Bigg Boss: ರಜತ್ vs ಧನರಾಜ್, ಅಂಕಲ್ - ಪಾಪು ಅಂತ ಬಿಗ್‌ಫೈಟ್!

ಬಿಗ್‌ಬಾಸ್‌ ಕನ್ನಡ ಸೀಸನ್‌11 ರಲ್ಲಿ ನಾಮಿನೇಷನ್ ಕಿಚ್ಚು ಜೋರಾಗಿದೆ. ಬಿಗ್‌ಬಾಸ್‌ ಕನ್ನಡ ಮನೆಗೆ ಅತಿಥಿಗಳ ಆಗಮನ ಹಾಗೂ ನಾಮಿನೇಷನ್ ಪ್ರಕ್ರಿಯೆ ಜೋರಾಗಿದೆ. ಇನ್ನು ಬಿಗ್‌ಬಾಸ್‌ ಕನ್ನಡ ಸೀಸನ್‌11 ಈಗ ಸಿಕ್ಕಾಪಟ್ಟೆ ರೋಚಕ ಹಂತವನ್ನು ತಲುಪಿದೆ. ಇದೀಗ ಬಿಗ್‌ಬಾಸ್‌ ಸೀಸನ್‌ 11ಕ್ಕೆ ಕಳೆದ ಬಾರಿ ಬಿಗ್‌ಬಾಸ್‌ನಲ್ಲಿ ಮಿಂಚಿದ್ದ ಸ್ಪರ್ಧಿಗಳು ಆಗಮಿಸುತ್ತಿದ್ದು, ನಾಮಿನೇಷನ್ ಹಾಗೂ ಎಂಟರ್‌ಟೇನ್‌ಮೆಂಟ್‌ ಸ್ವಲ್ಪ ಜಾಸ್ತಿನೇ ಆಗಿದೆ. ಬಿಗ್‌ಬಾಸ್‌ಗೆ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಹಾಗೂ ಹಾಸ್ಯದ ಮೂಲಕವೇ ಹೆಚ್ಚು ಫೇಮಸ್‌ ಆಗಿರುವ ಧನರಾಜ್ ನಡುವೆ ಇದೀಗ ಬಿಗ್‌ಫೈಟ್ ಶುರುವಾಗಿದೆ. ಯಾವ ಕಾರಣಕ್ಕೆ ಇವರಿಬ್ಬರ ನಡುವೆ ಫೈಟ್‌ಆಗಿದೆ ಅನ್ನೋದು ನೋಡುವುದಾದರೆ..

ಬಿಗ್‌ಬಾಸ್‌ನಲ್ಲಿ ಇದೀಗ ನಾಮಿನೇಷನ್‌ ಸೀಸನ್‌ ಇದೆ. ಈಗ ನಡೆಯುತ್ತಿರುವ ನಾಮಿನೇಷನ್ ಪ್ರಕ್ರಿಯೆ ತುಸು ಕಾರವಾಗಿಯೇ ಇದೆ. ಕಳೆದ ಬಾರಿ ಬಿಗ್‌ಬಾಸ್‌ನಲ್ಲಿ ಮಿಂಚಿದ್ದ ನಮ್ರತಾ ಹಾಗೂ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಚಾಂಪಿಯನ್‌ ಕಾರ್ತಿಕ್‌ ಅವರು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದು, ಬಿಗ್‌ಬಾಸ್‌ನ ಒಳಗೆ ಹೊಸ ಜೋಶ್ ಸೃಷ್ಟಿಯಾಗಿದೆ. ಆದರೆ, ಈ ಮಧ್ಯೆ ರಜತ್ ಹಾಗೂ ಧನ್‌ರಾಜ್‌ ನಡುವೆ ಬಿಗ್‌ ಫೈಟ್‌ ಆಗಿದೆ.
ಧನರಾಜ್‌ ಅವರು ಮಾತನಾಡಿ ನಾವು ಗ್ರೋಸರಿ ಟಾಸ್ಕ್‌ ಮಾಡ್ತೀವಿ.. ಅವಾಗ ತ್ರಿವಿಕ್ರಮ್‌ ಅವರು ವಿನ್‌ ಆಗಲ್ಲಿಕ್ಕೆ ರಜತ್‌ ಕಾರಣ ಅಂತ ಹೇಳ್ತಾರೆ ಅಂತ ಮಾತು ಶುರು ಮಾಡಿದ್ದಾರೆ. ಈ ವಿಷಯವನ್ನ ಹೇಳಿ ಧನರಾಜ್‌ ಅವರು ರಜತ್‌ ಅವರನ್ನ ನಾಮಿನೇಟ್‌ ಮಾಡಿದ್ದಾರೆ.

Bigg Boss Kannada Rajat vs Dhanraj Uncle - Papu Big Fight

ಇದಕ್ಕೆ ಕೆಂಡಾಮಂಡಲಾಗಿರುವ ರಜತ್‌ ಅವರು ಯಾವನೋ ಕೊಟ್ಟಿರುವ ಕಾರಣಕ್ಕೆ ನನಗೆ ಬಂದು ಹೇಳ್ತಾನೆ ಗುಗ್ಗು ನನ್ ಮಗ ಎಂದಿದ್ದಾರೆ. ಮುಂದುವರಿದು ನಿಮ್ಮ ಲೆವೆಲ್‌ ಏನಂತ ನನಗೆ ಗೊತ್ತಾಗಿದೆ. ಆಗ ರಜತ್‌ ನಾನು ಎಂತವನು ಅಂತ ನಿಮಗೆ ಗೊತ್ತಿಲ್ಲ ಅಂತ ಹೇಳಿರುವುದು ಪ್ರೋಮೋದಲ್ಲಿದೆ. ನನ್ನ ಬಳಿ ಈ ರೀತಿ ಆಟವೆಲ್ಲ ಆಡಬೇಡ ಅಂತ ರಜತ್‌ ಹೇಳಿದ್ರೆ. ನಾನು ಬಂದಿರೋದೇ ಆಟವಾಡಲಿಕ್ಕೆ ಅಂತ ಧನರಾಜ್‌ ಹೇಳಿದ್ದಾರೆ. ಲೋ ಮಗು ಅಂತ ಹೇಳೋದು ನಿಂಗೆ ಇದಕ್ಕೆ ಕಣೋ.. ಅಂತ ರಜತ್‌ ಕಾಲೆಳೆದಿದ್ದು, ಈ ಇಬ್ಬರ ನಡುವೆ ವಾಕ್ಸಮರವಾಗುವುದಕ್ಕೆ ಕಾರಣವಾಗಿದೆ. ಅಲ್ಲದೇ ರಜತ್‌ ಪಾಪು ಎನ್ನುವುದಕ್ಕೂ ಧನರಾಜ್‌ ಅಂಕಲ್‌ ಎನ್ನುವ ರಿಪ್ಲೈ ಕೊಟ್ಟಿದ್ದಾರೆ. ಏನ್‌ ಏನ್‌ ಅಂತ ಇಬ್ಬರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಇದು ಹೋಗಿದೆ. ಈ ಹಂತದಲ್ಲಿ ಮಂಜಣ್ಣ ಅವರು ಮಧ್ಯಪ್ರವೇಶ ಮಾಡಿದ್ದಾರೆ.

ಬಿಗ್‌ಬಾಸ್‌ಗೆ ರಜತ್‌ ಎಂಟ್ರಿ ಕೊಟ್ಟಾಗಲಿಂದಲೂ ಆಟದ ಖದರ್‌ ಚೇಂಜ್‌ ಆಗಿದೆ. ಇನ್ನು ಧನರಾಜ್‌ ಅವರು ಹಾಸ್ಯದ ಮೂಲಕವೇ ಎಲ್ಲರನ್ನು ಮೆಚ್ಚಿಸಿದ್ದಾರೆ. ಹಾಸ್ಯ ಹಾಗೂ ಕೋಪಗಳ ಸಮ್ಮಿಶ್ರಣದಂತೆ ಇಂದಿನ ಪ್ರೋಮೊ ಇದೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಕೊನೆಯ ಹಾಗೂ ನಿರ್ಣಾಯಕ ಹಂತವನ್ನು ತಲುಪುತ್ತಿದ್ದು, ಕೊನೆಯ ಹಂತದಲ್ಲಿ ಯಾರೆಲ್ಲ ಉಳಿದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+