Mokshitha Pai: ಮಂಜಣ್ಣ-ಗೌತಮಿ ಮುಂದೆ ಮೋಕ್ಷಿತಾ ಕಣ್ಣೀರು: ಹೊರ ಹೋಗುವವರು ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 11 ಅಂತಿಮ ದಿನಗಳತ್ತ ಸಾಗುತ್ತಿದ್ದು, ಇನ್ನು ಕೇವಲ ಹನ್ನೆರಡು ದಿನಗಳು ಪ್ರಸಾರಗೊಳ್ಳಲಿದೆ. ಈಗಾಗಲೇ ಗ್ರ್ಯಾಂಡ್ ಫಿನಾಲೆ ದಿನಾಂಕ ಕೂಡ ನಿಗದಿಯಾಗಿದ್ದು, ಜನವರಿ 26 ಭಾನುವಾರ ಗಣರಾಜೋತ್ಸವದ ದಿನ ನಡೆಯಲಿದೆ. ಈ ಬಗ್ಗೆ ಅಧೀಕೃತವಾಗಿ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಕೂಡ ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಈ ಸೀಜನ್‌ನಲ್ಲಿ ಕಾಲಿಟ್ಟ 20 ಜನರ ಪೈಕಿ ಇದೀಗ ಕೇವಲ ಎಂಟು ಜನ ಉಳಿದುಕೊಂಡಿದ್ದು, ವಿನ್ನರ್ ಯಾರಾಗಬಹುದು ಎಂದು ಊಹಿಸುವುದು ಕೂಡ ಕಷ್ಟವಾಗಿದೆ. ಕಾರ್ಯಕ್ರಮದ ಆರಂಭದಲ್ಲಿ ಇಂತವರೇ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದವರಿಗೆ ಹನುಮಂತ ಶಾಕ್ ಕೊಟ್ಟಿದ್ದು, ಇದೀಗ ಯಾರು ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಜೋರಾಗಿದೆ.

ಸದ್ಯ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡಲು ಸ್ಪರ್ಧಿಗಳು ಹೋರಾಡುತ್ತಿದ್ದು, ಬಿಗ್ ಬಾಸ್ ಮನೆಯೊಳಗೆ ಟಾಸ್ಕ್ ಕಾವು ಹೆಚ್ಚಾಗಿದೆ. ಇದರ ಜೊತೆ ನಾಮಿನೇಷನ್ ಕಾವು ಕೂಡ ಹೆಚ್ಚಾಗಿದೆ. ಈ ವಾರ ಬಿಗ್ ಬಾಸ್ ಕನ್ನಡ ಸೀಜನ್ 11ರಲ್ಲಿ ಮೊದಲ ಬಾರಿಗೆ ಒಂದೇ ವಾರದಲ್ಲಿ ಎರಡು ಎಲಿಮಿನೇಷನ್‌ಗಳು ನಡೆಯಲಿದೆ. ವಾರದ ಮಧ್ಯವೇ ಎಲಿಮಿನೇಷನ್ ನಡೆಯಲಿದ್ದು, ವೀಕೆಂಡ್ ಸಂಚಿಕೆಗೂ ಮುನ್ನ ಒಬ್ಬರು ಮನೆಗೆ ಹೋಗುವಂತೂ ಗ್ಯಾರಂಟಿಯಾಗಿದೆ.
ಈ ವಾರ ಕ್ಯಾಪ್ಟನ್ ಹನುಮಂತನನ್ನು ಬಿಟ್ಟು ಉಳಿದ ಎಲ್ಲಾ ಸ್ಪರ್ಧಿಗಳು ಅಂದರೆ ಗೌತಮಿ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಭವ್ಯ ಗೌಡ, ಧನರಾಜ್ ಹಾಗೂ ರಜತ್ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಈ ಬಾರಿ ಉಳಿದುಕೊಳ್ಳಲು ಸ್ಪರ್ಧಿಗಳು ಅಖಾಡಕ್ಕಿಳಿದು ಹೋರಾಡಲೇ ಬೇಕಾಗಿದೆ. ಇದೀಗ ಧನರಾಜ್ ವಾರದ ಮಧ್ಯದ ಎಲಿಮಿನೇಷನ್‌ನಿಂದ ಪಾರಾಗಿದ್ದಾರೆ. ಉಳಿದ ಸ್ಪರ್ಧಿಗಳಲ್ಲಿ ಒಬ್ಬರು ಇಂದಿನ ಅಥವಾ ನಾಳೆಯ ಸಂಚಿಕೆಯಲ್ಲಿ ಮನೆಗೆ ಹೋಗುವುದು ಖಚಿತವಾಗಿದೆ.
ಕೊನೆ ವಾರ ಬರುತ್ತಿದ್ದಂತೆ ಬಿಗ್ ಬಾಸ್ ಮನೆಯೊಳಗೆ ಹೊಸ ಬೆಳವಣಿಗೆಗಳು ನಡೆಯುತ್ತಿದೆ. ಒಂದೆಡೆ ಹಳೆ ದೋಸ್ತಿಗಳು ಮತ್ತೆ ಒಂದಾಗಿದ್ದರೆ. ಮತ್ತೊಂದೆಡೆ ಇಷ್ಟು ದಿನ ಸ್ನೇಹಿತರಾಗಿ ಜೊತೆಗಿದ್ದವರು ಇದೀಗ ಟಾಸ್ಕ್ ವಿಚಾರಕ್ಕೆ ಮಾತಿನ ಜಟಾಪಟಿಯಿಂದ ದೂರಾಗುತ್ತಿದ್ದಾರೆ. ಹೌದು ಅಂತಿಮ ದಿನಗಳು ಬರುತ್ತಿದ್ದಂತೆ ಬಿಗ್ ಬಾಸ್ ಮನೆಯ ಆರಂಭದ ಕೆಲವು ವಾರಗಳಂತೆ ಮೋಕ್ಷಿತಾ, ಗೌತಮಿ, ಹಾಗೂ ಉಗ್ರಂ ಮಂಜು ಸ್ನೇಹಿತರಾಗಿದ್ದಾರೆ.

ಇದೀಗ ಮೋಕ್ಷಿತಾ ಈವರೆಗೂ ದೂರವಿದ್ದ ಗೌತಮಿ ಹಾಗೂ ಉಗ್ರಂ ಮಂಜು ಮುಂದೆ ಕಣ್ಣೀರು ಹಾಕಿದ ಘಟನೆ ಕೂಡ ನಡೆದಿದೆ. ಸದ್ಯ ಎಲಿಮಿನೇಷನ್ ಹೊಸ್ತಿಲಿನಲ್ಲಿರುವ ಎಲ್ಲರೂ ಮನೆಗೆ ಹೋಗಲು ಬ್ಯಾಗ್ ಪ್ಯಾಕ್ ಮಾಡಿದ್ದಾರೆ. ಇದೇ ವಿಚಾರವನ್ನು ಉಗ್ರಂ ಮಂಜು, ಮೋಕ್ಷಿತಾ ಮುಂದೆ ಮಾತನಾಡಿದ್ದು, ನಾವೆಲ್ಲಾ ಇಷ್ಟು ದಿನ ಈ ಮನೆಯಲ್ಲಿ ಕಳೆದಿರುವುದೇ ಹೆಮ್ಮೆಯ ವಿಚಾರ. ಬ್ಯಾಗ್ ಪ್ಯಾಕ್ ಮಾಡಿಕೊಂಡಿದ್ದೀನಿ. ಹೀಗಾಗಿ ಇರುವಷ್ಟು ದಿನ ನಾನು ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತೇನೆ ಎಂದಿದ್ದಾರೆ. ಮಂಜು ಅವರ ಈ ಮಾತುಗಳನ್ನು ಕೇಳಿದ ಮೋಕ್ಷಿತಾ ಸಖತ್ ಎಮೋಷನಲ್ ಆಗಿ ಕಣ್ಣೀರು ಹಾಕಿದ್ದಾರೆ. ಅಲ್ಲದೇ ಇದೇ ವಿಚಾರವನ್ನು ಗೌತಮಿ ಬಳಿ ಹೇಳಿಕೊಂಡು ಅತ್ತಿದ್ದಾರೆ.












Click it and Unblock the Notifications