BBK 12: ಬಿಗ್‌ಬಾಸ್‌ ಫಿನಾಲೆಗೆ ಕೆಲವೇ ದಿನ ಬಾಕಿ, ಟಾಪ್‌ ಎಂಟು ಸ್ಪರ್ಧಿಗಳಲ್ಲಿ ಇವರೇ ಅಂತೆ ವಿನ್ನರ್‌

ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಬಿಗ್‌ಬಾಸ್ ಕನ್ನಡ ಸೀಸನ್ 12 ಫಿನಾಲೆ ಹಂತ ತಲುಪಿದೆ.ಈಗ ಶೋ ಕೊನೆ ಆಗುವ ಹಂತ ತಲುಪಿದೆ. ಜನವರಿ 17 ಹಾಗೂ 18ರಂದು ಬಿಗ್‌ಬಾಸ್ ಫಿನಾಲೆ ನಡೆಯಲಿದ್ದು, ಈ ಬಾರಿ ಯಾರಾಗ್ತಾರೆ ಬಿಗ್‌ಬಾಸ್‌ ವಿನ್ನರ್‌ ಎನ್ನುವ ಚರ್ಚೆಗಳು ಜೋರಾಗಿವೆ. ಸದ್ಯ ಮನೆಯಲ್ಲಿ ಟಾಪ್‌ ಸ್ಪರ್ಧಿಗಳು ಉಳಿದುಕೊಂಡಿದ್ದು, ಫಿನಾಲೆಗೂ ಮುನ್ನ ಎಲಿಮಿನೇಷನ್ ಹೇಗೆ ನಡೆಯಲಿದೆ? ಫಿನಾಲೆ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ.

ಈಗ 15ನೇ ವಾರದಲ್ಲಿರುವ ಬಿಗ್‌ಬಾಸ್‌ ಮನೆಯಲ್ಲಿ ಎಂಟು ಮಂದಿ ಸ್ಪರ್ಧಿಗಳು ಉಳಿದಿದ್ದಾರೆ. ಗಿಲ್ಲಿ ನಟ, ರಘು, ಅಶ್ವಿನಿ ಗೌಡ, ಕಾವ್ಯಾ ಶೈವ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ ಮತ್ತು ಧನುಷ್ ಉಳಿದುಕೊಂಡಿದ್ದು, ಇವರಲ್ಲಿ ಒಬ್ಬರು ಈ ಸೀಸನ್‌ನ ವಿಜೇತರಾಗಿ ಬಿಗ್‌ಬಾಸ್ ಕಪ್ ಎತ್ತಲಿದ್ದಾರೆ. ಆದರೆ ಅಂತಿಮ ವೇದಿಕೆ ತಲುಪುವ ಹೊತ್ತಿಗೆ ಕೆಲ ಸ್ಪರ್ಧಿಗಳು ಮನೆಯಿಂದ ಹೊರಬರಲಿದ್ದಾರೆ.

Bigg Boss Kannada Season 12 Finale Winner Prediction Date Top Contestants

ಸದ್ಯದ ಲೆಕ್ಕಾಚಾರದ ಪ್ರಕಾರ ಫಿನಾಲೆಗೆ ಐದು ಅಥವಾ ಆರು ಮಂದಿ ಮಾತ್ರ ಪ್ರವೇಶಿಸುವ ಸಾಧ್ಯತೆ ಇದೆ. ಕಳೆದ ಎರಡು ಸೀಸನ್‌ಗಳಲ್ಲಿ ಆರು ಮಂದಿಯನ್ನು ಫಿನಾಲೆಗೆ ಕರೆದೊಯ್ಯಲಾಗಿತ್ತು. ಹೀಗಾಗಿ ಈ ಬಾರಿ ಕೂಡ ಅದೇ ಪ್ಲಾನ್ ಅನುಸರಿಸಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಹೀಗಾದರೆ, ಈ ವಾರಾಂತ್ಯದಲ್ಲಿ ಒಂದು ಎಲಿಮಿನೇಷನ್ ನಡೆಯುವುದು ಬಹುತೇಕ ಖಚಿತವಾಗಿದ್ದು, ಅಗತ್ಯವಿದ್ದರೆ ಮುಂದಿನ ವಾರ ಮಧ್ಯವಾರದ ಎಲಿಮಿನೇಷನ್ ಕೂಡ ನಡೆಯುವ ಸಾಧ್ಯತೆ ಇದೆ.

ಫಿನಾಲೆಗೆ ಆರು ಮಂದಿ ಆಯ್ಕೆಯಾದರೆ, ಜನವರಿ 17ರಂದು ಒಬ್ಬರನ್ನು ಹೊರಗಿಡಬಹುದು. ಇಲ್ಲವೇ ಜನವರಿ 18ರಂದು ಹಂತ ಹಂತವಾಗಿ ಎಲಿಮಿನೇಷನ್ ಮಾಡಿ, ಕೊನೆಗೂ ಇಬ್ಬರನ್ನು ಉಳಿಸಿಕೊಳ್ಳಲಾಗುತ್ತದೆ. ಸಂಜೆ 6 ಗಂಟೆಯಿಂದ ಗ್ರ್ಯಾಂಡ್ ಫಿನಾಲೆ ಆರಂಭವಾಗುವ ನಿರೀಕ್ಷೆಯಿದ್ದು, ಸ್ಪರ್ಧಿಗಳ ವಿಶೇಷ ಡ್ಯಾನ್ಸ್ ಪ್ರದರ್ಶನಗಳು, ಮನರಂಜನಾ ಕಾರ್ಯಕ್ರಮಗಳು ಕೂಡ ಫಿನಾಲೆಗೆ ಮೆರುಗು ನೀಡಲಿವೆ.

ಈ ಬಾರಿ ಫಿನಾಲೆಯ ಮತ್ತೊಂದು ವಿಶೇಷವೆಂದರೆ, ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳೂ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಿಂದ ಫಿನಾಲೆ ಸಂಭ್ರಮ ಇನ್ನಷ್ಟು ಹೆಚ್ಚಾಗಲಿದೆ. ಅಂತಿಮವಾಗಿ ಕಪ್ ಗೆಲ್ಲುವ ಸ್ಪರ್ಧಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಭರ್ಜರಿ ಟ್ರೋಫಿ ಸಿಗಲಿದೆ. ಒಟ್ಟಿನಲ್ಲಿ, ಬಿಗ್‌ಬಾಸ್ ಕನ್ನಡ ಸೀಸನ್ 12 ಕೊನೆಯ ಹಂತಕ್ಕೆ ಬಂದಿದ್ದು, ಕಪ್ ಯಾರ ಕೈ ಸೇರಲಿದೆ? ಎಂಬ ಪ್ರಶ್ನೆಗೆ ಉತ್ತರ ಸಿಗುವ ಕ್ಷಣಗಳು ಹತ್ತಿರವಾಗುತ್ತಿವೆ. ಪ್ರೇಕ್ಷಕರ ನಿರೀಕ್ಷೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಗಿಲ್ಲಿನೇ ಗೆಲ್ಲೋದು ಎಂದು ಚರ್ಚೆ

ಈ ಸೀಸನ್‌ನಲ್ಲಿ ಗಿಲ್ಲಿ ಸಖತ್‌ ಹವಾ ಸೃಷ್ಟಿಸಿದದು, ಈ ಬಾರಿ ಕಪ್‌ ಗೆಲ್ಲೋದು ಗಿಲ್ಲಿನೇ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಅಷ್ಟರಮಟ್ಟಿಗೆ ಗಿಲ್ಲಿ ಕ್ರೇಜ್‌ ಹುಟ್ಟಿಸಿದ್ದಾರೆ. ಇಲ್ಲಿವರೆಗೆ ಎಲಿಮಿನೇಟ್‌ ಆಗಿ ಹೊರಬಂದಿರುವ ಸ್ಪರ್ಧಿಗಳು ಕೂಡ ಗಿಲ್ಲಿನೇ ಗೆಲ್ಲೋದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಅಶ್ವಿನಿ ಗೌಡ, ಧನುಷ್‌ ಗೌಡ, ರಘು ಅವರ ಪರವೂ ಭರ್ಜರಿ ಪ್ರಚಾರ ನಡೆಯುತ್ತಿದೆ. ಫಿನಾಲೆಯಲ್ಲಿ ಯಾರು ಗೆಲ್ತಾರೆ? ಈಗಾಗಲೇ ಭವಿಷ್ಯ ನುಡಿದಂತೆ ಗಿಲ್ಲಿನೇ ಗೆಲ್ತಾರಾ? ಅನ್ನೋ ಕುತೂಹಲ ಎಲ್ಲರಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+