Bigg Boss: ಬಿಗ್‌ ಬಾಸ್‌ ಮನೆಯಿಂದ ಒಬ್ಬ ಸ್ಪರ್ಧಿ ಔಟ್, ಮತ್ತೊಂದು ಮೊಲದ ಔಟ್ ಬಗ್ಗೆ ಕಿಚ್ಚ ಸುದೀಪ್ ಸುಳಿವು

Bigg Boss: ಬಿಗ್ ಬಾಸ್‌ ಕನ್ನಡ 11 ಸೀಸನ್‌ ಫಿನಾಲೆಗೆ ಇನ್ನೂ ಕೆಲವೇ ದಿನಗಳಷ್ಟೇ ಬಾಕಿಯಿದೆ. ಈ ವಾರದಲ್ಲಿ ಅಂದುಕೊಂಡತೆ ಮಿಡ್‌ ವೀಕ್‌ ಎಲಿಮಿನೇಷನ್‌ ಆಗಿರಲಿದೆ. ಆದರೆ, ಶನಿವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ ವೇಳೆ ನಿರೀಕ್ಷೆಯಂತೆ ಸ್ಪರ್ಥಿಯೊಬ್ಬರು ದೊಡ್ಮನೆಯಿಂದ ಹೊರಗಡೆ ಬಂದಿದ್ದಾರೆ. ಇದೇ ವೇಳೆ ಆಮೆ, ಮೊಲದ ಕಥೆ ಹೇಳಿ ಸುದೀಪ್‌ ಮತ್ತೊಂದು ಶಾಕಿಂಗ್‌ ಸುದ್ದಿವೊಂದನ್ನು ನೀಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ಘಟಕ್ಕೆ ಬಂದು ನಿಂತಿದ್ದು, ಗ್ರ್ಯಾಂಡ್ ಫಿನಾಲೆಗೆ ಬಾಕಿಯಿರುವುದು ಇನ್ನೊಂದೇ ವಾರ. ಇನ್ನು ಶನಿವಾರ ನಡೆದ ಕಿಚ್ಚಿನ ಪಂಚಾಯ್ತಿಯಲ್ಲಿ ತ್ರಿವಿಕ್ರಂ ಪ್ರಕಾರ, ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗಿದ್ದ ಜಿಂಕೆ ಎಂಬ ಸ್ಪರ್ಧಿ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದು, ಹುಲಿ ಎಂಬ ಸ್ಪರ್ಧಿ ನಾಮಿನೇಟ್‌ನಿಂದ ಸೇಫ್‌ ಆಗಿ ಮತ್ತೆ ಮನೆ ಒಳಗಡೆ ಉಳಿದುಕೊಂಡಿದ್ದಾರೆ.

Bigg Boss Kannada Season 11 Another Contestant Came Out From BBK house

ಶನಿವಾರ ನಡೆದ ಕಿಚ್ಚನ ಪಂಚಾಯ್ತಿಯ ಕೊನೆಗೆ ಕಿಚ್ಚ ಸುದೀಪ್ ಅವರು 5 ನಾಮಿನೇಟ್ ಆದ ಸ್ಪರ್ಧಿಗಳಿಗೆ ಎಲಿಮಿನೇಷನ್ ಶಾಕ್ ಕೊಟ್ಟರು. ಎಲ್ಲತ ಬಳಿ ಅಭಿಪ್ರಾಯ ಪಡೆಯುವ ಮೂಲಕ ಮಾತುಕತೆ ಮುಗಿದ ಬಳಿಕ ನಾಮಿನೇಟ್ ಆದವರನ್ನ ಸೂಟ್‌ಕೇಸ್‌ ಸಮೇ ಆ್ಯಕ್ಟಿವಿಟಿ ರೂಂ ಗೆ ಕಳುಹಿಸಲಾಗಿಯಿತು. ಅಲ್ಲಿ ನಾಮಿನೇಷನ್ ಆಟ ನಡೆದಿಯಿತು.

ಆ್ಯಕ್ಟಿವಿಟಿ ರೂಮ್‌ನಲ್ಲಿ ನಾಮಿನೇಟ್‌ ಆದ 5 ಸ್ಪರ್ಧಿಗಳ ಮುಂದೆ ಒಂದೊಂದು ಸೂಟ್‌ಕೇಸ್‌ ಇಡಲಾಗಿತ್ತು. ಬಳಿಕ ಆ ಸೂಟ್‌ಕೇಸ್‌ ಓಪನ್‌ ಮಾಡಿ ಅದರಲ್ಲಿ ಸೇಫ್‌ ಅಂತಾ ಬರೆದಿದ್ದರೆ, ನೀವು ಮತ್ತೆ ಮನೆಯ ಒಳಗಡೆ ಹೋಗಲಿದ್ದೀರಿ. ಇಲ್ಲದಿದ್ದರೆ, ನೇರವಾಗಿ ಹೊಗರಡೆ ಬಂದು ಬಿಗ್‌ ಬಾಸ್‌ ವೇದಿಕೆ ಮೇಲೆ ನನ್ನ ಭೇಟಿ ಮಾಡಲಿದ್ದೀರಿ ಎಂದು ಕಿಚ್ಚ ಸುದೀಪ್‌ ಹೇಳಿದರು.

ಮೊದಲಿಗೆ ರಜ್‌ ಸೂಟ್‌ಕೇಸ್‌ ಓಪನ್ ಮಾಡಿದ್ದು, ಅದರಲ್ಲಿ ಒಂದು ಹಾಳೆಯಲ್ಲಿ ಸೇಫ್‌ ಎಂದು ಬರೆದಿದ್ದು, ಈ ಹಿನ್ನೆಲೆ ಅವರು ಮನೆಯ ಒಳಗಡೆ ಹೋಗುತ್ತಾರೆ. ಬಳಿಕ ಉಗ್ರಂ ಮಂಜು ಒಳಗಡೆ ಹೋಗುತ್ತಾರೆ. ಇನ್ನುಳಿದ ಮೂವರಿಗೆ ಅಂದರೆ ಧನರಾಜ್‌, ಗೌತಮಿ ಜಾದವ್, ಭವ್ಯಾ ಗೌಡಗೆ ಒಂದೇ ಬಾರಿಗೆ ಸೂಟ್‌ ಕೇಸ್‌ ಓಪನ್‌ ಮಾಡಲು ಹೇಳುತ್ತಾರೆ. ಆಗ ಗೌತಮಿ ಎಲಿಮಿನೇಡೆಟ್‌ ಆಗಿ ಬಿಗ್‌ ಬಾಸ್‌ ಆದೇಶದಂತೆ ನೇರವಾಗಿ ಹೊರಗಡೆ ಹೋಗುತ್ತಾರೆ. ಇನ್ನುಳಿದ ಇಬ್ಬರು ಮನೆಯ ಒಳಗಡೆ ಹೋಗುತ್ತಾರೆ.

ಇನ್ನೂ ಎಲಿಮಿನೇಟೆಡ್‌ ಆದ ಗೌತಮಿ ಜಾದವ್ ಅವರು ವೇದಿಕೆ ಮೇಲೆ ಕಿಚ್ಚ ಸುದೀಪ್‌ ಅವರನ್ನು ಭೇಟಿ ಮಾಡುತ್ತಾರೆ. ಗೌತಮಿ ಜಾಧವ್ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಮೇಲೂ ಈ ವಾರದ ಎಲಿಮಿನೇಷನ್ ಬಾಕಿಯಿದೆ. ಡಬಲ್ ಎಲಿಮಿನೇಷನ್‌ನಲ್ಲಿ ಬಿಗ್ ಬಾಸ್ ಮನೆಯಿಂದ ಇವತ್ತು ಒಬ್ಬರು ಹೊರಡೆ ಬರುತ್ತಿದ್ದಾರೆ ಎಂದು ಹೇಳುವ ಮೂಲಕ ಎಲಿಮಿನೇಷನ್‌ನಿಂದ ಪಾರಾದ ಸ್ಪರ್ಧಿಗಳಿಗೆ ಶಾಕ್‌ ಕೊಟ್ಟರು.

ಇದೇ ವೇಳೆ ಆಮೆ ಹಾಗೂ ಮೊಲದ ರೇಸ್ ಬಗ್ಗೆ ಕಿಚ್ಚ ಸುದೀಪ್‌ ಹೇಳುತ್ತಾರೆ. ಬಿಗ್ ಬಾಸ್ ಸೀಸನ್ 11ರಲ್ಲಿ 5 ಓಡುವ ಮೊಲಗಳಲ್ಲಿ 1 ಮೊಲ ಔಟ್‌ ಆಗಿ ಹೊರಬಂದಿದೆ. ಮತ್ತೊಂದು ಮೊಲ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದೆ. ಆ ಮೊಲ ಯಾವುದು ಅನ್ನುವುದು ನನಗೆ ಗೊತ್ತಿದೆ ಎಂದು ಕಿಚ್ಚ ಸುದೀಪ್ ಹೇಳುವ ಮೂಲಕ ಶಾಕ್‌ ಕೊಟ್ಟಿದ್ದಾರೆ.

ಮತ್ತೊಂದೆಡೆ ಹನುಮಂತ, ಮೋಕ್ಷಿತಾ, ತ್ರಿವಿಕ್ರಮ್ ಅವರು ಫಿನಾಲೆ ವಾರಕ್ಕೆ ಸೇಫ್ ಆಗಿದ್ದಾರೆ. ಉಳಿದ ಸ್ಪರ್ಧಿಗಳಾದ ಧನರಾಜ್, ಉಗ್ರಂ ಮಂಜು, ರಜತ್ & ಭವ್ಯಾ ಅವರು ಇಂದಿನ ಅಂದರೆ ಭಾನುವಾರ ನಡೆಯಲಿರುವ ಕಿಚ್ಚನ ಪಂಚಾಯ್ತಿ ವೇಳೆ ಎಲಿಮಿನೇಷನ್ ಅಗ್ನಿ ಪರೀಕ್ಷೆಯನ್ನು ಇದುರಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಈ ನಾಲ್ವರಲ್ಲಿ ಇಂದು ಮತ್ತೊಬ್ಬರು ಹೊರಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+