Bigg Boss Kannada: ಬಿಗ್‌ಬಾಸ್‌ ಮನೇಲಿ ಎಲ್ಲರೆದುರೇ ರಜತ್‌ಗೆ ಪತ್ನಿ ಫುಲ್‌ ಕ್ಲಾಸ್‌, ಕಾರಣ ಆ ಎರಡು ವಿಚಾರ

ಕನ್ನಡ ಬಿಗ್‌ಬಾಸ್‌ ಸೀಸನ್‌ 11ರಲ್ಲಿ ಸದ್ಯ ಫ್ಯಾಮಿಲಿ ರೌಂಡ್‌ ನಡೆಯುತ್ತಿದೆ. ಪ್ರತಿ ಸ್ಪರ್ಧಿಯ ಕುಟುಂಬಸ್ಥರನ್ನು ಬಿಗ್‌ಬಾಸ್‌ ಮನೆಗೆ ಕರೆತಂದು ಸರ್‌ಪ್ರೈಸ್‌ ನೀಡಲಾಗುತ್ತಿದೆ. ಈ ಫ್ಯಾಮಿಲಿ ರೌಂಡ್‌ನಲ್ಲಿ ರಜತ್‌ ಕಿಶನ್‌ಗೆ ತನ್ನ ಪತ್ನಿ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ವೈಲ್ಡ್‌ಕಾರ್ಡ್‌ ಮೂಲಕ ಬಿಗ್‌ಬಾಸ್‌ ಮನೆಗೆ ಎಂಟ್ರಿ ನೀಡಿರುವ ರಜತ್‌ ಸದ್ಯ ಫುಲ್‌ ಆಕ್ಟಿವ್‌ ಅಲ್ಲದೆ, ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಖಡಕ್‌ ಮಾತುಗಳಿಂದ ಎಲ್ಲರೊಂದಿಗೆ ಗುರ್‌ ಎನ್ನುತ್ತಿದ್ದ ರಜತ್‌, ಪತ್ನಿ ನೋಡಿದ ಕೂಡಲೇ ಸೈಲೆಂಟ್‌ ಆಗಿದ್ದಾರೆ.

Bigg Boss Kannada Season 11 Contestant Rajath Kishan Confronted By Wife Akshatha

ಬಿಗ್‌ಬಾಸ್‌ ಮನೆಗೆ ಬಂದಿರುವ ರಜತ್‌ ಪತ್ನಿ ಅಕ್ಷತಾ ಎಲ್ಲರ ಮುಂದೆಯೇ ಗಂಡನಿಗೆ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಎಲ್ಲರ ಮುಂದೆಯೇ ರಜತ್‌ಗೆ ಏನ್‌ ಎಲ್ರು ತೊಡೆ ಮೇಲೆ ಕುಳಿತುಕೊಳ್ತೀರಾ? ಎಂದು ಗರಂ ಆಗಿ ಕೇಳಿದ್ದಾರೆ. ಇದಕ್ಕೆ ರಜತ್‌ ಫುಲ್‌ ಸೈಲೆಂಟ್‌ ಆಗಿದ್ದಾರೆ.

ರಜತ್‌ ಸಖತ್‌ ಜಾಲಿಯಾಗಿ ಬಿಗ್‌ಬಾಸ್‌ನಲ್ಲಿ ಆಟ ಆಡುತ್ತಿದ್ದಾರೆ. ಈ ವೇಳೆ ಎಲ್ಲರ ಕಾಲೆಳೆಯುತ್ತಾ ಆಗಾಗ ಗರಂ ಆಗುತ್ತಿರುತ್ತಾರೆ. ಬಿಗ್‌ಬಾಸ್‌ ಮಹಿಳಾ ಸ್ಪರ್ಧಿಗಳ ಜೊತೆಗೂ ರಜತ್‌ ಆಗಾಗ ಕಾಮಿಡಿ ಮಾಡುತ್ತಿರುತ್ತಾರೆ. ಈ ವಿಚಾರಗಳನ್ನು ರಜತ್‌ ಪತ್ನಿ ಪ್ರಶ್ನಿಸಿದ್ದಾರೆ.

Bigg Boss Kannada Season 11 Contestant Rajath Kishan Confronted By Wife Akshatha

ಇನ್ನು ಎಲ್ಲರ ಮುಂದೆ ಫುಲ್‌ ಕ್ಲಾಸ್‌ ಆದ ಕಾರಣ ರಜತ್‌ ಕೂಡ ಸೈಲೆಂಟ್‌ ಆಗಿದ್ದಾರೆ. ಏನ್‌ ಐಶ್ವರ್ಯಾಗೆ ಸಖತ್‌ ಆಗಿದ್ದಾಳೆ ಅಂತೆಲ್ಲ ಹೇಳಿದ್ದೀಯ? ಎಂದು ರಜತ್‌ಗೆ ಅಕ್ಷತಾ ಅವರು ಜೋರು ಮಾಡಿದ್ದಾರೆ. ಈ ವೇಳೆ ರಜತ್‌ಗೆ ಅಕ್ಷತಾ ಒಂದು ಏಟು ಕೂಡ ಕೊಟ್ಟಿದ್ದಾರೆ. ಸಖತ್‌ ಇದ್ಳು, ಅದಕ್ಕೆ ಸಖತ್‌ ಆಗಿದ್ದಳು ಅಂದ್ರೇನು ಎಂದು ರಜತ್‌ ಕೂಡ ಕೌಂಟರ್‌ ಕೊಟ್ಟಿದ್ದಾರೆ.

ಇದಕ್ಕೂ ಮುನ್ನ ಬಿಗ್‌ಬಾಸ್‌ ಮನೆಗೆ ಮೊದಲಿಗೆ ಅಕ್ಷತಾ ಒಬ್ಬರೇ ಬಂದಿದ್ದರು. ಈ ವೇಳೆ ರಜತ್‌ ಮಗಳೆಲ್ಲಿ? ಎಂದು ಕೇಳಿದ್ರು. ಇದಕ್ಕೆ ಅಕ್ಷತಾ ಕಾಡಿಸಿ, ಯಾರೂ ಬರಲಿಲ್ಲ ಎಂದರು. ಇದರಿಂದ ಕೋಪಗೊಂಡ ರಜತ್‌, ಅಕ್ಷತಾ ಅವರ ಕುತ್ತಿಗೆ ಹಿಡಿದು ಹೊರಹೋಗುವಂತೆ ಕಾಮಿಡಿ ಮಾಡಿದ್ರು. ಬಿಗ್‌ಬಾಸ್‌ ಮೊದಲು ಅಕ್ಷತಾನ ಹೊರಗೆ ಕಳಿಸಿ ಎಂದ್ರು.

ಬಳಿಕ ಹೆಂಡ್ತಿಯಿಂದ ಮಂಗಳಾರತಿ ಆದ ಕೆಲ ಸಮಯದ ನಂತರ ರಜತ್‌ಗೆ ತಮ್ಮ ಮುದ್ದಾದ ಇಬ್ಬರು ಮಕ್ಕಳ ಎಂಟ್ರಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಮಕ್ಕಳನ್ನು ನೋಡುತ್ತಿದ್ದಂತೆ ರಜತ್‌ ಏನನ್ನೂ ಮಾತನಾಡದೆ ಮೌನವಾಗಿ ಕುಳಿತುಬಿಟ್ಟರು. ಮಕ್ಕಳು ಬಂದು ಅಪ್ಪ..ಅಪ್ಪ ಎಂದು ಮಾತನಾಡಿಸಿದ ವೇಳೆ ರಜತ್‌ ಕಣ್ಣೀರು ಹಾಕಿಕೊಂಡರು.

ಇದನ್ನು ಕಂಡ ಉಳಿದ ಸ್ಪರ್ಧಿಗಳು ಕೂಡ ಭಾವುಕವಾಗಿ ನೋಡುತ್ತಾ ನಿಂತರು. ಬಳಿಕ ರಜತ್‌ ತನ್ನ ಕುಟುಂಬದೊಂದಿಗೆ ಕೆಲಹೊತ್ತು ಸಮಯ ಕಳೆದಿರುವ ವಿಡಿಯೋ ಅನ್ನು ವಾಹಿನಿ ಹಂಚಿಕೊಂಡಿದೆ.

ಫ್ಯಾಮಿಲಿ ರೌಂಡ್‌ನಲ್ಲಿ ತ್ರಿವಿಕ್ರಮ್‌ ಹಾಗೂ ಭವ್ಯಾ ಗೌಡ ಪೋಷಕರು ಕೂಡ ಬಿಗ್‌ಬಾಸ್‌ ಮನೆಗೆ ಬಂದಿದ್ದರು. ಈ ವೇಳೆ ಭವ್ಯಾ ಅವರನ್ನು ತ್ರಿವಿಕ್ರಮ್‌ ತಾಯಿ ಹಾಡಿಹೊಗಳಿದ್ದರು. ಇಬ್ಬರೂ ರಾಧಾ ಕೃಷ್ಣರಂತೆ ಕಾಣ್ತೀರಿ ಎಂದು ತ್ರಿವಿಕ್ರಮ್‌ ತಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭವ್ಯಾ ಕೂಡ ತ್ರಿವಿಕ್ರಮ್‌ ತಾಯಿಯನ್ನ ತಬ್ಬಿಕೊಂಡು ಮಾತನಾಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+