ನಾನು ನಾಸ್ತಿಕ‌ನ ಮಡದಿ: ಬಿಗ್‌ ಸರ್‌ಪ್ರೈಸ್‌ ಕೊಟ್ಟ ಬಿಗ್‌ಬಾಸ್‌ ಖ್ಯಾತಿಯ ಗೌತಮಿ

ಸತ್ಯ ಸೀರಿಯಲ್‌ ಮೂಲಕ ಕಿರುತೆರೆಯ ರಗಡ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದರು ನಟಿ ಗೌತಮಿ ಜಾಧವ್‌. ಬಳಿಕ ಬಿಗ್‌ಬಾಸ್‌ ಕನ್ನಡ ಸೀಸನ್‌-11ರಲ್ಲೂ ಅಬ್ಬರಿಸಿದ್ದರು. ಬಿಗ್‌ಬಾಸ್‌ ಬಳಿಕ ಅವರು ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗೌತಮಿ ನಾಯಕಿಯಾಗಿ ಯಾವುದೇ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿಲ್ಲ. ರಿಯಾಲಿಟಿ ಶೋ ಬಳಿಕ ಗೌತಮಿ ಅವರಿಗೆ ಅವಕಾಶಗಳು ಕಡಿಮೆ ಆಗಿರಬೇಕು ಎಂದು ಅವರ ಫ್ಯಾನ್ಸ್‌ ಕೂಡ ಮಾತನಾಡಿಕೊಳ್ಳುತ್ತಿದ್ದರು. ಅಷ್ಟರಲ್ಲೇ ಒಂದು ದೊಡ್ಡ ಸರ್‌ಪ್ರೈಸ್‌ ಕೊಟ್ಟೇಬಿಟ್ಟಿದ್ದಾರೆ.

ಹೌದು ಬಿಗ್‌ಬಾಸ್‌ ಬಳಿಕ ಗೌತಮಿ ಅವರು ಕಿರುತೆರೆಯಲ್ಲೇ ಮುಂದುವರಿಯುತ್ತಾರೆ ಎಂಬ ನಿರೀಕ್ಷೆ ಇತ್ತು. ಸತ್ಯ ಸೀರಿಯಲ್‌ನಲ್ಲಿ ಅವರ ಪಾತ್ರ ಪ್ರೇಕ್ಷಕರಿಗೆ ಸಖತ್‌ ಇಷ್ಟವಾಗಿತ್ತು. ಹಾಗಾಗಿ ಶೋ ಮುಗಿದ ಮೇಲೆ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ತಾರೆ ಎಂದು ಕಾದಿದ್ದರು. ಆದರೆ ಗೌತಮಿ ಅವರು ಸೋಷಿಯಲ್‌ ಮೀಡಿಯಾದಲ್ಲೇ ಫುಲ್‌ ಆಕ್ಟೀವ್‌ ಆಗಿದ್ದರು. ಗೌತಮಿ ಮತ್ತೆ ಸೀರಿಯಲ್‌ನಲ್ಲಿ ಮಿಂಚಬೇಕು ಎಂದುಕೊಂಡಿದ್ದವರಿಗೆ ಅದಕ್ಕಿಂತಲೂ ದೊಡ್ಡ ಸರ್‌ಪ್ರೈಸ್‌ ಕೊಡಲು ಮುಂದಾಗಿದ್ದಾರೆ.

Bigg Boss Kannada Fame Gouthami Jadav Big Surprise After Show

ಗೌತಮಿ ಅವರು ಕಿರುತೆರೆಯಿಂದ ಬೆಳ್ಳಿತೆರೆ ಎಂಟ್ರಿ ಕೊಡುತ್ತಿದ್ದು, ಈ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. "ಮಂಗಳಾಪುರಂ" ಎನ್ನುವ ಸಿನಿಮಾದಲ್ಲಿ ಗೌತಮಿ ನಟಿಸುವುದು ಪಕ್ಕಾ ಆಗಿದ್ದು, ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ. ಆಸ್ತಿಕರ ನಾಡಿಗೆ ನಾಸ್ತಿಕ‌ನ ಮಡದಿ "ಸುಕನ್ಯಾ"ಳಾಗಿ ಬರುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ ಗೌತಮಿ. ಈ ಮೂಲಕ ಕಿರುತೆರೆಯಿಂದ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಡುತ್ತಿದ್ದಾರೆ.

"ಮಂಗಳಾಪುರಂ" ಸಿನಿಮಾದಲ್ಲಿ ನಟ ರಿಷಿ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದೇ ಸಿನಿಮಾದಲ್ಲಿ ರಿಷಿ ಜೊತೆ ಕಾಶಿನಾಥ್ ಪುತ್ರ ಅಭಿಮನ್ಯು ಕೂಡ ನಟಿಸುತ್ತಿದ್ದಾರೆ. ರಂಜಿತ್ ರಾವ್ ಸುವರ್ಣ ಅವರು ಮಂಗಳಾಪುರಂ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಮರ್ಡರ್ ಮಿಸ್ಟರಿ ಕಹಾನಿ ಇರಲಿದೆ ಎಂದು ಹೇಳಲಾಗುತ್ತಿದೆ. ಮೂಢನಂಬಿಕೆ, ಪವಾಡ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ. ಇದೇ ಚಿತ್ರತಂಡವನ್ನು ಗೌತಮಿ ಸೇರಿಕೊಂಡಿದ್ದಾರೆ.

ಗೌತಮಿ ಅವರ ಪಾತ್ರದ ಹೆಸರು ಸುಕನ್ಯಾ ಎಂದು ರಿವೀಲ್‌ ಮಾಡಿದ್ದಾರೆ. ಇವರ ಫಸ್ಟ್‌ಲುಕ್‌ ಕೂಡ ಗಮನ ಸೆಳೆಯುತ್ತಿದೆ. ಆಸ್ತಿಕರ ನಾಡಿಗೆ ನಾಸ್ತಿಕ‌ನ ಮಡದಿ "ಸುಕನ್ಯಾ"ಳಾಗಿ ಬರುತ್ತಿದ್ದೇನೆ ಎಂದು ಗೌತಮಿ ತಮ್ಮ ಪಾತ್ರ ಪರಿಚಯ ಮಾಡಿಕೊಂಡಿದ್ದು, ಫಸ್ಟ್‌ಲುಕ್‌ನಲ್ಲೂ ವಿಶೇಷ ಪಾತ್ರ ಎಂಬುದು ಪಕ್ಕಾ ಆಗಿದೆ. ಈ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದ ಗೌತಮಿ, ಬೆಳ್ಳಿತೆರೆಯಲ್ಲೂ ಅಬ್ಬರಿಸಲು ರೆಡಿಯಾಗಿದ್ದಾರೆ. ಈ ಸುದ್ದಿ ತಿಳಿದು ಅವರ ಫ್ಯಾನ್ಸ್‌ ಕೂಡ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+