ಬಿಗ್‌ಬಾಸ್ ಸಂಗೀತ ಶೃಂಗೇರಿ ಕ್ರಷ್ ಯಾರು ಗೊತ್ತಾ? ಅವರೇ ಹೇಳಿದ್ದಾರೆ ಕೇಳಿ!
ಸಂಗೀತ ಶೃಂಗೇರಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೂ ಈ ನಟಿ ಸಖತ್ ಸದ್ದು ಮಾಡಿದ್ದರು. ಇದೀಗ ಬಿಗ್‌ಬಾಸ್ ಮನೆಯಿಂದ ಹೊರಗಡೆ ಬಂದರೂ, ಸಂಗೀತ ವಿಚಾರ ಸಖತ್ ಸದ್ದು ಮಾಡುತ್ತಿದೆ. ಅದರಲ್ಲೂ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದೇ ತಡ ಹೊಸ ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ್ದಾರೆ ಸಂಗೀತಾ ಶೃಂಗೇರಿ. ಇದೇ ವೇಳೆ ತಮ್ಮ ಕ್ರಷ್ ಬಗ್ಗೆಯೂ ಸಂಗೀತ ಮುಕ್ತವಾಗಿ ಮಾತನಾಡಿದ್ದಾರೆ ಆ ಬಗ್ಗೆ ತಿಳಿಯಲು ಮುಂದೆ ಓದಿ.
ಹೌದು ಸಂಗೀತಾ ಶೃಂಗೇರಿ ಧಾರಾವಾಹಿಗಳ ಮೂಲಕ ಸದ್ದು ಮಾಡುತ್ತಾ ಕೊನೆಗೆ ಕನ್ನಡ ಬೆಳ್ಳಿತೆರೆ ಮೇಲೆ ಕೂಡ ಮಿಂಚಿದ್ದರು. ಅದರಲ್ಲೂ ಕೆಲವು ವರ್ಷದ ಹಿಂದೆ ರಿಲೀಸ್ ಆಗಿದ್ದ ಸಂಗೀತಾ ಶೃಂಗೇರಿ ಅವರ ಸಿನಿಮಾ '777 ಚಾರ್ಲಿ' ಸಖತ್ ಸೌಂಡ್ ಮಾಡಿತ್ತು. ಹಾಗೂ ಬಾಕ್ಸ್ ಆಫಿಸ್‌ನಲ್ಲಿ ಕೂಡ ನೂರಾರು ಕೋಟಿ ಕಮಾಯಿ ಮಾಡಿತ್ತು. ಇದೀಗ ಮತ್ತೊಂದು ಸಿನಿಮಾ ಮೂಲಕ ಸದ್ದು ಮಾಡಲು ಸಂಗೀತಾ ಬಂದಿದ್ದಾರೆ. ಸಂಗೀತಾ ಶೃಂಗೇರಿ ಹಾಗೂ ದೂದ್ ಪೇಡ ದಿಗಂತ್ ಕಾಂಬಿನೇಷನ್ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಇದೇ ವೇಳೆ ನಟಿ ಸಂಗೀತಾ ದಿಗಂತ್ ಅವರು ನನ್ನ ಕ್ರಷ್ ಎಂದಿದ್ದಾರೆ!

ಸಂಗೀತಾ ಶೃಂಗೇರಿ ಕ್ರಷ್ ಯಾರು?
ಅಂದಹಾಗೆ ರಘುವರ್ಧನ್ ನಿರ್ಮಿಸಿ ರಾಘವೇಂದ್ರ ಡೈರೆಕ್ಷನ್ 'ಮಾರಿ ಗೋಲ್ಡ್' ಸಿನಿಮಾದಿಂದ ಭರ್ಜರಿ ಸುದ್ದಿ ಹೊರಬಿದ್ದಿದೆ. ಸಂಗೀತಾ ಶೃಂಗೇರಿ ನಾಯಕಿ ಪಾತ್ರ ನಿರ್ವಹಿಸಿರುವ ಇದೇ ಸಿನಿಮಾದ ಟೀಸರ್ ಅದ್ಧೂರಿಯಾಗಿ ರಿಲೀಸ್ ಆಗಿದೆ. ಹಾಗೇ ಈ ಟೀಸರ್‌ಗೆ ಸಿಕ್ಕಾಪಟ್ಟೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ಇನ್ನೂ ಒಂದು ವಿಶೇಷತೆ ಏನು ಅಂದ್ರೆ 'ಮಾರಿ ಗೋಲ್ಡ್'ನಲ್ಲಿ ಸಂಗೀತಾ ಶೃಂಗೇರಿ ಹಾಗೂ ದೂದ್ ಪೇಡ ದಿಗಂತ್ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಸಂಗೀತಾ ಹಾಗೂ ದಿಗಂತ್ ಜೋಡಿ ಹೊಸ ಪ್ರಯೋಗಕ್ಕೆ ಸಿದ್ಧವಾಗಿದೆ. ಹೀಗೆ ಟೀಸರ್ ಬಿಡುಗಡೆ ವೇಳೆ ಸಂಗೀತಾ ಅವರು ದಿಗಂತ್ ಬಗ್ಗೆ ಹೇಳಿದ್ದೇನು ಗೊತ್ತಾ? ಮುಂದೆ ಓದಿ.
ದಿಗಂತ್ ಸಂಗೀತಾ ಅವರ ಕ್ರಷ್!
ಹೌದು ಈ ಕಾರ್ಯಕ್ರಮದಲ್ಲಿ ನಟಿ ಸಂಗೀತಾ ಶೃಂಗೇರಿ ಮಾತನಾಡುತ್ತಾ, ನಟ ದಿಗಂತ್ ನನ್ನ ಚೈಲ್ಡ್ ವುಡ್ ಕ್ರಷ್. ಅದನ್ನ ಅವರಿಗೂ ಹೇಳಿದ್ದೇನೆ. ಎಲ್ಲಾ ಊಹೆ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ ಎಂದರು ಸಂಗೀತಾ. ಈ ಮೂಲಕ ಈ ಸಿನಿಮಾದಲ್ಲಿ ನಟಿಸಿರುವುದು ಸಖತ್ ಖುಷಿ ಕೊಟ್ಟಿದೆ, ಹಾಗೇ ದಿಂಗತ್ ಅವರ ಜೊತೆಗೆ ನಟನೆ ಮಾಡಿದ್ದು ಕೂಡ ಖುಷಿಯಾಗಿದೆ ಎಂದು ನಟಿ ಸಂಗೀತಾ ಹೇಳಿದರು. ಈ ಮೂಲಕ ನಟಿ ಸಂಗೀತಾ ಶೃಂಗೇರಿ ಇದೇ ಮೊದಲ ಬಾರಿಗೆ ತಮ್ಮ ಕ್ರಷ್ ಯಾರು? ಅನ್ನೋದನ್ನ ಹೇಳಿದ್ದಾರೆ.

ನಟ ದಿಗಂತ್ ಹೇಳಿದ್ದು ಏನು?
ಇನ್ನು ತಮ್ಮ ಸಿನಿಮಾ ಟೀಸರ್ ರಿಲೀಸ್ ಬಗ್ಗೆ ಮಾತನಾಡಿರುವ ನಟ ದಿಗಂತ್, ಹೆಸರಾಂತ ನಿರ್ಮಾಪಕ ಹಣ ನೀಡಿದ್ದು, ಆದ್ರೆ ಅದು ಅಲ್ಲೇ ನಿಂತಿದೆ. ಮಾರಿಗೋಲ್ಡ್ ಮೇಲೆ ನಿರ್ದೇಶಕರ ಜೊತೆ ಸಿನಿಮಾ ಮಾಡಬಹುದು. ಕಥೆ ಇಷ್ಟವಾಯಿತು, ಯಶ್ ಶೆಟ್ಟಿ, ಸಂಗೀತಾ, ಸಂಪತ್, ಕಾಕ್ರೋಚ್ ಸುಧಿ ತಾರಾಬಳಗದಲ್ಲಿ ಇದ್ದಾರೆ. ಟೀಸರ್ ಬಗ್ಗೆ ನಿಮ್ಮ ಅನಿಸಿಕೆಯನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಿ ಎಂದು ಮನವಿ ಮಾಡಿದರು.
ಒಟ್ನಲ್ಲಿ ನಟಿ ಸಂಗೀತಾ ಈಗ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದೇ ತಡ ಸಿನಿಮಾ ವೃತ್ತಿ ಕಡೆಗೆ ಗಮನ ಹರಿಸುತ್ತಿದ್ದಾರೆ. ಅದ್ರಲ್ಲೂ ಸಾಲು ಸಾಲು ಪ್ರಾಜೆಕ್ಟ್ ಅವರ ಕೈಯಲ್ಲಿ ಇವೆ. ಹೀಗಾಗಿ ತಮ್ಮ ಸಿನಿಮಾ ಶೂಟಿಂಗ್‌ನಲ್ಲಿ ಇನ್ನು ಮುಂದೆ ಸಂಗೀತಾ ಫುಲ್ ಬ್ಯೂಸಿ ಆಗಲಿದ್ದಾರೆ. ಆದರೆ ಇದೇ ಸಮಯದಲ್ಲಿ ಸಂಗೀತಾ ಶೃಂಗೇರಿ ತಮ್ಮ ಚೈಲ್ಡ್‌ವುಡ್ ಕ್ರಷ್‌ನ ಬಗ್ಗೆ ಮಾತನಾಡಿದ್ದು ಸಖತ್ ಸುದ್ದಿಯಾಗುತ್ತಿದೆ.











Click it and Unblock the Notifications