ನಟ ಧರ್ಮ ಕೀರ್ತಿರಾಜ್‌ ಮದುವೆ ಫಿಕ್ಸ್‌: ಹುಡುಗಿ ಯಾರು?

ಕನ್ನಡ ಚಿತ್ರರಂಗದ ಹಿರಿಯ ನಟ ಕೀರ್ತಿ ರಾಜ್ ಅವರ ಮಗ, ನವಗ್ರಹ ಸಿನಿಮಾ ಖ್ಯಾತಿಯ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಕನ್ನಡ ಸೀಜನ್‌ 11ರ ಸ್ಪರ್ಧಿಯಾಗಿ ಎಲ್ಲರ ಮನಸ್ಸು ಗೆದ್ದರು. ತಮ್ಮ ಆಟ ಹಾಗೂ ಮುಗ್ಧತೆಯಿಂದ ಕನ್ನಡಿಗರ ಮನಸ್ಸು ಗೆದ್ದಿರುವ ಧರ್ಮ ಕೀರ್ತಿರಾಜ್ ಅವರು ಎಂಟು ವಾರಗಳನ್ನು ಬಿಗ್‌ ಬಾಸ್‌ ಮನೆಯಲ್ಲಿ ಪೂರೈಸಿದ್ದರು. ಧರ್ಮ ಹೊರ ಬರುತ್ತಿದ್ದಂತೆ ಅವರ ಮದುವೆಯ ಸುದ್ದಿಗಳು ಜೋರಾಗಿದ್ದು, ಇದೀಗ ಮೊದಲ ಬಾರಿಗೆ ಈ ವರ್ಷ ಮದುವೆಯಾಗುವುದು ಖಚಿತ ಎಂದು ಸ್ವತಃ ಧರ್ಮ ಕೀರ್ತಿರಾಜ್ ಹೇಳಿದ್ದಾರೆ.

ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 'ನನ್ನ ಮತ್ತು ಅನುಷಾ ರೈ ಅವರನ್ನು ಜನ ಇಷ್ಟೊಂದು ಇಷ್ಟ ಪಟ್ಟಿರುವುದಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವಿಬ್ಬರು ಒಳ್ಳೆಯ ಸ್ನೇಹಿತರು. ನಾವು ಮೊದಲು ಸ್ನೇಹಿತರಾಗಿದ್ದೇವು. ಈಗಲೂ ಸ್ನೇಹಿತರಾಗಿದ್ದೇವೆ. ಮುಂದೆಯೂ ಸ್ನೇಹಿತರಾಗಿರುತ್ತೇವೆ. ಯಾಕೆಂದರೆ ನನಗೂ ಅವರಿಗೂ ಇಬ್ಬರಿಗೂ ಬೇರೆ ಬೇರೆಯಾದ ವೈಯಕ್ತಿಕ ಬದುಕಿದೆ. ನನ್ನ ಮದುವೆ ಸಿದ್ಧತೆ ನಡೆಯುತ್ತಿದೆ' ಎಂದು ಧರ್ಮ ಕೀರ್ತಿರಾಜ್‌ ಹೇಳಿದ್ದಾರೆ.

Bigg Boss Kannada Season 11 Contestant Actor Dharma KeerthiRaj Marriage fix

'ನನ್ನ ಮದುವೆ ಬಗ್ಗೆ ಮನೆಯಲ್ಲಿ ಈಗಾಗಲೇ ಮಾತುಕತೆ ಆಗುತ್ತಿದ್ದೆ. ಹುಡುಗಿಯನ್ನು ಹುಡುಕುತ್ತಿದ್ದಾರೆ. ನೋಡಿ ಕೂಡ ಆಗಿದೆ. ಬಹುತೇಕ ಎಲ್ಲಾ ಫಿಕ್ಸ್‌ ಆಗಿದೆ. ನನ್ನ ಜೀವನ ಈ ಹಂತದಲ್ಲಿ ಇರುವುದರಿಂದ ಅನುಷಾ ರೈ ಮತ್ತು ನನ್ನ ನಡುವೆ ಇರುವುದು ಒಳ್ಳೆಯ ಸ್ನೇಹ ಅಂತಾ ಹೇಳಲು ಇಷ್ಟಪಡುತ್ತೇನೆ. ಅದನ್ನು ಅವರು ಗೌರವಿಸುತ್ತಾರೆ. ನಾನೂ ಸಹ ಗೌರವಿಸುತ್ತೇನೆ' ಎಂದರು.

'ಬಿಗ್‌ ಬಾಸ್‌ ಮನೆಯಲ್ಲಿ ಜನ ನಮ್ಮನ್ನು ಒಟ್ಟಿಗೆ ನೋಡಿದ್ದಾರೆ. ಅದರಲ್ಲೂ ಏನಾಗಿದೆ ಅಂದರೆ ದಿನದ ಇಪ್ಪತ್ತಾಲ್ಕು ಗಂಟೆಯಲ್ಲಿ ಒಂದು ಅರ್ಧ ಗಂಟೆ ನಾವು ಚೆನ್ನಾಗಿರುವುದನ್ನು ತೋರಿಸಿದ್ದಾರೆ. ಅದನ್ನು ಜನ ನೋಡಿ ಒಪ್ಪಿಕೊಂಡಿದ್ದಾರೆ. ಇಷ್ಟಪಟ್ಟಿದ್ದಾರೆ. ಅಷ್ಟೊಂದು ಫ್ಯಾನ್ ಪೇಜಸ್‌, ಅಷ್ಟೊಂದು ಜನ ನಮಗೆ ಬೆಂಬಲ ಕೊಟ್ಟಿರುವುದಕ್ಕೆ ನಾವು ನಿಜಕ್ಕೂ ಅದೃಷ್ಟವಂತರು. ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ' ಎಂದು ಹೇಳಿದರು.

Bigg Boss Kannada Season 11 Contestant Actor Dharma KeerthiRaj Marriage fix

ಇನ್ನು ತಮ್ಮ ಮದುವೆ ಬಗ್ಗೆ ಮಾತು ಮುಂದುವರಿಸಿದ ಧರ್ಮ ಕೀರ್ತಿರಾಜ್‌, 'ಈಗ ಮನೆಯಲ್ಲಿ ನೋಡಿರುವ ಹುಡುಗಿ ಸಿನಿಮಾ ಹಿನ್ನೆಲೆ ಇರುವವರಲ್ಲ. ಮದುವೆ ಬಗ್ಗೆ ನನಗಿನ್ನೂ ಸಂಪೂರ್ಣವಾಗಿ ಖಚಿತವಾಗಿಲ್ಲ. ಮುಂದೆ ನೋಡೋಣ. ಅದು ಆದಾಗ ಖಂಡಿತಾ ನಾನೇ ಹೇಳುತ್ತೇನೆ. ಅದಕ್ಕೆ ಇನ್ನೂ ಸಮಯ ಬೇಕು. ಅದಕ್ಕಿಂತ ಹೆಚ್ಚಾಗಿ ನನ್ನ ಸಿನಿಮಾಗಳೆಲ್ಲ ಚೆನ್ನಾಗಿ ಆಗಿ ನಿರ್ಮಾಪಕರ ಜೇಬು ತುಂಬ ಬೇಕು. ಜೀವನದಲ್ಲಿ ಎಲ್ಲವೂ ಹಂತ ಹಂತವಾಗಿ ಆಗಬೇಕು' ಎಂದು ಧರ್ಮ ಕೀರ್ತಿರಾಜ್‌ ಪಬ್ಲಿಕ್‌ ನೆಕ್ಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+