Bhavya Gowda: 'ಬಿಗ್‌ ಬಾಸ್‌ನಲ್ಲಿ ಭವ್ಯ ಗೌಡ ಆಟ ಅವರ ಮನೆಯವರಿಗೂ ಇಷ್ಟ ಆಗ್ತಿಲ್ಲ'

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಇನ್ನೇನು ಅಂತಿಮ ವಾರಗಳತ್ತ ಸಾಗುತ್ತಿದೆ. ಮನೆಯೊಳಗೆ ಕಾಲಿಟ್ಟ ಮೊದಲು 17 ಹಾಗೂ ಬಳಿಕ ಮೂವರ ಪೈಕಿ ಈಗ ಎಂಟು ಸ್ಪರ್ಧಿಗಳು ಮಾತ್ರ ಮನೆಯೊಳಗೆ ಉಳಿದಿದ್ದಾರೆ. ಇತ್ತ ಇಷ್ಟು ದಿನಗಳ ಕಾಲ ಮನೆಯೊಳಗಿದ್ದ ಸ್ಪರ್ಧಿಗಳು ಈಗಾಗಲೇ ಜನರ ಮನಸ್ಸು ಗೆದ್ದಿದ್ದಾರೆ. ಈ ಪೈಕಿ ಭವ್ಯ ಗೌಡ ಕೂಡ ಒಬ್ಬರು. ಗೀತಾ ಧಾರಾವಾಹಿ ಮೂಲಕ ಕಿರುತೆರೆ ಪ್ರಯಾಣ ಆರಂಭಿಸಿದ ಭವ್ಯ ಗೌಡ ಈ ಬಾರಿಯ ಬಿಗ್‌ ಬಾಸ್‌ನ ಪ್ರಮುಖ ಸ್ಪರ್ಧಿಯಾಗಿದ್ದಾರೆ.

ಈಗ ಎರಡನೇ ಬಾರಿ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಆಗಿರುವ ಭವ್ಯ ಗೌಡ ಓವರ್‌ ಆ್ಯಕ್ಟಿಂಗ್‌, ಡವ್‌ ರಾಣಿ, ಬಕೆಟ್‌ ಭವ್ಯ ಅಂತೆಲ್ಲಾ ಟ್ರೋಲ್‌ ಆಗುತ್ತಿದ್ದು, ಭವ್ಯ ಗೌಡ ಆಟದ ಬಗ್ಗೆ ಈ ಹಿಂದೆ ಅವರ ಮನೆಯವರಿಗೂ ಕೂಡ ಅಸಮಾಧಾನ ಇತ್ತು ಎನ್ನುವುದು ಬಹಿರಂಗವಾಗಿದೆ. ಈ ಬಗ್ಗೆ ಕನ್ನಡ ಕಿರುತೆರೆಯ ಖ್ಯಾತ ನಿರೂಪಕ ನಿರಂಜನ್‌ ದೇಶಪಾಂಡೆ ಮಾತನಾಡಿದ್ದಾರೆ.

Bigg Boss Kannada Season 11 Is Bhavya Gowda Doing Drama Inside The Bigg Boss House

'ಭವ್ಯ ನನಗೆ ತಂಗಿಯ ರೀತಿ. ಅವರ ಮನೆಯವರೇ ನನಗೆ ಕಾಲ್‌ ಮಾಡಿದ್ದರು. ಆಗ ನಾನು ನೇರವಾಗಿ ಕೇಳದೆ ನಿಮಗೆ ಬಿಗ್‌ ಬಾಸ್‌ ಮನೆಯಲ್ಲಿ ಭವ್ಯ ಆಟ ಹೇಗೆ ಅನಿಸುತ್ತಿದೆ ಹೇಳಿ ಅಂತಾ ಕೇಳಿದೆ. ಅದಕ್ಕೂ ಮುಂಚೆ ಅವರು ನನಗೆ ಯಾಕೆ ಕಾಲ್‌ ಮಾಡಿದ್ದರು ಅಂದರೆ, ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಗಳ ಮನೆಯವರು ಫೋನ್‌ ಮಾಡುವುದು ಇತ್ತಲ್ಲಾ ಆಗ ಭವ್ಯ ಮನೆಯವರು ನಿರಂಜನ್‌ ದೇಶಪಾಂಡೆ ಅವರ ಕೈಯಲ್ಲಿ ಕಾಲ್‌ ಮಾಡಿಸಿ ಬುದ್ಧಿ ಹೇಳಿ ಅಂತಾ ಹೇಳಿದ್ದರಂತೆ. ಅದನ್ನು ಹೇಳೋಕೆ ಫೋನ್‌ ಮಾಡಿದ್ದರು'.

Bigg Boss Kannada Season 11 Is Bhavya Gowda Doing Drama Inside The Bigg Boss House

'ನಾನು ಅವರ ಮನೆಗೆ ಅಷ್ಟು ಕ್ಲೋಸ್‌ ಇದ್ದೇನೆ ಹೀಗಾಗಿ ಫೋನ್‌ ಮಾಡಿದ್ದರು. ಆಮೇಲೆ ಭವ್ಯ ಬಗ್ಗೆ ಮಾತನಾಡಿದರು. ಅವಳು ಹೊರಗಡೆ ಇರುವುದೇ ಬೇರೆ. ಬಿಗ್‌ ಬಾಸ್ ಮನೆಯೊಳಗೆ ಯಾಕೆ ಹೀಗಿದ್ದಾಳೋ ಗೊತ್ತಿಲ್ಲ. ಹೋಗಿ ಗುಂಪಿನಲ್ಲಿ ಸೇರಿಕೊಂಡು ಬಿಟ್ಟಿದ್ದಾಳೆ. ಭವ್ಯ ಬಿಗ್‌ ಬಾಸ್‌ ಸ್ಪರ್ಧಿಗಳಿಗಿಂತ ಜಾಸ್ತಿ ಅವರ ಮನೆಯವರಿಗೆ ಇಷ್ಟ ಆಗ್ತಿಲ್ಲ' ಎಂದು ನಿರಂಜನ್‌ ದೇಶಪಾಂಡೆ ತಮ್ಮ ಮಿಸ್ಟರ್‌ ನಿರಿಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

Bigg Boss Kannada Season 11 Is Bhavya Gowda Doing Drama Inside The Bigg Boss House

ಈ ವಿಡಿಯೋ ಕ್ಲಿಪ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಇದು ಒಂದು ತಿಂಗಳ ಹಿಂದಿನ ವಿಡಿಯೋ ಆಗಿದೆ. ಈ ಹಿಂದೆ ಕೆಲವು ದಿನಗಳು ತ್ರಿವಿಕ್ರಮ್‌ ಅಣತಿಯಂತೆ ಆಡುತ್ತಿದ್ದ ಭವ್ಯ ಗೌಡ ಈಗ ಕಂಬ್ಯಾಕ್‌ ಮಾಡಿದ್ದು, ತಮ್ಮದೇ ಆದ ಆಟವಾಡುತ್ತಿದ್ದಾರೆ. ಇದೀಗ ತಮ್ಮದೇ ವೈಯಕ್ತಿಕ ಆಟವಾಡಿ ಈ ವಾರ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಈ ಮೂಲಕ ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರಲ್ಲಿ ಎರಡನೇ ಬಾರಿ ಭವ್ಯ ಗೌಡ ಮನೆಯ ಕ್ಯಾಪ್ಟನ್‌ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+