ಮದುವೆ ವಿಚಾರಕ್ಕೆ ಬ್ರೇಕ್ ಹಾಕಿದ ವರ್ತೂರು ಸಂತೋಷ್; ತನಿಷಾ ನನಗೆ ಅಕ್ಕ ಇದ್ದಂಗೆ ಎಂದಿದ್ದೇಕೆ?
ಬಿಗ್‌ಬಾಸ್ ಮನೆಯಿಂದ ಶುರುವಾದ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಒಡನಾಟ ಇಂದಿಗೂ ಮುಂದುವರಿದಿದೆ. ಬಿಗ್‌ಬಾಸ್ ಮನೆಯ ಜೋಡಿ ಎಂದೇ ಕರೆಸಿಕೊಂಡಿದ್ದ ಇವರು, ಬಳಿಕ ಹೊರ ಬಂದ ಮೇಲೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಆದರೂ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರಿಂದ ಗಾಸಿಪ್ ನಿಲ್ಲಲಿಲ್ಲ. ಇನ್ನೇನು ಇಬ್ಬರೂ ಮದುವೆಯಾಗ್ತಾರೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ವರ್ತೂರು ಸಂತೋಷ್ ಶಾಕ್ ಕೊಟ್ಟಿದ್ದಾರೆ.
ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಬಿಗ್ ಬಾಸ್‌ನಿಂದಲೂ ಒಳ್ಳೆಯ ಸ್ನೇಹಿತರಾಗಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ಇಬ್ಬರೂ ಒಳ್ಳೆಯ ಜೋಡಿ, ಆದಷ್ಟು ಬೇಗ ಮದುವೆಯಾಗಲಿ ಎಂದು ಅವರ ಅಭಿಮಾನಿಗಳು ಆಸೆಪಟ್ಟಿದ್ದರು. ಬಿಗ್‌ಬಾಸ್ ಮುಗಿದ ಮೇಲೂ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿ ಹಲವು ವೇದಿಕೆಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನೇನು ಮದುವೆ ಊಟ ಹಾಕಿಸ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲವೂ ಉಲ್ಟಾ ಆಗಿದೆ.

ವರ್ತೂರು ಸಂತೋಷ್ ಹಾಗೂ ತನಿಷಾ ಎಲ್ಲಿ ಸಿಕ್ಕರೂ ಮದುವೆ ಯಾವಾಗ? ಎಂದು ಕೇಳುತ್ತಿದ್ದರು. ಆಗ ಇಬ್ಬರೂ ಕೂಡ ನಾವಿಬ್ಬರೂ ಸ್ನೇಹಿತರಷ್ಟೇ ಎಂದು ಹೇಳಿಕೊಳ್ಳುತ್ತಿದ್ದರು. ಆದರೂ ಇವರು ಮದುವೆಯಾಗೋದು ಫಿಕ್ಸ್ ಎಂದೇ ಹಲವರು ಮಾತನಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ತನಿಷಾ ಅವರು ಇದೇ ವಿಚಾರವಾಗಿ ಗರಂ ಕೂಡ ಆಗಿದ್ದರು. ವರ್ತೂರು ಅವರ ಮದುವೆ ವಿಚಾರ ನನ್ನ ಹತ್ರ ಯಾಕೆ ಕೇಳ್ತೀರಾ? ಎಂದು ಕೋಪಗೊಂಡಿದ್ದರು.
ತನಿಷಾಗೆ ಕ್ಷಮೆ ಕೇಳ್ತೀನಿ
ಇತ್ತೀಚೆಗೆ ಇಬ್ಬರಿಗೂ ಇದೇ ವಿಚಾರವಾಗಿ ಮುಜುಗುರವಾದ ಕಾರಣ ವರ್ತೂರು ಸಂತೋಷ್ ಇದಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಇಲ್ಲಿಯವರೆಗೆ ನಾವಿಬ್ಬರೂ ಆತ್ಮೀಯ ಸ್ನೇಹಿತರು ಎನ್ನುತ್ತಿದ್ದ ಸಂತೋಷ್, ತನಿಷಾ ಕುಪ್ಪಂಡ ನನಗೆ ಅಕ್ಕ ಇದ್ದಂಗೆ ಎನ್ನುವ ಮೂಲಕ ಶಾಕ್ ಕೊಟ್ಟಿದ್ದಾರೆ.

"ತನಿಷಾ ನನ್ನ ಜೊತೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದರು. ಅವರು ನನ್ನ ಅಕ್ಕ ಇದ್ದಂಗೆ, ಕೆಲ ವಿಚಾರಗಳನ್ನ ಕೇಳಿ ಕೇಳಿ ಸಾಕಾಗಿದೆ. ಅವರಿಗೂ ಇದರಿಂದ ಕೆಲವೊಮ್ಮೆ ಮುಜುಗರ ಆಗಿದೆ. ಬಿಗ್ ಬಾಸ್ನಿಂದಲೂ ಅವರನ್ನ ಅಕ್ಕ ಎಂದೇ ಕರೆದಿದ್ದೇನೆ. ಬೇಕಾದ್ರೆ ಆ ವಿಡಿಯೋ ನೋಡಿ, ಈಗಲೂ ಇದೆ ಎಂದು ವರ್ತೂರು ಸಂತೋಷ್ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ತನಿಷಾ ಕುಪ್ಪಂಡ ನನಗೆ ಅಕ್ಕ ಇದ್ದಂಗೆ. ಈ ವಿಚಾರದಿಂದ ಇಬ್ಬರಿಗೂ ಮುಜುಗರ ಆಗಿದೆ. ನನ್ನ ವೈಯಕ್ತಿಕ ಅವರ ಬಳಿ ಕೇಳೋದು, ಅವರ ವೈಯಕ್ತಿಕ ವಿಚಾರ ನನ್ನ ಬಳಿ ಕೇಳೋದು ಎಷ್ಟು ಸರಿ? ನನ್ನಿಂದ ಬೇಜಾರಾಗಿದ್ರೆ ತನಿಷಾ ಹಾಗೂ ಅವರ ಫ್ಯಾನ್ಸ್ಗೆ ಕ್ಷಮೆ ಕೇಳ್ತೀನಿ ಎಂದು ವರ್ತೂರು ಸಂತೋಷ್ ಬೇಸರದಿಂದ ಮಾತನಾಡಿದ್ದಾರೆ.












Click it and Unblock the Notifications