ಬಿಗ್ ಬಾಸ್ ಮನೆಯಿಂದ ಈ ವಾರ ಐಶ್ವರ್ಯಾ ಸಿಂಧೋಗಿ ಔಟ್
ಬಿಗ್ ಬಾಸ್ ಕನ್ನಡ ಸೀಜನ್ 11ರ ಅಂತಿಮ ವಾರಗಳು ಬರುತ್ತಿದ್ದು, ಆಟ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಎಲಿಮಿನೇಷನ್ ಹಾಗೂ ನಾಮಿನೇಷನ್ ಕಾವು ದಿನದಿಂದ ದಿನಕ್ಕೆ ಜೋರಾಗಿದ್ದು, ಈ ವಾರ ಮನೆಯಿಂದ ಆಚೆ ಹೋಗುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ.
ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾಗಿ ಈಗಾಗಲೇ 90 ದಿನಗಳು ಕಳೆದಿವೆ. ಗ್ರಾಂಡ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಟಾಪ್ ಐದು ಸ್ಪರ್ಧಿಗಳು ಯಾರು ಎಂದು ಊಹಿಸುವುದು ಕಷ್ಟವಾಗಿದೆ. ಇನ್ನು ವಿನ್ನರ್, ರನ್ನರ್ ಲೆಕ್ಕಾಚಾರ ದೂರದ ಮಾತಾಗಿದೆ. ಅಷ್ಟರ ಮಟ್ಟಿಗೆ ಬಿಗ್ ಬಾಸ್ ಆಟ ದಿನದಿಂದ ದಿನಕ್ಕೆ ಇಂಟ್ರಸ್ಟಿಂಗ್ ಆಗುತ್ತಿದೆ.

ಮೊದಲು ಬಿಗ್ ಮನೆ ಪ್ರವೇಶಿಸಿದ ಹದಿನೇಳು ಸ್ಪರ್ಧಿಗಳು ಹಾಗೂ ಬಳಿಕ ಮೂವರು, ಒಟ್ಟು ಮನೆಯೊಳಗೆ ಕಾಲಿಟ್ಟ ಇಪ್ಪತ್ತು ಜನರ ಪೈಕಿ ಇದೀಗ ಹತ್ತು ಮಂದಿ ಮಾತ್ರ ಮನೆಯೊಳಗೆ ಉಳಿದಿದ್ದು, ಬಲಿಷ್ಠ ಸ್ಪರ್ಧಿಗಳಿಂದ ಆಟ ಇನ್ನಷ್ಟು ಕಠಿಣವಾಗಿದೆ. ಹೀಗಾಗಿ ಮನೆಯಿಂದ ಆಚೆ ಹೋಗುವ ಸ್ಪರ್ಧಿ ಯಾರು ಎನ್ನುವ ಲೆಕ್ಕಾಚಾರ ಎಲ್ಲೆಡೆ ಜೋರಾಗಿದೆ.
ಈ ವಾರ ತ್ರಿವಿಕ್ರಮ್, ಗೌತಮಿ, ಮಂಜು, ಮೋಕ್ಷಿತಾ, ಧನರಾಜ್ ಆಚಾರ್, ಚೈತ್ರಾ ಕುಂದಾಪುರ, ಹಾಗೂ ಐಶ್ವರ್ಯಾ ಸಿಂಧೋಗಿ ಹಾಗೂ ಹನುಮಂತ ನಾಮಿನೇಟ್ ಆಗಿದ್ದು, ಕಳೆದ ಸಂಚಿಕೆಯಲ್ಲಿ ಹೆಚ್ಚಿನ ವೋಟ್‌ಗಳೊಂದಿಗೆ ದೋಸ್ತ್ ಜೋಡಿ ಸೇಫ್ ಆಗಿದೆ. ಅಂದರೆ ಹನುಮಂತ ಹಾಗೂ ಧನರಾಜ್ ಆಚಾರ್ ಜೋಡಿ ಸೇಫ್ ಆಗಿದೆ. ಉಳಿದವರ ತಲೆಯ ಮೇಲೆ ನಾಮಿನೇಷನ್ ಕತ್ತಿ ತೂಗುತ್ತಿದೆ.

ಈ ವಾರ ನಾಮಿನೇಟ್ ಆದವರ ಪೈಕಿ ಕಿರುತೆರೆ ಜನಪ್ರಿಯ ನಟಿ ಐಶ್ವರ್ಯಾ ಸಿಂಧೋಗಿ ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇದು ಉನ್ನತ ಮೂಲದ ಮಾಹಿತಿಯಾಗಿದ್ದು, ಐಶ್ವರ್ಯಾ ಸಿಂಧೋಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿರುವುದು ಬಹುತೇಕ ಖಚಿತವಾಗಿದೆ.
Photo Credit- Aishwarya Shindogi Instagram












Click it and Unblock the Notifications