ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಬ್ರೇಕಪ್: 5 ವರ್ಷದ ಪ್ರೀತಿಗೆ ಎಳ್ಳು ನೀರು
ಬಿಗ್ ಬಾಸ್ ಕನ್ನಡ ಸೀಜನ್ 10 ಮುಗಿದು ವರ್ಷಗಳು ಕಳೆದು, ಸೀಜನ್ 11 ಆರಂಭವಾಗಿ ಮುಗಿಯುವ ಹಂತಕ್ಕೆ ಬಂದರೂ ಸಹ ಬಿಗ್ ಬಾಸ್ ಕನ್ನಡ ಸೀಜನ್ 10ರ ಸ್ಪರ್ಶಿಗಳ ಹವಾ ಮಾತ್ರ ಸ್ವಲ್ಪವೂ ಕಮ್ಮಿ ಆಗಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಈ ಸೀಜನ್‌ನ ಸ್ಪರ್ಧಿಗಳು ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಹೀಗಾಗಿ ಮರೆತವರೂ ಕೂಡ ಈ ಸೀಜನ್ ಬಿಗ್ ಬಾಸ್ ಅನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ.
ಇದೀಗ ಬಿಗ್ ಬಾಸ್ ಸೀಸನ್ 10ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಪವಿ ಪೂವಪ್ಪ ಸುದ್ದಿಯಲ್ಲಿದ್ದಾರೆ. ಫ್ಯಾಷನ್ ಇನ್‌ಫ್ಲೂಯನ್ಸರ್ ಹಾಗೂ ಮಾಡೆಲ್ ಆಗಿ ಸಖತ್ ಫೇಮಸ್ ಆಗಿರುವ ಪವಿ ಪೂವಪ್ಪ ಬಿಗ್ ಬಾಸ್ ಸೀಸನ್ 10ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟು ಧೂಳೆಬ್ಬಿಸಿದ್ದರು.ಇದರಿಂದ ಮತ್ತಷ್ಟು ಜನರಿಗೆ ಹತ್ತಿರವಾಗಿ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು.

ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಿರುವ ಪವಿ ಪೂವಪ್ಪ ವೈಯಕ್ತಿಕ ಜೀವನದಲ್ಲಿ ಏರುಪೇರಾಗಿದೆ ಎನ್ನುವ ಸುದ್ದಿ ಬಹಿರಂಗಗೊಂಡಿದೆ. ಹೌದು ಪವಿ ಪೂವಪ್ಪ ತಮ್ಮ ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ, ಸುಮಾರು ಐದು ವರ್ಷಗಳ ಕಾಲ ಈ ರಿಲೇಷನ್‌ಶಿಪ್‌ನಲ್ಲಿದ್ದ ಜೋಡಿ ಇದೀಗ ಬ್ರೇಕಪ್ ಮಾಡಿಕೊಂಡಿದೆ.
ಈ ಬಗ್ಗೆ ಸ್ವತಃ ಪವಿ ಪೂವಪ್ಪ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಬ್ರೇಕಪ್ ಆಗಿರುವುದನ್ನು ಒಪ್ಪಿಕೊಂಡಿರುವ ಪವಿ, ಈ ಹಿಂದೆ ಬಾಯ್‌ಫ್ರೆಂಡ್ ಬಗ್ಗೆ ರಿವೀಲ್ ಆಗಿತ್ತು. ಇದೀಗ ಬ್ರೇಕಪ್ ಆಗಿದೆ ಅಂತಾನೂ ಎಲ್ಲಾ ಕಡೆ ರಿವೀಲ್ ಆಗಿದೆ. 5 ವರ್ಷಗಳಿಂದ ಜೊತೆಯಲ್ಲಿದ್ದರು. ಎಲ್ಲವೂ ಚೆನ್ನಾಗಿತ್ತು.

ನಮ್ಮಿಬ್ಬರು ನಡುವೆ ಒಳ್ಳೆ ಹೊಂದಾಣಿಕೆ ಇತ್ತು. ಹೋಗ್ತಾ ಹೋಗ್ತಾ ಅವರಿಗೆ ನನ್ನ ನಾಯಿ ಬಗ್ಗೆ ಸಮಸ್ಯೆ ಶುರುವಾಯ್ತು. ಮದುವೆಯಾದ ಮೇಲೆ ನಾಯಿಯನ್ನು ಮನೆಯಲ್ಲಿ ಬಿಡುವುದಿಲ್ಲ ಎಂದರು. ಇದರಿಂದ ಕೆಲವು ಸಮಸ್ಯೆ ಶುರುವಾಯ್ತು. ಸಣ್ಣ ಪುಟ್ಟ ವಿಚಾರಗಳಿಗೆ ಕಾರಣ ಕೊಡಲು ಶುರು ಮಾಡಿದರು. ಹೀಗಾಗಿ ನಾನೇ ಹಿಂದೆ ಸರಿದರೆ ಒಳ್ಳೆದು ಅನಿಸಿತು ಎಂದು ಪಬ್ಲಿಕ್ ನೆಕ್ಸ್ಟ್‌ಗೆ ಪವಿ ಪೂವಪ್ಪ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.
ಇನ್ನು ಈ ಹಿಂದೆ ಬಿಗ್ ಬಾಸ್ ಸಮಯದಲ್ಲಿ ತಮ್ಮ ಪ್ರೀತಿ ಬಗ್ಗೆ ಮಾತನಾಡಿದ್ದ ಪವಿ ಪೂವಪ್ಪ, ನನ್ನ ಬಾಯ್‌ಫ್ರೆಂಡ್ ಐರ್‌ಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶೀಘ್ರವೇ ನಾವಿಬ್ಬರು ಮದುವೆಯಾಗುತ್ತಿದ್ದೇವೆ ಎಂದು ಹೇಳಿದ್ದರು. ಇದೀಗ ಈ ಜೋಡಿಯ ನಡುವೆ ಬ್ರೇಕಪ್ ಆಗಿರುವ ವಿಚಾರ ಬಹಿರಂಗಗೊಂಡಿದೆ.












Click it and Unblock the Notifications