ಬಿಗ್‌ಬಾಸ್ ಮನೆಯಲ್ಲಿ ಭಾರಿ ದೊಡ್ಡ ಬದಲಾವಣೆ, ಈ ಬಾರಿ ಸಖತ್ ಕಲರ್‌ಫುಲ್! Bigg Boss
ಕನ್ನಡ ಪ್ರೇಕ್ಷಕರ ಮನಸ್ಸು ಗೆಲ್ಲಲು ಬಿಗ್‌ಬಾಸ್ ಸೀಸನ್ 12 ಇದೀಗ ಭರ್ಜರಿಯಾಗಿ ಎಂಟ್ರಿ ಆಗುತ್ತಿದ್ದು, ಈ ಮೂಲಕ ಬಿಗ್‌ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿ ಮಾಡಲು ಎಂಟ್ರಿ ಕೊಡುತ್ತಿದೆ. ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ದೊಡ್ಡ ಸಕ್ಸಸ್ ಕಂಡಿದ್ದು, ಸಾಲು ಸಾಲು ಹಿಟ್ ಕೊಟ್ಟ ನಂತರ ಮತ್ತೊಂದು ಸೀಸನ್‌ಗೆ ರೆಡಿಯಾಗುತ್ತಿದೆ. ಅದರಲ್ಲೂ ಬಿಗ್‌ಬಾಸ್ ಮನೆಯಲ್ಲಿ ಭಾರಿ ದೊಡ್ಡ ಬದಲಾವಣೆ ಕೂಡ ಫಿಕ್ಸ್ ಆಗಿದೆ!
ಕಿಚ್ಚ ಸುದೀಪ್.. ಈ ಹೆಸರು ಕನ್ನಡಿಗರಿಗೆ ಮಾತ್ರವಲ್ಲ ಇಡೀ ದೇಶದಲ್ಲೇ ಚಿರ ಪರಿಚಿತವಾಗಿದೆ ಎನ್ನಬಹುದು. ಯಾಕಂದ್ರೆ ಕನ್ನಡಿಗ ಕಿಚ್ಚ ಸುದೀಪ್ ಅವರು ಭಾರತದ ಮೂಲೆ ಮೂಲೆಯಲ್ಲೂ ಕೂಡ ಹೆಸರು ಮಾಡಿದ್ದಾರೆ ಅದ್ರಲ್ಲೂ, ಬಾಲಿವುಡ್ ಅಂದ್ರೆ ಹಿಂದಿ ಸಿನಿಮಾಗಳು ಸೇರಿ ತೆಲುಗು ಸಿನಿಮಾದಲ್ಲೂ ಮಿಂಚಿದ್ದಾರೆ ಕನ್ನಡಿಗ ಕಿಚ್ಚ ಸುದೀಪ್ ಅವರು. ಇಂತಹ ಸಮಯದಲ್ಲೇ ಸೀಸನ್ 12 ಬಗ್ಗೆ ಇದೀಗ ದೊಡ್ಡ ಸರ್ಪ್ರೈಸ್ ಕೊಡುವ ಸುದ್ದಿ ಇದೀಗ ಅಪ್ಪಳಿಸಿದೆ. ಹಾಗಾದ್ರೆ ಬಿಗ್‌ಬಾಸ್ ಮನೆಯಲ್ಲಿ ಏನಿದು ದೊಡ್ಡ ಬದಲಾವಣೆ?

ಬಿಗ್‌ಬಾಸ್ ಮನೆಯಲ್ಲಿ ದೀಪಾವಳಿ ಗ್ಯಾರಂಟಿ!
ಸೆಪ್ಟಂಬರ್ ಅಂತ್ಯಕ್ಕೆ ಬಿಗ್‌ಬಾಸ್ ಸೀಸನ್ 12 ಶುರುವಾಗಲಿದ್ದು, ಈಗಾಗಲೇ ಬೇಕಾಗಿರುವ ತಯಾರಿಗಳನ್ನ ಕೂಡ ಶುರು ಮಾಡಿದ್ದಾರೆ. ಆದರೆ ಈ ಬಾರಿ ಹಿಂದಿನ ಸೀಸನ್ಸ್ ಮೀರಿಸುವ ರೀತಿಯಾಗಿ ಸಿದ್ಧತೆಗಳನ್ನ ಈಗ ಕೈಗೊಳ್ಳಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಕಿಚ್ಚ ಸುದೀಪ್ ಅವರು ಮತ್ತೊಮ್ಮೆ, ದೊಡ್ಡ ಮನೆ ಅಂತಾ ಕರೆಸಿಕೊಳ್ಳುವ ಬಿಗ್‌ಬಾಸ್ ಮನೆಗೆ ನಿರೂಪಣೆ ಮಾಡಲು ರಿಟರ್ನ್ ಆಗಿರುವುದು ಅಭಿಮಾನಿ ಬಳಗಕ್ಕೆ ದೊಡ್ಡ ಖುಷಿ ಕೊಟ್ಟಿದೆ.












Click it and Unblock the Notifications