Bigg Boss: ವಿಮಾನ ಹೇಗೆ ಸೌಂಡ್ ಮಾಡುತ್ತೆ? ಹನುಮಂತನ ಆ್ಯಕ್ಷನ್‌ಗೆ ಸಿಕ್ಕಾಪಟ್ಟೆ ನಗಾಡಿದ ಕಿಚ್ಚ ಸುದೀಪ್

ಬಿಗ್‌ಬಾಸ್‌ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿರುವ ಹನುಮಂತ ಉತ್ತರ ಕರ್ನಾಟಕ ಶೈಲಿಯಲ್ಲಿ 'ಗೆಳತಿ' ಹಾಡು ಹಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅವರು ಹಾಡನ್ನು ಹಾಡಿದರೆ ಮನೆ ಮಂದಿಯೆಲ್ಲಾ ಕುಳಿತು ಕೇಳಿ ಖುಷಿ ಪಡುವುದು ಮಾತ್ರವಲ್ಲ ಬಿಗ್‌ಬಾಸ್ ವೀಕ್ಷಕರೂ ಕೂಡ ಸಂತೋಷ ಪಡುತ್ತಾರೆ. ಅತ್ಯಂತ ಮುಗ್ದನಾಗಿರುವ ಕುರಿಗಾಯಿ ಹನುಮಂತ ಗಾಯನದ ಮೂಲಕ ಬಿಗ್‌ಬಾಸ್ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಈ ವಾರ ಸುದೀಪ್ ಹನುಮಂತನಿಗೆ ಹಾಡಿನ ಬದಲು ವಿಮಾನ ಸೌಂಡ್ ಹೇಗೆ ಮಾಡುತ್ತದೆ ಎಂದು ಆ್ಯಕ್ಷನ್‌ ಮೂಲಕ ತೋರಿಸಲು ಕೇಳಿದ್ದಾರೆ. ಈ ವೇಳೆ ಹನುಮಂತನ ಆ್ಯಕ್ಷನ್‌ಗೆ ಕಿಚ್ಚ ಸುದೀಪ್ ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ.

ಹೌದು... ಬಿಗ್‌ಬಾಸ್‌ ಮನೆಯಲ್ಲಿ ಪ್ರಸ್ತುತ ವಾರದ ಕತೆ ಕಿಚ್ಚನ ಜೊತೆ ನಡೆಯುತ್ತಿದೆ. ದಿನವಿಡೀ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡು ಸೀರೆಸ್ ಮೂಡ್‌ನಿಂದ ಹೊರಬರಲು ಕಿಚ್ಚ ಸುದೀಪ್ ಹನುಮಂತನಿಗೆ ಒಂದು ಟಾಸ್ಕ್ ನೀಡುತ್ತಾರೆ. ಆ ಟಾಸ್ಕ್‌ನಲ್ಲಿ ಮೋಕ್ಷಿತಾ ಕಣ್ಣಿಗೆ ಬಟ್ಟೆಯನ್ನು ಕಟ್ಟಲಾಗಿರುತ್ತದೆ. ಹನುಮಂತನ ಆ್ಯಕ್ಷನ್‌ ಕೇಳಿಸಿಕೊಂಡು ಮೋಕ್ಷಿತಾ ರಿಯಾಕ್ಷನ್ ಮಾಡುತ್ತಾ ಆ ವಸ್ತುವನ್ನು ಕಂಡು ಹಿಡಿಯಬೇಕು. ಒಂದು ವೇಳೆ ಹನುಮಂತ ಮಾಡುವ ಸೌಂಡ್‌ನಿಮದ ಮೋಕ್ಷಿತಾ ಆ ವಸ್ತು ಕಂಡುಹಿಡಿದರೆ ಹನುಮಂತ ಗೆದ್ದಹಾಗೆ.

bigg boss hanumantha showed how a plane makes sound kichcha sudeep laugh out loud

ಬಿಗ್‌ಬಾಸ್ ಪರದೆಯ ಮೇಲೆ ಒಂದು ಚಿತ್ರವನ್ನು ತೋರಿಸುತ್ತಾರೆ. ಆ ಚಿತ್ರ ಹೆಲಿಕಾಪ್ಟರ್ ಆಗಿರುತ್ತದೆ. ಸೌಂಡ್ ಮಾಡುವ ಮೂಲಕ ಹನುಮಂತ ಮೋಕ್ಷಿತಾ ಅವರಿಗೆ ಹೇಳಬೇಕು. ಮೋಕ್ಷಿತಾ ಇದನ್ನು ಕಂಡು ಹಿಡಿಯಬೇಕು. ಈ ವೇಳೆ ಹನುಮಂತ ಮಾಡಿದ ಆ್ಯಕ್ಷನ್‌ಗಳಿಗೆ ಬಿಗ್‌ಬಾಸ್‌ ಮನೆ ಮಂದಿಯೆಲ್ಲಾ ಸಿಕ್ಕಾಪಟ್ಟೆ ನಗಾಡಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್ ಕೂಡ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.

ಅಷ್ಟಕ್ಕೂ ವಿಮಾನ ಹೇಗೆ ಸೌಂಡ್ ಮಾಡುತ್ತೆ ಅನ್ನೋದನ್ನು ಹನುಮಂತ ಸೌಂಡ್ ಮಾಡಿದ್ದು ಹೇಗೆ ಅಂತ ನೀವು ಕೇಳಿದರೆ ನೀವೂ ಕೂಡ ಸಿಕ್ಕಾಪಟ್ಟೆ ನುಗುವುದರಲ್ಲಿ ಅನುಮಾನವೇ ಇಲ್ಲ. ಇಂದಿನ ಸಂಚಿಕೆಯಲ್ಲಿ ಈ ಕಾಮಿಡಿ ಮೂಮೆಂಟ್ ಪ್ರಸಾರ ಆಗಲಿದೆ. ಈ ಸಂದರ್ಭದ ಒಂದು ಕ್ಲಿಪ್ ಅನ್ನು ಕಲರ್ಸ್ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವೀಡಿಯೋ ಬಿಗ್‌ಬಾಸ್‌ ಪ್ರೇಕ್ಷಕರಿಗೂ ಕೂಡ ಭಾರೀ ಕುತೂಹಲವನ್ನು ಮೂಡಿಸಿದೆ.

bigg boss hanumantha showed how a plane makes sound kichcha sudeep laugh out loud

ವಿಮಾನ ಹೇಗೆ ಸೌಂಡ್ ಮಾಡುತ್ತೆ ಅನ್ನೋದನ್ನು ಹನುಮಂತ ಸೌಂಡ್ ಮಾಡಿದ್ದು ಹೇಗೆ ಗೊತ್ತಾ- ಪಡ್ಡಡ್ಡಡ್ಡಡ್ಡ.... ಪಟ್‌ಪಟ್‌ಪಟ್..... ಇಷ್ಟು ಕೇಳುತ್ತಿದ್ದಂತೆ ಕಣ್ಣಿಗೆ ಬಟ್ಟೆ ಕಟ್ಟಿದ್ದ ಮೋಕ್ಷಿತಾ ಗನ್? ಎಂದು ಕೇಳುತ್ತಾರೆ. ನಂತರ ಹನುಮಂತ ಮತ್ತೆ ಸೌಂಡ್ ಮಾಡುವುದನ್ನು ಮುಂದುವರೆಸುತ್ತಾರೆ. ಡುಗುಡುಗುಡುಗುಡುಗು.... ಆಗ ಮೋಕ್ಷಿತಾ ಬೈಕಾ? ಟ್ರೈನಾ? ಎಂದು ಕೇಳುತ್ತಾರೆ. ಉತ್ತರ ತಪ್ಪಾಗಿರುವುದರಿಂದ ಮತ್ತೆ ಹನುಮಂತ ಸೌಂಡ್ ಮಾಡಲು ಮುಂದುವರೆಸುತ್ತಾರೆ. ಕುಚುಕುಚುಕುಚುಕುಚು... ಓವ್.... ಉಶ್ ಕೂ....... ಗುಡುಗುಡುಕುಚುಕುಚು.... ಎಂದು ಸೌಂಡ್ ಮಾಡುತ್ತಾರೆ. ಆಗ ಮೋಕ್ಷಿತಾ ಬಸ್ಸಾ? ಎಂದು ಕೇಳುತ್ತಾರೆ. ಹನುಮಂತನ ಆ ಸೌಂಡ್‌ಗಳನ್ನ ಕೇಳು ಕಿಚ್‌ ಸುದೀಪ್ ನಗಾಡಿದ್ದು ಕಡಿಮೆ ಏನಾಲ್ಲ.

ಉತ್ತರ ಸರಿ ಇಲ್ಲದೇ ಇರುವುದರಿಂದ ಹನುಮಂತ ಮತ್ತೆ ಸೌಂಡ್ ಮಾಡಲು ಮುಂದುರೆಸುತ್ತಾರೆ. ಕೂ............. ಗುಟುಗುಟುಗುಟು... ಪಟ್‌fಪಟ್‌ಪಟ್‌ ಎಂದು ರಾಗ ತೆಗೆಯುತ್ತಾರೆ. ಆಗ ಮೋಕ್ಷಿತಾ ಯಾವುದಾದರೂ ಪ್ರಾಣಿನಾ? ಪಕ್ಷಿನಾ? ಎಂದು ಕೇಳುತ್ತಾರೆ. ಆಗ ಹನುಮಂತು ಪಟ್‌ಪಟ್‌ಪಟ್.. ಎಂದು ಸೌಂಡ್ ಮಾಡುತ್ತಾರೆ. ಆಗ ಮೋಕ್ಷಿತಾ ಪಟ್‌ಪಟಾ? ಏನಿದು ಎಂದು ಯೋಚನೆ ಮಾಡುತ್ತಾರ. ಹನುಮಾಂತ ಮಾಡುತ್ತಿರುವುದು ವಿಮಾನದ ಸೌಂಡ್ ಅಂತ ಮೋಕ್ಷಿತಾ ಅವರಿಗೆ ಗೊತ್ತಾಗುವುದೇ ಇಲ್ಲ. ಕೊನೆಯಲ್ಲಿ ಹನುಮಂತು ಗೂಂ......... ಅಂತ ರಾಗ ತೆಗೆಯುತ್ತಿದ್ದಂತೆ ಸುದೀಪ್ ಅವರು ಕೌಂಟ್ಡೌನ್ ಮಾಡಲು ಶುರು ಮಾಡುತ್ತಾರೆ.

ಆಗ ಹನುಮಂತ ಸೌಂಡ್‌ ಅನ್ನು ಬೇರೆ ಬೇರೆ ರೀತಿಯಲ್ಲಾ ಬೇಗ ಬೇಗ ಮಾಡುತ್ತಾರೆ. ಕಟ್‌ಪಟ್ ಅಂತ ಹೇಳುತ್ತಾರೆ. ಮೋಕ್ಷಿತಾಗೆ ನಿಜವಾಗಲೂ ಅದು ವಿಮಾನದ ಸೌಂಡ್ ಅಂತ ಗೊತ್ತಾಗುವುದೇ ಇಲ್ಲ. ಹಾಗಾದರೆ ಮೋಕ್ಷಿತಾಗೆ ಇದು ವಿಮಾನದ ಸೌಂಡ್ ಅಂತ ಗೊತ್ತಾಗುತ್ತಾ ಅಥವಾ ಇಲ್ವಾ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಈ ವೀಡಿಯೋ ಕ್ಲಿಪ್ ನೋಡಿದರೆ ಇಂದಿನ ಸಂಚಿಕೆ ಸಖತ್ತಾಗಿರುವುದು ಮಾತ್ರ ನಿಜ.

ಫಸ್ಟ್‌ನೈಟ್ ಆ್ಯಕ್ಷನ್ ಮಾಡಿದ ಹನುಮಂತ

ಹನುಮಂತ ಫಸ್ಟ್‌ನೈಟ್ ಆ್ಯಕ್ಷನ್ ಮಾಡಿ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದಾರೆ. ಜೊತೆಗೆ ತುಂಬಾ ಸುಲಭವಾಗಿ ಮೊದಲರಾತ್ರಿಯ ಚಿತ್ರವನ್ನು ಆ್ಯಕ್ಷನ್ ಮಾಡುವ ಮೂಲಕ ಶೋಭಾ ಶೆಟ್ಟಿ ಕಂಡು ಹಿಡಿಯುವಂತೆ ಮಾಡಿದ್ದಾರೆ. ಮನೆ ಮಂದಿಯಲ್ಲಾ ಮೊದಲರಾತ್ರಿ ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಶೋಭಾಗೆ ತಿಳಿಸಬೇಕಾಗಿತ್ತು. ಆದರೆ ಅದನ್ನು ಸೌಂಡ್ ಮಾಡುವ ಮೂಲಕ ಮಾತ್ರ ಆ್ಯಕ್ಷನ್ ಮಾಡಬೇಕು. ಎಷ್ಟೇ ಪ್ರಯತ್ನಪಟ್ಟರೂ ಸಹ ಯಾರಿಗೂ ಕೂಡ ಅದು ಸಾಧ್ಯವಾಗಲಿಲ್ಲ.

ಆದರೆ ಹನುಮಂತ ಮಾತ್ರ ಆ... ಆ... ಇ....ಇ.. ಎ...ಎ.. ಐ.. ಒ... ಒ... ಔ.... ಅಂ..... ಅ:... ಅಂತ ಸಾಂಗ್ ಹೇಳಿದ ಕೂಡಲೇ ಶೋಭಾ ಶೆಟ್ಟಿ ಅದನ್ನು ಸರಿಯಾಗಿ ಕಂಡು ಹಿಡಿದಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಹನುಮಂತ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಕಷ್ಟು ನಗಾಡಿದ್ದು ಕಂಡುಬಂದಿದೆ. ತುಂಬಾ ಸೀರೆಸ್ ಆಗಿದ್ದ ಬಿಗ್‌ಬಾಸ್ ಮನೆಯಲ್ಲಿ ನಿನ್ನೆ ನಗುವಿನಹೊಳೆಯೇ ಹರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+