾಲು ಸ್ವೀಕರಿಸಿ ಮೆಚ್ಚುಗೆ ಪಡೆದ ರಜತ್

ರಜತ್‌ ಕಳೆದ ದಿನ ಟಾಸ್ಕ್‌ನಲ್ಲಿ ತಲೆ ಕೂದಲನ್ನು ತೆಗೆಸಿಕೊಂಡಿದ್ದಾರೆ. ಎದುರಾಳಿ ತಂಡದ ಮಂಜು, ಭವ್ಯ, ತ್ರಿವಿಕ್ರಮ್, ಗೌತಮಿ ಎಲ್ಲರೂ ಕೂಡ ರಜತ್ ಅವರು ತಲೆ ಕೂದಲು ತೆಗೆಯಲು ಒಪ್ಪುವುದಿಲ್ಲ ಎನ್ನುವ ನಂಬಿಕೆಯಿಂದ ಈ ಸವಾಲನ್ನು ಒಡ್ಡಿದ್ದರು. ಆದರೆ ರಜತ್ ಹಿಂದೆಮುಂದೆ ಯೋಚಿಸದೆ ತಲೆ ಕೂದಲು ತೆಗೆಸಿಕೊಂಡಿದ್ದಾರೆ. ಹೀಗಾಗಿ ರಜತ್ ಆಟದ ಶೈಲಿ ಬಿಗ್‌ಬಾಸ್ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಆಟವನ್ನು ಆಟದಂತೆ ಸವಾಲನ್ನು ಸವಾಲಾಗಿ ಸ್ವೀಕರಿಸಿ ತಂಡದ ಸದಸ್ಯರಿಂದಲೂ ರಜತ್ ಮೆಚ್ಚುಗೆ ಪಡೆದಿದ್ದಾರೆ. ಹೀಗಾಗಿ 50 ದಿನಗಳಿಗೂ ಹೆಚ್ಚು ಕಾಲ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ವೈಲ್ಡ್ ಕಾರ್ಡ್ ಆಗಿ ಇತ್ತೀಚೆಗೆ ಆಗಮಿಸಿದ ರಜತ್‌ ತುಂಬಾ ಕಠಿಣ ಸ್ಪರ್ಧೆ ನೀಡುತ್ತಿರುವುದು ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದೇ ರೀತಿ ಆಡಿದರೆ ರಜತ್ ಬಿಗ್‌ಬಾಸ್‌ ಮನೆಯಲ್ಲಿ ಟಾಪ್ ಸ್ಪರ್ಧೆಯಾಗುವುದರಲ್ಲಿ ಅನುಮಾನವೇ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+