Bigg Boss Kannada: ಫಿನಾಲೆಗೂ ಮುನ್ನವೇ ಆ ಗುಟ್ಟು ರಟ್ಟು ಮಾಡಿದ ತ್ರಿವಿಕ್ರಮ್‌, ಮನೆಮಂದಿ ಶಾಕ್‌

ಕನ್ನಡ ಬಿಗ್‌ಬಾಸ್‌ ಸೀಸನ್‌-‌11 ರಿಯಾಲಿಟಿ ಶೋನ ಗ್ರ್ಯಾಂಡ್‌ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಾಗ ಮನೆಯಲ್ಲಿ ಶಾಕಿಂಗ್‌ ಬೆಳವಣಿಗೆ ನಡೆದಿದೆ. ತ್ರಿವಿಕ್ರಮ್‌ ಅವರು ಫಿನಾಲೆಗೂ ಮುನ್ನವೇ ಎಲ್ಲರೆದುರೇ ಐ ಲವ್‌ ಯೂ ಎಂದು ಹೇಳುವ ಮೂಲಕ ಮನಮಂದಿಗೆಲ್ಲ ಶಾಕ್‌ ನೀಡಿದ್ದಾರೆ. ಈ ಸೀಸನ್‌ನಲ್ಲಿ ಬೆಸ್ಟ್‌ ಜೋಡಿ ಎಂದು ಗಮನ ಸೆಳೆದಿದ್ದ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್‌ ಅವರ ಮೇಲೆ ಎಲ್ಲರಿಗಿದ್ದ ಅನುಮಾನ ಕೊನೆಗೂ ನಿಜವಾಗಿದೆ.

ಫಿನಾಲೆ ಹತ್ತಿರವಾದಂತೆ ಎಲ್ಲರೂ ಟೆನ್ಷನ್‌ನಲ್ಲಿದ್ದಾರೆ. ಆದರೆ, ತ್ರಿವಿಕ್ರಮ್‌ ಎಂದಿನಂತೆ ಜಾಲಿ ಮೂಡ್‌ನಲ್ಲಿದ್ದು ಭವ್ಯಾಗೌಡ ಅವರಿಗೆ ವಿಶೇಷ ಪತ್ರ ಬರೆಯುವ ಮೂಲಕ ಮನದಾಳತ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಇದನ್ನು ಓದುತ್ತಾ ಎಲ್ಲರ ಮುಂದೆಯೇ ತ್ರಿವಿಕ್ರಮ್‌ ಅವರು ಭವ್ಯಾಗೆ ಐ ಲವ್‌ ಯೂ...ಎಂದೂ ಹೇಳಿದ್ದಾರೆ.

Bigg Boss Kannada Season 11 Trivikram Expresses Love For Bhavya Gowda

ಈ ಸೀಸನ್‌ನ ಜೋಡಿ ಹಕ್ಕಿ ಎಂದೇ ಕರೆಸಿಕೊಂಡಿದ್ದ ತ್ರಿವಿಕ್ರಮ್‌ ಹಾಗೂ ಭವ್ಯಾ ಅವರು ಎಲ್ಲರ ಗಮನ ಸೆಳೆದಿದ್ದರು. ಇವರ ಲವ್‌ ಸ್ಟೋರಿ ಚೆನ್ನಾಗಿದೆ ಎಂದು ಪ್ರೇಕ್ಷಕರು ಕೂಡ ಹರಸಿದ್ದರು. ಆದರೆ, ಇಬ್ಬರೂ ಸುಮ್ಮನೆ ಜಸ್ಟ್‌ ಫ್ರೆಂಡ್ಸ್‌ ಅಂತ ಹೇಳಿಕೊಂಡು ಆಟವಾಡಿಸುತ್ತಿದ್ದರು. ಇತ್ತೀಚಿನ ಟಾಸ್ಕ್‌ಗಳಲ್ಲಿ ಇವರಿಬ್ಬರ ನಡುವೆ ಜೋರು ಜಗಳ ನಡೆದು ಎಲ್ಲರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದ್ದರು.

ಆದರೆ, ಇದೀಗ ಮತ್ತೆ ತ್ರಿವಿಕ್ರಮ್‌ ಹಾಗೂ ಭವ್ಯಾ ಜೋಡಿಹಕ್ಕಿಗಳಂತೆ ಕಾಣಿಸಿಕೊಂಡು ಉಳಿದ ಸ್ಪರ್ಧಿಗಳು ಕಣ್ಣು ಬಾಯಿ ಬಿಟ್ಕೊಂಡು ನೋಡುವಂತೆ ಮಾಡಿದ್ದಾರೆ. ಭವ್ಯಾ ಅವರನ್ನು ಇಂಪ್ರೆಸ್‌ ಮಾಡಲು ತ್ರಿವಿಕ್ರಮ್‌ ಪತ್ರ ಬರೆದು ಅದನ್ನು ಓದಿದ್ದಾರೆ.

Bigg Boss Kannada Season 11 Trivikram Expresses Love For Bhavya Gowda

ಕಷ್ಟ ಎಂಬ ಕೆಸರಲ್ಲಿ ಅರಳಿದ ಕಮಲ ನೀನು, ತಂದೆ-ತಾಯಿಯ ಗಂಡು ಮಗ ನೀನು, ಗೆಳೆಯರಿಗೆ ರೌಡಿ ಬೇಬಿ ನೀನು, ಕನ್ನಡಿಗರ ಮನಗೆದ್ದ ಗೀತಾ ನೀನು, ಯಾರು ಏನು ಅಂದುಕೊಂಡ್ರೂ ತಲೆಕೆಡಿಸಿಕೊಳ್ಳಬೇಡ. ಜೀವನಕ್ಕೊಬ್ಬಳು ಸ್ನೇಹಿತೆ ನೀನು, ಐ ಲವ್‌ ಯೂ ಪಣ್ಣಿಕುಟ್ಟಿ ಎಂದು ಪತ್ರದ ಮೂಲಕ ಮನಸಿನ ಮಾತನ್ನ ತೆರೆದಿಟ್ಟಿದ್ದಾರೆ.

ಇವರ ಲವ್‌ ಸ್ಟೋರಿ ಬಗ್ಗೆ ಇಲ್ಲಿವರೆಗೆ ಹೊರಗಡೆ ಮಾತ್ರವೇ ಚರ್ಚೆ ನಡೆಯುತ್ತಿತ್ತು. ಬಿಗ್‌ಬಾಸ್‌ ಮನೇಲಿ ತ್ರಿವಿಕ್ರಮ್‌ ಐ ಲವ್‌ ಯೂ ಹೇಳುವ ಮೂಲಕ ಎಲ್ಲರ ಚಿತ್ತ ಸೆಳೆದಿದ್ದಾರೆ. ಎಲ್ಲರ ಮುಂದೆಯೇ ಪ್ರೇಮ ನಿವೇದನೆಯ ಪತ್ರ ಓದುತ್ತಾ ಮನಸ್ಸಿನ ಮಾತುಗಳನ್ನು ಹೇಳುತ್ತಿದ್ದಂತೆ ಭವ್ಯಾ ಕೂಡ ನಾಚಿ ನೀರಾಗಿದ್ದಾರೆ.

ಒಟ್ಟಾರೆ ತ್ರಿವಿಕ್ರಮ್‌ ಐ ಲವ್‌ ಯೂ ಹೇಳುವ ಮೂಲಕ ಇಡೀ ಮನೆಮಂದಿಯನ್ನು ಬೆರಗುಗೊಳಿಸಿದ್ದಾರೆ. ಬಳಿಕ ರಜತ್‌ ಕೂಡ ತ್ರಿವಿಕ್ರಮ್‌ ಕಾಲೆಳೆದಿದ್ದಾರೆ. ಎಲ್ಲಿದ್ದೆ ಇಷ್ಟು ದಿನ? ಎಂದು ರಜತ್‌ ಜೋಕ್‌ ಮಾಡಿದ್ರು. ಇನ್ನು ಹಳ್ಳಿಹೈದ ಹನುಮಂತು ಏನ್‌ ಆಟ ಆಡಿದ್ರು ಇವರು ಎಂದು ಡೈಲಾಗ್‌ ಹೊಡೆದ್ರು. ಉಳಿದ ಸ್ಪರ್ಧಿಗಳು ಕೂಡ ತ್ರಿವಿಕ್ರಮ್‌ ಹಾಗೂ ಭವ್ಯಾಗೌಡ ಅವರ ಕಾಲೆಳೆದು ಕಾಡಿಸಿದ್ದಾರೆ. ಅಂತೂ ಜೋಡಿಹಕ್ಕಿ ಬಗೆಗಿನ ಗುಸುಗುಸು ಮಾತುಗಳಿಗೆ ತ್ರಿವಿಕ್ರಮ್‌ ಹೊಸ್‌ ಟ್ವಿಸ್ಟ್‌ ನೀಡಿದ್ದಾರೆ. ಇನ್ನು ಫಿನಾಲೆಯಲ್ಲಿ ಇವರ ಭವಿಷ್ಯ ನಿರ್ಧಾರವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+