Bigg Boss Kannada: ಬಿಗ್ ಬಾಸ್ ಹನುಮಂತನಿಗೆ ಇದೊಂದು ದುಶ್ಚಟ ಇದ್ಯಾ?
ಬಿಗ್ ಬಾಸ್ ಕನ್ನಡ ಸೀಸನ್ 11 ಅಂತಿಮ ದಿನಗಳತ್ತ ಸಾಗುತ್ತಿದೆ. ಈಗಾಗಲೇ ಗ್ರ್ಯಾಂಡ್ ಫಿನಾಲೆ ದಿನಾಂಕ ಕೂಡ ನಿಗದಿಯಾಗಿದ್ದು, ಜನವರಿ 26 ಭಾನುವಾರ ಗಣರಾಜೋತ್ಸವದ ದಿನ ನಡೆಯಲಿದೆ. ಬಿಗ್ ಬಾಸ್ ಮನೆಯೊಳಗೆ ಈ ಸೀಜನ್‌ನಲ್ಲಿ ಕಾಲಿಟ್ಟ 20 ಜನರ ಪೈಕಿ ಇದೀಗ ಕೇವಲ ಎಂಟು ಜನ ಉಳಿದುಕೊಂಡಿದ್ದು, ವಿನ್ನರ್ ಯಾರಾಗಬಹುದು ಎನ್ನುವ ಲೆಕ್ಕಾಚಾರ ಜೋರಾಗಿದೆ. ಈ ವಿನ್ನರ್ ಯಾರು ಎನ್ನುವ ಪ್ರಶ್ನೆಗೆ ಜೋರಾಗಿ ಕೇಳಿ ಬರುತ್ತಿರುವ ಹೆಸರು ಒಂದೇ ಅದೇ ಹಾಡುಗಾರ ಹನುಮಂತ.
ಈಗಾಗಲೇ ಸಂಗೀತದಲ್ಲಿ ಸಾಧನೆ ಮಾಡಿ ಶೋಗಳನ್ನು ಗೆದ್ದಿರುವ ಹನುಮಂತ ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ವಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಾರೆ. ಮನೆಗೆ ಬಂದ ಮೊದಲ ದಿನದಿಂದಲೂ ತಾನಾಯಿತು ತನ್ನ ಪಾಡಾಯಿತು ಎಂದುಕೊಂಡಿದ್ದ ಹನುಮಂತ ಯಾರಿಗೂ ತಿಳಿಯದಂತೆ ತಮ್ಮ ಆಟ ಆರಂಭಿಸಿದ್ದರು.

ಇದೀಗ ಬಿಗ್ ಬಾಸ್ ಕನ್ನಡ ರೋಚಕ ಘಟ್ಟವನ್ನು ತಲುಪಿದ್ದು, ಕಳೆದ ವಾರ ಟಿಕೆಟ್ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ಬಿಗ್ ಬಾಸ್ ಮನೆಯಲ್ಲಿ ಜೋರಾಗಿತ್ತು. ಕೊನೆಗೂ ಕೂಲ್ ಹನುಮಂತ ಟಿಕೆಟ್ ಟು ಫಿನಾಲೆ ಗೆದ್ದು ಫಿನಾಲೆಗೆ ಪ್ರವೇಶ ಪಡೆದಿದ್ದಲ್ಲದೇ ಬಿಗ್ ಬಾಸ್ ಕನ್ನಡ ಸೀಸನ್ 11ರ ಅಲ್ಟಿಮೇಟ್ ಕ್ಯಾಪ್ಟನ್ ಆದರು. ಹೀಗಾಗಿ ಈ ಬಾರಿ ವಿನ್ನರ್ ಹನುಮಂತನೇ ಆಗಬಹುದು ಎನ್ನುವುದು ಹಲವರ ಅಭಿಪ್ರಾಯವಾಗಿದೆ.
ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಗೆಲುವಿನತ್ತ ಹೆಜ್ಜೆ ಹಾಕುತ್ತಿರುವ ಹನುಮಂತನಿಗೆ ಆ ಒಂದು ದುಶ್ಚಟ ಇದೆಯಂತೆ. ಈ ಬಗ್ಗೆ ಆತನ ಆತ್ಮೀಯ ಸ್ನೇಹಿತ ಹೇಳಿಕೊಂಡಿದ್ದಾರೆ. ಅಲ್ಲದೇ ಹನುಮಂತ ಕಾರ್ಯಕ್ರಮಗಳಿಗೆ ಅತಿ ಹೆಚ್ಚು ಹಣ ಕೇಳುತ್ತಾರೆ ಎನ್ನುವ ಆರೋಪಕ್ಕೆ ಅವರ ಸ್ನೇಹಿತ ಖಡಕ್ ಉತ್ತರ ಕೊಡುವ ಮೂಲಕ ಪೂರ್ಣ ವಿರಾಮ ಹಾಕಿದ್ದಾರೆ.

'ಹನುಮಂತ ಕೋಟಿ, ಲಕ್ಷ ತೆಗೆದುಕೊಳ್ಳುತ್ತಾನೆ ಎನ್ನುವುದೆಲ್ಲಾ ಸುಳ್ಳು. ಕಮಿಟಿ ಅವರು ಹನುಮಂತ ನೀನು ಬರಬೇಕು ಅಂತಾ ಹೇಳಿದರೆ ಸಾಕು ಅವರು ಎಷ್ಟು ಕೊಟ್ಟರು ತೆಗೆದುಕೊಂಡು ಹೋಗಿ ಖುಷಿಯಿಂದ ಕಾರ್ಯಕ್ರಮ ಮಾಡಿಕೊಟ್ಟಿದ್ದಾರೆ. ಹನುಮಂತ ಮೂವತ್ತು, ಐವತ್ತು ಸಾವಿರ ಹಣ ತೆಗೆದುಕೊಳ್ಳುವುದೆಲ್ಲಾ ಸುಳ್ಳು. ಹೆಚ್ಚೆಂದರೆ ಐದು, ಹತ್ತು ಸಾವಿರ ತೆಗೆದುಕೊಂಡು ಸಹ ಕಾರ್ಯಕ್ರಮವನ್ನು ಖುಷಿಯಿಂದ ಮಾಡಿ ಕೊಟ್ಟು ಬರುವವ ಹನುಮಂತು' ಎಂದು ಹೇಳಿದ್ದಾರೆ.

ಇನ್ನು ಇಬ್ಬರು ಜೊತೆಯಲ್ಲೇ ಇರುತ್ತೀರಿ ಹನುಮಂತನಿಗೆ ಏನಾದರೂ ದುಶ್ಚಟ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರ ಸ್ನೇಹಿತ, 'ಖಂಡಿತಾ ಕೆಟ್ಟ ಅಭ್ಯಾಸ ಏನೂ ಇಲ್ಲ. ನಾನೇ ಗುಟ್ಕ ಹಾಕಿಕೊಂಡರೂ ಸಹ ನನಗೆ ಬೈಯುತ್ತಾನೆ. ಅದನೆಲ್ಲಾ ತಿನ್ನಬೇಡ ಬಿಟ್ಟು ಬಿಡು ಚಾಕಲೇಟು ತಿನ್ನು ಅಂತಾನೆ. ನಾನು ನೋಡಿರುವ ಹಾಗೆ ಹನುಮಂತ ಒಂದು ರೂಪಾಯಿ ಚಾಕಲೇಟು ಮತ್ತು ಹ್ಯಾಪಿಡೆಂಟ್ ತಿನ್ನುವುದು ಬಿಟ್ಟರೆ ಬೇರೆ ಏನೂ ಇಲ್ಲ' ಎಂದು ಹೇಳಿದ್ದಾರೆ. ಹನುಮಂತನ ಗುಣದ ಬಗ್ಗೆ ಅವರ ಸ್ನೇಹಿತ ನೀಡಿರುವ ಹೇಳಿಕೆ ಈಗ ವೈರಲ್ ಆಗುತ್ತಿದೆ.












Click it and Unblock the Notifications