ರಜತ್ ನೆಮ್ಮದಿ ಹಾಳು ಮಾಡ್ತೀನಿ ಎಂದ ಚೈತ್ರಾ ಕುಂದಾಪುರ, ಕಾರಣವೇನು?
ಈ ಬಾರಿಯ ಕನ್ನಡ ಬಿಗ್‌ಬಾಸ್ ಸೀಸನ್-11 ಈಗಷ್ಟೇ ಮುಗಿದಿದೆ. ಈ ಸೀಸನ್‌ನಲ್ಲಿ ಗಲಾಟೆ ಜೋಡಿ ಎಂದೇ ಹೆಸರು ಪಡೆದಿದ್ದವರು ರಜತ್ ಕಿಶನ್ ಹಾಗೂ ಚೈತ್ರಾ ಕುಂದಾಪುರ. ಬಿಗ್ ಬಾಸ್ ಮನೆಯನ್ನು ರಣರಂಗ ಮಾಡಿಕೊಂಡು ಅದೆಷ್ಟೋ ಬಾರಿ ಈ ಇಬ್ಬರೂ ಸ್ಪರ್ಧಿಗಳು ತೊಡೆ ತಟ್ಟಿದ್ದನ್ನ ಬಿಗ್‌ಬಾಸ್ ಪ್ರೇಕ್ಷಕರು ಮರೆತಿಲ್ಲ. ಇದೀಗ ಬಿಗ್‌ಬಾಸ್‌ನಿಂದ ಹೊರಬಂದ ನಂತರವೂ ಇವರಿಬ್ಬರ ಜಗಳ ಮುಂದುವರಿದಿದೆ.
ಬಿಗ್‌ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಜೋರು ದನಿಯಿಂದಲೇ ಫೈರ್‌ಬ್ರ್ಯಾಂಡ್ ಎಂದು ಹೆಸರು ಪಡೆದಿದ್ದರು. ಇತ್ತ ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಜತ್ ಕಿಶನ್ ಕೂಡ ಕಡಿಮೆಯೇನಿರಲಿಲ್ಲ. ಇಬ್ಬರೂ ಮಾತಿಗೆ ಮಾತು ಎನ್ನುತ್ತಾ ತೊಡೆ ತಟ್ಟಿ ಎಲ್ಲರಿಗೂ ಗಾಬರಿ ತರಿಸುತ್ತಿದ್ದರು. ಆದರೆ, ಫಿನಾಲೆಗೂ ಮುನ್ನವೇ ಚೈತ್ರಾ ಕುಂದಾಪುರ ಮನೆಯಿಂದ ಎಲಿಮಿನೇಟ್ ಆಗಿದ್ದರು.

ರಜತ್ ಕೂಡ ಗಲಾಟೆ ಪಾರ್ಟ್ನರ್ ಇಲ್ಲದೆ ಸೈಲೆಂಟ್ ಆಗಿ ಫಿನಾಲೆವರೆಗೂ ತಲುಪಿ ಹೊರಬಂದರು. ಇನ್ನು ಇಬ್ಬರೂ ಬಿಗ್‌ಬಾಸ್‌ನಿಂದ ಹೊರಗಿದ್ದರೂ ಗಲಾಟೆ ಮತ್ತೆ ಶುರುವಾಗುವ ಸಾಧ್ಯತೆ ಇದೆ. ಹೌದು, ಬಿಗ್‌ಬಾಸ್ ಬಳಿಕ ಮತ್ತೊಂದು ವೇದಿಕೆಯಲ್ಲಿ ರಜತ್ ಹಾಗೂ ಚೈತ್ರಾ ಮುಖಾಮುಖಿಯಾಗಿದ್ದಾರೆ.
ಕಲರ್ಸ್ ವಾಹಿನಿಯಲ್ಲಿ ಬರುತ್ತಿರುವ ಮತ್ತೊಂದು ಕಾರ್ಯಕ್ರಮದಲ್ಲಿ ಈ ಜೋಡಿ ಮತ್ತೆ ಗಲಾಟೆ ಮಾಡಲು ಮುಂದಾಗಿದೆ. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ರಜತ್ ಕೂಡ ಸ್ಪರ್ಧಿ ಎನ್ನಲಾಗಿದೆ. ಮತ್ತೊಂದೆಡೆ ಚೈತ್ರಾ ಕುಂದಾಪುರ ಕೂಡ ಇದೇ ವೇದಿಕೆಗೆ ಬಂದು ರಜತ್‌ಗೆ ಶಾಕ್ ಕೊಟ್ಟಿದ್ದಾರೆ.

ವೇದಿಕೆಗೆ ಬರುತ್ತಿದ್ದಂತೆ ರಜತ್‌ಗೆ ಪೇಟ ಹಾಕಿ ಸನ್ಮಾನಿಸುವ ಮೂಲಕ ಚೈತ್ರಾ ಕುಂದಾಪುರ ಅವರು ರಜತ್‌ಗೆ ಪ್ರೀತಿಯ ಬಾಸ್ ಮಾಡುವ ಸಮಸ್ಕಾರಗಳು ಎಂದು ಕಾಲೆಳೆದಿದ್ದಾರೆ. ಇನ್ನು ಹಾರ ಹಾಕಿದ್ದನ್ನು ಕಂಡು ಇದು ಕುರಿಯನ್ನ ಬಲಿ ಕೊಂಡಂಗಿದೆ ಎಂದು ರಜತ್‌ಗೆ ಜೋಕ್ ಮಾಡಿದ್ದಾರೆ. ಈ ಶೋನಲ್ಲಿ ಹೇಗೋ ನೆಮ್ಮದಿಯಾಗಿರ್ತಿದ್ದೆ ಎಂದು ರಜತ್ ಹೇಳಿದ್ದು, ಇದಕ್ಕೆ ನೀನು ನೆಮ್ಮದಿಯಾಗಿ ಇರಬಾರ್ದು ಅಂತಾನೇ ನಾನು ಬಂದಿರೋದು ಎಂದು ಚೈತ್ರಾ ಹೇಳಿದ್ದಾರೆ.
ಇನ್ನು ರಗಡ್ ರಜತ್ ತನ್ನದೇ ಸ್ಟೈಲಲ್ಲಿ ಮತ್ತೆ ತೊಡೆತಟ್ಟಿದ್ದಾರೆ. ದೊಡ್ಡಮನೆಯಲ್ಲೇ ಚೈತ್ರಾನ ಆಟ ಆಡಿಸಿದ್ದೀನಿ, ಇನ್ನು ಇಲ್ಲಿ ಬಿಡ್ತೀನಾ? ಎಂದು ಚಾಲೆಂಜ್ ಮಾಡಿದ್ದಾರೆ. ಅಲ್ಲದೆ ತುಂಟ...ತುಂಟ...ತುಂಟ..ಹಾಡಿಗೆ ಚೈತ್ರಾ ಅವರೊಂದಿಗೆ ಹೆಜ್ಜೆ ಹಾಕುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಕೊನೆಗೆ ಚೈತ್ರಾರನ್ನ ಎತ್ತಿಕೊಂಡ ಕೂಡಲೇ ಕಿರುಚಾಡಿದ್ದಾರೆ.
ಈ ಕಾರ್ಯಕ್ರಮದಲ್ಲೂ ಇವರಿಬ್ಬರ ಫೈಟ್ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಕ್ರಮ ಇಂದಿನಿಂದ ಶುರುವಾಗಲಿದ್ದು, ವಾಹಿನಿ ಇದರ ಪ್ರೋಮೋ ಅನ್ನು ಹಂಚಿಕೊಂಡಿದೆ. ಈ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಬಿಗ್‌ಬಾಸ್‌ನಲ್ಲಿದ್ದ ಹಲವು ಸ್ಪರ್ಧಿಗಳು ಕೂಡ ಭಾಗವಹಿಸುತ್ತಿದ್ದು, ಮತ್ತೆ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಇನ್ನೇನು ಬಿಗ್‌ಬಾಸ್ ಮಗೀತಲ್ಲ ಅಂತಾ ಬೇಸರದಲ್ಲಿದ್ದ ಪ್ರೇಕ್ಷಕರಿಗೆ ಸ್ಪರ್ಧಿಗಳು ಸರ್‌ಪ್ರೈಸ್ ನೀಡಿದ್ದಾರೆ.












Click it and Unblock the Notifications