Bigg Boss Kannada: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾದ ಈ ಹೊಸ ಸದಸ್ಯನೇ ಕ್ಯಾಪ್ಟನ್
Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 11 ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಈ ದೊಡ್ಮನೆಗೆ ಹೊಸ ಅಧ್ಯಾಯದಲ್ಲಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಅಷ್ಟೇ ಅಲ್ಲದೆ, ಅವರನ್ನೇ ಮನೆಯ ಕ್ಯಾಪ್ಟನ್ ಆಗಿ ಬಿಗ್ ಬಾಸ್ ಘೋಷಣೆ ಮಾಡಿದ್ದು, ಅಲ್ಲಿನ ಸ್ಪರ್ಧಿಗಳೆಲ್ಲ ಶಾಕ್ ಆಗುವಂತೆ ಮಾಡಿದೆ.
ಈಗಾಗಲೇ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಲಾಯರ್ ಕೆ.ಎನ್.ಜಗದೀಶ್ ಅವರನ್ನು ಹಾಗೂ ಜಗದೀಶ್ ಅವರನ್ನು ತಳ್ಳಿದ್ದಕ್ಕೆ ರಂಜಿತ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗಡೆ ಹಾಕಲಾಗಿದೆ. ಇನ್ನು ಇದೇ ಶಾಕ್‌ನಲ್ಲಿದ್ದ ಇಲ್ಲಿನ ಸ್ಪರ್ಧಿಗಳಿಗೆ ಹೊಸ ಸದಸ್ಯರ ಎಂಟ್ರಿ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ.

ಜಿ ಕನ್ನಡದ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಸರಿಗಮಪ ಶೋ ಮೂಲಕ ಜನಮನ್ನಣೆ ಗಳಿಸಿದ ಕುರಿಗಾಹಿ ಹನುಮಂತ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದಾರೆ. ಬಿಗ್ ಬಾಸ್ ಹೊಸ ಅಧ್ಯಾಯದಲ್ಲಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಎಂದು ಹನುಮಂತ ಡ್ಯಾನ್ಸ್ ಮಾಡುತ್ತಲೇ ದೊಡ್ಡನೆಯೊಳಗೆ ಕಾಲಿಟ್ಟಿದ್ದಾರೆ. ಈ ವೇಳೆ ಮನೆ ಮಂದಿ ಫುಲ್ ಖಷ್ ಆಗಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಎಂಟ್ರಿಕೊಡುತ್ತಿದ್ದಂತೆ ಕುರಿಗಾಯಿ ಹನುಮಂತ ಅಲ್ಲಿನ ಸ್ಪರ್ಧಿಗಳನ್ನೆಲ್ಲ ಬಿದ್ದು ಬಿದ್ದು ನಗುವಂತೆ ಕಾಮಿಡಿ ಮಾಡಿದ್ದಾರೆ. ಹನುಮಂತ ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ ಎಂದು ಹೇಳಿದಾಗ, ಊಟ ಮಾಡುತ್ತಿದ್ದೇನೆ ಮತ್ತೆ ಮಾತನಾಡುತ್ತೇನೆ ಅಂತಾ ಅವರು ಹೇಳಿದ್ದು, ಇದಕ್ಕೆ ಮನೆ ಮಂದಿಯಲ್ಲ ನಕ್ಕು ನಲಿದಾಡಿದ್ದಾರೆ.
ಅಷ್ಟೇ ಅಲ್ಲದೆ, ಬಳಿಕ ಹನುಮಂತ ಈ ಮನೆಯ ಕ್ಯಾಪ್ಟನ್ ಆಗಿದ್ದಾರೆ ಎಂದು ಬಿಗ್ ಬಾಸ್ ಘೋಷಣೆ ಮಾಡುತ್ತಿದ್ದಂತೆ ಸಂಭ್ರಮದಲ್ಲಿದ್ದ ಮನೆ ಮಂದಿಯಲ್ಲ ಒಂದು ಕ್ಷಣ ಸೈಲೆಂಟ್ ಆಗಿಬಿಟ್ಟರು. ಮತ್ತೊಂದೆಡೆ ಹನುಮಂತ ಕೂಡ ಆಶ್ಚರ್ಯಗೊಂಡು ತಲೆ ಮೇಲೆ ಕೈಹೊತ್ತುಕೊಂಡ ಘಟನೆ ನಡೆದಿದೆ.
ಹನುಮಂತನಲ್ಲಿದ್ದ ಪ್ರತಿಭೆ ಹೊರಬಿದ್ದಿದ್ದು ಎಲ್ಲಿ?: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಸರಿಗಮಪ ಕನ್ನಡ ಸೀಸನ್ 15ರಲ್ಲಿ ಕಾಣಿಸಿಕೊಂಡ ಪ್ರತಿಭಾವಂತ ಗಾಯಕ ಹನುಮಂತ. ಬಳಿಕ ಸಾಮಾಜಿಕ ಜಲಾತಣದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಂತಹ ಈ ಹನಮಂತ ಮೂಲತಃ ಹಾವೇರಿ ಜಿಲ್ಲಯ ಚಿಲ್ಲೂರ ಬಡ್ನಿ ಎಂಬ ಪುಟ್ಟ ಗ್ರಾಮದವರಾಗಿದ್ದಾ.
ಹನುಮಂತ ಕುರಿಗಾಹಿ ಆಗಿದ್ದು, ಕುರಿಗಳನ್ನು ಮೇಯಿಸುತ್ತಲೇ ಹಾಡು ಹಾಡುತ್ತಿದ್ದ. ಇದನ್ನು ಗುರುತಿಸಿದ ಜೀ ವಾಹಿನಿ ಸರಿಗಮಪ ರಿಯಾಲಿಟಿ ಶೋನಲ್ಲಿ ಹಾಡಲು ಹನುಮಂತನಿಗೆ ವೇದಿಕೆ ಒದಗಿಸಿತು. ಅಲ್ಲಿಂದ ತನ್ನೊಗಿನ ಪ್ರತಿಭಾವಂತ ಗಾಯಕನನ್ನು ಇಡೀ ರಾಜ್ಯಕ್ಕೆ ಸಾರುವಲ್ಲಿ ಹನುಮಂತ ಯಶಸ್ವಿಯಾದರು. ಅಲ್ಲದೆ, ಈ ಶೋನಲ್ಲಿ ರನ್ನರ್ ಅಪ್ ಆದ ಬಳಿಕ ಮತ್ತಷ್ಟು ಜನಮನ್ನಣೆಯನ್ನು ಗಳಿಸುತ್ತಾ ಬಂದಿದ್ದಾರೆ ಹನುಮಂತ.











Click it and Unblock the Notifications