Bigg Boss Kannada Elimination: ಬಿಗ್ ಬಾಸ್ ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಫಿಕ್ಸ್..?
ಬಿಗ್ ಬಾಸ್ ಕನ್ನಡ ಸೀಜನ್ 11 ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಬಿಗ್ ಬಾಸ್ ಟ್ವಿಸ್ಟ್ ಕೊಡುತ್ತಿದ್ದಾರೆ. ಇನ್ನೇನು ಅರ್ಧ ಸೀಜನ್ ಮುಗಿತು ಎನ್ನುವಷ್ಟರಾಗಲೇ ಇಬ್ಬರು ಸ್ಪಧಿಗಳು ಮತ್ತೆ ವಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಈ ವಾರ ಆರಂಭದಲ್ಲಿ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಶೋಭಾ ಶೆಟ್ಟ ಹಾಗೂ ರಜತ್ ಮನೆಯೊಳಗೆ ಬಂದಿದ್ದು, ಈ ವಾರ ಆಟದ ಕಣ ರಂಗು ಪಡೆದುಕೊಂಡಿತ್ತು.
ಈ ವಾರ ಉಗ್ರಂ ಮಂಜು ಗೇಮ್ ಚೇಂಜರ್ ಆಗಿದ್ದು, ಮುಂದಿನ ವಾರಕ್ಕೆ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಟಾಸ್ಕ್‌ನ ಕೊನೆಯಲ್ಲಿ ಉಗ್ರಂ ಮಂಜು ಹಾಗೂ ಹನುಮಂತ ಅಂತಿಮ ಹಣಾಹಣಿಯಲ್ಲಿದ್ದರು. ಆದರೆ ಈಗಾಗಲೇ ಎರಡು ಬಾರಿ ಕ್ಯಾಪ್ಟನ್ ಆಗಿರುವ ಹನುಮಂತ ಸೋಲು ಕಂಡಿದ್ದು, ಉಗ್ರಂ ಮಂಜು ಮೊದಲ ಬಾರಿಗೆ ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಈ ವಾರ ಭವ್ಯ ಧರ್ಮ ಕೀರ್ತಿರಾಜ್, ಮೋಕ್ಷಿತಾ, ಗೋಲ್ಡ್ ಸುರೇಶ್, ಐಶ್ವರ್ಯ, ತ್ರಿವಿಕ್ರಮ್ ಮತ್ತು ಶಿಶಿರ್, ಶೋಭಾ ಚೈತ್ರಾ, ಗೌತಮಿ, ಮಂಜು, ಹನುಮಂತು, ಧನರಾಜ್, ರಜತ್ ಎಲ್ಲರೂ ಕೂಡ ಅದ್ಭುತವಾಗಿ ಆಟವಾಡಿದ್ದು, ಮೋಕ್ಷಿತಾ ಪೈ ವಾರದ ಉತ್ತಮ ಪಡೆದಿದ್ದಾರೆ. ಹಾಗೆಯೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಜತ್ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ.
ಈ ವಾರದ ಬೆಳವಣಿಗೆ ಇಷ್ಟಾದರೆ ಪ್ರೇಕ್ಷಕರನ್ನು ಹಾಗೂ ಸ್ಪರ್ಧಿಗಳನ್ನು ಕಾಡುತ್ತಿರುವ ಎಲಿಮಿನೇಷನ್‌ಗೆ ಇನ್ನೇನು ಒಂದೇ ದಿನ ಬಾಕಿ ಇದೆ. ಇಂದು ಹಾಗೂ ನಾಳೆ ವೀಕೆಂಡ್ ಸಂಚಿಕೆಗಳು ಪ್ರಸಾರವಾಗಲಿದ್ದು, ನಾಮೀನೇಟ್ ಆದ ಸ್ಪರ್ಧಿಗಳ ಪೈಕಿ ಒಬ್ಬರು ಮನೆಯಿಂದ ಹೊರ ಹೋಗುವುದು ಮಾತ್ರ ಪಕ್ಕಾ ಆಗಿದೆ. ಈ ಹಿಂದೆ ನಡೆದಂತೆ ಎಲ್ಲರೂ ಬಚಾವ್ ಆಗಲೂ ಸಾಧ್ಯವೇ ಇಲ್ಲ. ಯಾಕೆಂದರೆ ಈಗಾಗಲೇ ದಿನಗಳು ಕಳೆದಿದ್ದು, ಇನ್ನೂ ಇಬ್ಬರು ಮನೆಯೊಳಗೆ ಪ್ರವೇಶಿಸಿದ್ದಾರೆ ಹೀಗಾಗಿ ಈ ವಾರ ಡಬಲ್ ಎಲಿಮಿನೇಷನ್ ನಡೆದರೂ ಕೂಡ ಅಚ್ಚರಿ ಇಲ್ಲ.

ಈ ವಾರ ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಧರ್ಮ ಕೀರ್ತಿರಾಜ್, ಗೌತಮಿ ಹಾಗೂ ಹನುಮಂತ ಮನೆಯಿಂದ ಆಚೆ ಹೋಗಲು ನಾಮೀನೇಟ್ ಆಗಿದ್ದು, ಇವರ ಪೈಕಿ ಈ ವಾರ ಒಬ್ಬರ ಆಟ ಬಿಗ್ ಬಾಸ್ ಮನೆಯಲ್ಲಿ ಅಂತ್ಯವಾಗಲಿದೆ. ತ್ರಿವಿಕ್ರಮ್ ಹಾಗೂ ಹನುಮಂತ ಉತ್ತಮ ಆಟಗಾರರಾಗಿದ್ದು ಪ್ರೇಕ್ಷಕರಿಗೂ ಕೂಡ ಮೆಚ್ಚಿನ ಆಟಗಾರರಾಗಿದ್ದಾರೆ. ಹೀಗಾಗಿ ಇವರಿಬ್ಬರು ಸೇಫ್ ಆಗುವ ಸಾಧ್ಯತೆ ಹೆಚ್ಚಿದೆ.
ಇನ್ನು ಉಗ್ರಂ ಮಂಜು ಈ ವಾರದ ಕ್ಯಾಪ್ಟನ್ ಆಗಿದ್ದು, ಮೋಕ್ಷಿತಾ ಪೈ ಉತ್ತಮ ಪಡೆದಿದ್ದಾರೆ. ಹೀಗಾಗಿ ಚೈತ್ರಾ ಕುಂದಾಪುರ, ಗೌತಮಿ, ಧರ್ಮ ಕೀರ್ತಿರಾಜ್ ಪೈಕಿ ಒಬ್ಬರು ಎಲಿಮಿನೇಟ್ ಆಗಬಹುದು ಎನ್ನುವುದು ಪ್ರೇಕ್ಷಕರ ಲೆಕ್ಕಚಾರವಾಗಿದೆ. ಚೈತ್ರಾ ಕುಂದಾಪುರ ಈ ವಾರ ಸಂಯಮದಿಂದ ಆಡಿದ್ದು ಅವರು ಕೂಡ ಸೇಫ್ ಆಗುವ ಸಾಧ್ಯತೆ ಇದ್ದು, ಗೌತಮಿ, ಧರ್ಮ ಕೀರ್ತಿರಾಜ್ ಪೈಕಿ ಒಬ್ಬರು ಎಲಿಮಿನೇಟ್ ಆಗಬಹುದು ಒಂದು ವೇಳೆ ಡಬಲ್ ಎಲಿಮಿನೇಷನ್ ಇದ್ದರೆ ಇಬ್ಬರೂ ಸಹ ಆಗಬಹುದು ಎನ್ನುವುದು ಕೆಲ ಪ್ರೇಕ್ಷಕರ ಲೆಕ್ಕಾಚಾರವಾಗಿದೆ.












Click it and Unblock the Notifications