ಬಿಗ್‌ಬಾಸ್ ಕನ್ನಡ '13' ಆರಂಭದ ದಿನಾಂಕ ಘೋಷಣೆ, ಕಿಚ್ಚ ಸುದೀಪ್‌ ಮಾಸ್ ಡೈಲಾಗ್‌ ವೈರಲ್‌.. ದೊಡ್ಮನೆ ಪ್ರವೇಶಿಸುವವರು ಯಾರು?

BBK 13: ಈಗಾಗಲೇ ಬಿಗ್‌ಬಾಸ್‌ ಕನ್ನಡ 12ನೇ ಸೀಸನ್‌ ಮುಕ್ತಾಯವಾಗಿದ್ದು, ಈ ವೇಳೆ ಗಿಲ್ಲ ನಟ ವಿನ್ನರ್ ಆಗಿದ್ದರು. ಇದೀಗ ಇಡೀ ಕರುನಾಡು ಕಾತರದಿಂದ ಕಾಯುತ್ತಿದ್ದ ಸೀಸನ್‌ 13ಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಹಾಗಾದ್ರೆ ಆರಂಭ ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ ಬಾಸ್‌ ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಇದರ 13ರ ಸೀಸನ್‌ ಆರಂಭಕ್ಕಾಗಿ ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಕೊನೆಗೂ ಶುಭಸುದ್ದಿ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಮ್ಮುಖದಲ್ಲಿ ಹೊಸ ಸೀಸನ್‌ನ ಪ್ರೋಮೋ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ 5ರಿಂದ ಶೋ ಆರಂಭ ಆಗಲಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಪ್ರೋಮೋ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

Bigg Boss Kannada Season 13 Launch Date Announced Kiccha Sudeep Returns Show Starts on September 5

ಕಿಚ್ಚ ಸುದೀಪ್ ಮಾಸ್‌ ಡೈಲಾಗ್ ಸಖತ್ ವೈರಲ್

'The Bigg Wait is Over' ಎಂಬ ಕ್ಯಾಪ್ಷನ್‌ನೊಂದಿಗೆ ಬಿಡುಗಡೆ ಆಗಿರುವ ಈ ಪ್ರೋಮೋದಲ್ಲಿ ನಟ ಕಿಚ್ಚ ಸುದೀಪ್ ಕಪ್ಪು ಬಣ್ಣದ ಸ್ಟೈಲಿಶ್ ಉಡುಪಿನಲ್ಲಿ ಮಾಸ್ ಎಂಟ್ರಿ ಕೊಟ್ಟಿದ್ದಾರೆ. 'ಕರ್ನಾಟಕದ ಜನ ಯಾರಿಗೂ ಕಾಯೋದಿಲ್ಲ.. ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ. ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು.. ಮತ್ತೆ ಶುರು ಮಾಡೋಣ್ವಾ?,' ಎಂದು ಸುದೀಪ್ ಹೇಳಿರುವ ಮಾಸ್‌ ಡೈಲಾಗ್ ವೀಕ್ಷಕರ ಗಮನ ಸೆಳೆದಿದ್ದು, ಇದು ಶೋ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಯಾವಾಗಿನಿಂದ ಆರಂಭ?

ಕಲರ್ಸ್‌ ಕನ್ನಡ ವಾಹಿನಿಯ ಅಧಿಕೃತ ಮಾಹಿತಿಯ ಪ್ರಕಾರ, ಬಿಗ್‌ಬಾಸ್‌ ಕನ್ನಡ ಸೀಸನ್‌ 13 ಮುಂಬರುವ ಸೆಪ್ಟೆಂಬರ್ 5ರಿಂದ ಆರಂಭವಾಗಲಿದೆ. ಈ ಬಾರಿ ಹೊಸ ವಿನ್ಯಾಸದ ಮನೆ, ವಿಶೇಷ ಟಾಸ್ಕ್‌ಗಳು, ಹೊಸ ತಿರುವುಗಳು ಹಾಗೂ ರೋಚಕ ಮನರಂಜನೆಯೊಂದಿಗೆ ಶೋ ಅನ್ನು ಅತ್ಯಂತ ಅದ್ಧೂರಿಯಾಗಿ ನಡೆಸಲು ಆಯೋಜಕರು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ಸಮಾನ್ಯ ಜನರಿಗೆ ಶುಭ ಸುದ್ದಿ

ಈ ಬಾರಿಯ ಸೀಸನ್‌ನ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಸಾಮಾನ್ಯ ಜನರಿಗೆ ಸಿಕ್ಕಿರುವ ಅವಕಾಶ. ಈಗಾಗಲೇ ಆಡಿಷನ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರಾಜ್ಯದಾದ್ಯಂತ ಸಾವಿರಾರು ಅಭ್ಯರ್ಥಿಗಳು ತಮ್ಮ ವಿಡಿಯೋಗಳನ್ನು ಕಳುಹಿಸಿಕೊಟ್ಟಿದ್ದರು. ಅವರಲ್ಲಿ ಯಾರಿಗೆ ಬಿಗ್‌ಬಾಸ್ ಮನೆಗೆ ಕಾಲಿಡುವ ಅದೃಷ್ಟ ಸಿಗಲಿದೆ ಎಂಬ ಕುತೂಹಲ ಮೂಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೆಂಡಿಂಗ್

ಕಳೆದ ಸೀಸನ್‌ನ ಯಶಸ್ಸಿನ ಬಳಿಕ ಈ ಬಾರಿ ಯಾವ್ಯಾವ ಪ್ರಸಿದ್ಧ ಸೆಲೆಬ್ರಿಟಿಗಳು ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಪ್ರೋಮೋ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ #BiggBossKannada13 ಟ್ರೆಂಡಿಂಗ್‌ನಲ್ಲಿದೆ. ಅಭಿಮಾನಿಗಳಂತೂ ಸೆಪ್ಟೆಂಬರ್ 5 ಯಾವಾಗ ಬರಲಿದೆ ಎಂದು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ.

ಬಿಗ್ ಬಾಸ್ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸ್ಪರ್ಧಿಗಳನ್ನು ಒಂದೇ ಮನೆಯೊಳಗೆ ನಿರ್ದಿಷ್ಟ ಅವಧಿಯವರೆಗೆ ಹೊರ ಜಗತ್ತಿನ ಸಂಪರ್ಕವಿಲ್ಲದೆ ಇರಿಸಿ, ಅವರಿಗೆ ವಿವಿಧ ರೀತಿಯ ಟಾಸ್ಕ್‌ಗಳು ಮತ್ತು ಸವಾಲುಗಳನ್ನು ನೀಡುವುದು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದೆ. ಸ್ಪರ್ಧಿಗಳ ನಡುವಿನ ಸ್ನೇಹ, ಭಿನ್ನಾಭಿಪ್ರಾಯ, ನಾಯಕತ್ವ, ತಾಳ್ಮೆ ಮತ್ತು ವ್ಯಕ್ತಿತ್ವದ ಹಲವು ಮುಖಗಳು ಈ ವೇದಿಕೆಯಲ್ಲಿ ಬಹಿರಂಗವಾಗಲಿವೆ. ಇನ್ನೂ ಈ ಬಾರಿ ಶೋ ಅನ್ನು ಕಿಚ್ಚ ಸುದೀಪ್‌ ಅವರು ಯಾವ ರೀತಿ ನಡೆಸಿಕೊಡಲಿದ್ದಾರೆ ಎನ್ನುವ ಕುತೂಹಲವು ಕೂಡ ಪ್ರೇಕ್ಷಕರಲ್ಲಿ ಮೂಡಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+