Bigg Boss Kannada: ಗೋಲ್ಡ್‌ ಸುರೇಶ್‌ ಹೊರಗೆ ಬರ್ಲಿ ಮಾತಾಡ್ತೀನಿ ಎಂದ ವರ್ತೂರು ಸಂತೋಷ್‌!

ಬಿಗ್‌ಬಾಸ್ ಸೀಸನ್ 11 ಕನ್ನಡ ಈ ಬಾರಿ ಹಲವು ಕಾರಣಕ್ಕೆ ವಿಶೇಷವಾಗಿದೆ. ಈ ನಡುವೆ ಇದಕ್ಕೂ ಮೊದಲು ಬಿಗ್‌ಬಾಸ್‌ನಲ್ಲಿ ಇದ್ದ ಅಭ್ಯರ್ಥಿಗಳು ಸಹ ಈಗ ಬಿಗ್‌ಬಾಸ್‌ನಲ್ಲಿ ಇರುವ ಅಭ್ಯರ್ಥಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ವರ್ತೂರು ಸಂತೋಷ್‌ ಅವರು ಕಳೆದ ಬಾರಿ ಬಿಗ್‌ಬಾಸ್‌ 10ನೇ ಸೀಸನ್‌ನಲ್ಲಿ ಇದ್ದರು. ಇದೀಗ ಈ ಬಾರಿಯ ಸೀಸನ್‌ನಲ್ಲಿರುವ ಗೋಲ್ಡ್‌ ಸುರೇಶ್‌ ಅವರ ಬಗ್ಗೆ ವರ್ತೂರು ಸಂತೋಷ್‌ ಅವರು ಮಾತನಾಡಿದ್ದು, ಸುರೇಶ್‌ ಹೊರಗೆ ಬರಲಿ ನಾನು ಅವರ ಜೊತೆ ಮಾತನಾಡ್ತೀನಿ ಅಂತ ಹೇಳಿದ್ದಾರೆ. ಸುರೇಶ್‌ ಬಗ್ಗೆ ಸಂತೋಷ್‌ ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ..

ವರ್ತೂರ್ ಸಂತೋಷ್ ಅವರು ಹಳ್ಳಿಕಾರ್ ಒಡೆಯ ಅಂತಲೇ ಜನಪ್ರಿಯತೆ ಗಳಿಸಿದ್ದಾರೆ. ಸಂತೋಷ್‌ ಅವರು ಬಿಗ್‌ಬಾಸ್ ಕನ್ನಡ ಸೀಸನ್‌ 10ರಲ್ಲಿ ಸ್ಪರ್ಧಿಯಾಗಿದ್ದರು. ಈ ಬಾರಿ ಗೋಲ್ಡ್‌ ಸುರೇಶ್‌ ಅವರು ಇದ್ದಾರೆ. ಈ ಇಬ್ಬರ ಬಿಗ್‌ಬಾಸ್‌ ಸ್ಪರ್ಧಿಗಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕಳೆದ ಬಾರಿ ಬಿಗ್‌ಬಾಸ್‌ನಲ್ಲಿ ವರ್ತೂರು ಸಂತೋಷ್‌ ಅವರು ಇದ್ದರು. ಈ ಬಾರಿ ಗೋಲ್ಡ್‌ ಸುರೇಶ್‌ ಇದ್ದಾರೆ. ಈ ಇಬ್ಬರು ಸ್ಪರ್ಧಿಗಳ ನಡುವೆ ಸಾಕಷ್ಟು ಹೋಲಿಕೆಗಳಿವೆ ಎನ್ನುವುದು ನೆಟ್ಟಿಗರ ಅಭಿಪ್ರಾಯ.

Bigg Boss Kannada Varthur Santhosh said he will talk to Gold Suresh after coming from Bigg Boss

ಇದೀಗ ಈ ವಿಷಯದ ಬಗ್ಗೆ ಮಾತನಾಡಿರುವ ವರ್ತೂರು ಸಂತೋಷ್‌ ಅವರು, ನನಗೆ ನಿಜವಾಗಿಯೂ ಆತನು ಯಾರು ಅಂತಲೇ ಗೊತ್ತಿಲ್ಲ. ಈ ಬಿಗ್‌ಬಾಸ್‌ಗೆ ಬಂದ ಮೇಲೆ ನನಗೆ ವಿಷಯ ಗೊತ್ತಾಗಿದ್ದು. ಈಗಿನ ಕಾಲದಲ್ಲಿ ಗೋಲ್ಡ್‌ ಅನ್ನೋದು ಹೆಂಗಾಗಿದೆ ಅಂದ್ರೆ ಮೂರು ಸಾವಿರ ರೂಪಾಯಿ ಗೋಲ್ಡ್‌ ಹಾಕೊಂಡಿರೋರು ಎಳನೀರನ್ ಹಿಡ್ಕೊಂಡು ಒಂದು ವಿಡಿಯೋ ಮಾಡ್ತಾನೆ (ರೀಲ್ಸ್‌) ಒರಿಜಿನಲ್‌ ಹಾಗೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹಾಕಿರುವವನ ಮರ್ಯಾದೆ ಏನಾಯ್ತು. ಸಿಂಪನ್‌ ನಾನು ಹೇಳೋದು.

ಆ ಕಾರಣಕ್ಕೆ ನನಗೆ ಗೊತ್ತಿಲ್ಲದೆ ಇರೋ ವ್ಯಕ್ತಿಯ ಬಗ್ಗೆ ನಾನೂ ಮಾತಾಡೋಕೆ ಹೋಗಲ್ಲ. ಆದರೆ, ನನ್ನ ಬಗ್ಗೆ ಅವರು ಒಂದು ಮಾತನಾಡಿದ್ದಾರೆ. ಅದರ ಬಗ್ಗೆ ಸುರೇಶ್‌ ಹೊರಗೆ ಬರ್ಲಿ ಡೈರಕ್ಟ್‌ ಆಗೇ ನಾನು ಅವರಿಗೆ ಉತ್ತರ ಕೊಡ್ತೀನಿ ಅಂತ ವರ್ತೂರು ಸಂತೋಷ್‌ ಅವರು ಹೇಳಿದ್ದಾರೆ. ಅಲ್ಲದೇ ನನಗೆ ಆ ವ್ಯಕ್ತಿ ಗೊತ್ತಿಲ್ಲ. ಅದರ ಬಗ್ಗೆ ಈಗ ನಾನು ಏನು ಮಾತನಾಡಲ್ಲ. ಅವರು ಹೊರಗೆ ಬಂದ ಮೇಲೆ ಅವರಿಗೆ ಉತ್ತರಿಸುತ್ತೇನೆ ಎಂದಿದ್ದಾರೆ.

ವರ್ತೂರು ಸಂತೋಷ್‌ ಅವರು ಹಳ್ಳಿಕಾರ್‌ ಎನ್ನುವ ಹೆಸರಿನಿಂದಲೇ ತುಂಬಾ ಫೇಮಸ್‌ ಆಗಿದ್ದಾರೆ.

ಗೋಲ್ಡ್‌ ಸುರೇಶ್‌ ಟಾರ್ಗೆಟ್‌: ಇನ್ನು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಗೋಲ್ಡ್ ಸುರೇಶ್ ಅವರು ಪದೇ ಪದೇ ಟಾರ್ಗೆಟ್‌ ಆಗ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲದಕ್ಕೂ ಎಲ್ಲರೂ ನನ್ನನ್ನೇ ಯಾಕೆ ಟಾರ್ಗೆಟ್‌ ಮಾಡ್ತಾ ಇದ್ದೀರಾ ಅಂತ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಪ್ರತಿ ವಾರವೂ ನನ್ನನ್ನೇ ನಾಮಿನೇಟ್ ಮಾಡ್ತಿರೋದು ಯಾಕೆ ಅಂತ ಅವರು ಕಣ್ಣೀರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+