Bigg Boss Kannada: ಹನುಮಂತನ ಮದುವೆ ನಿರ್ಧರಿಸುವುದು ಅದೊಂದೇ: ದೋಸ್ತ್‌ ಬಗ್ಗೆ ಧನರಾಜ್‌ ಹೇಳಿದ್ದೇನು?

ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಶೋ ಇನ್ನೇನು ಗ್ರ್ಯಾಂಡ್‌ ಫಿನಾಲೆಗೆ ಹತ್ತಿರವಾಗಿದೆ. ಸ್ಪರ್ಧಿಗಳ ನಡುವೆ ಕಪ್‌ ಗೆಲ್ಲಲು ದೊಡ್ಡ ಫೈಟ್‌ ನಡೆಯುತ್ತಿದೆ. ಈ ಪೈಕಿ ಹನುಮಂತು ಕೂಡ ಪ್ರಬಲ ಸ್ಪರ್ಧಿಗಳ ಸಾಲಿನಲ್ಲಿದ್ದಾರೆ. ಇನ್ನು ಈ ಶೋನಲ್ಲಿ ಹನುಮಂತನ ಗೆಲುವಿಗೂ ಅವರ ಮದುವೆಗೂ ನಂಟಿದೆ. ಹನುಮಂತು ನಿಜವಾಗಿ ಕಪ್‌ ಗೆದ್ದಿದ್ದೇ ಆದರೆ ಅವರ ಮದುವೆ ಸರಾಗವಾಗಿ ಆಗಲಿದೆ ಎಂದೂ ಹೇಳಲಾಗುತ್ತಿದೆ.

ಸದ್ಯ ಹನುಮಂತನ ಜೊತೆ ದೋಸ್ತ್‌ ಆಗಿರುವ ಧನರಾಜ್‌ ಅವರು ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದು, ಹನುಮಂತು ಅವರ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಹನುಮಂತುಗೆ ಇನ್ನೂ ಸಣ್ಣ ವಯಸ್ಸು ಮದುವೆ ಎಲ್ಲ ಸುಲಭವಾಗಿ ಆಗುತ್ತೆ ಅನ್ಕೊಂಡಿದಾನೆ. ಕಪ್‌ ತಗೊಂಡು ಹೋಗಿ ಅತ್ತೆ ನಿಮ್ಮ ಮಗಳನ್ನ ಕೊಡಿ ಅಂದ್ರೆ ಯಾವ ಅತ್ತೆ ಮಗಳನ್ನು ಕೊಡ್ತಾರೋ ಗೊತ್ತಿಲ್ಲ ಎಂದು ಧನರಾಜ್‌ ಹೇಳಿದ್ದಾರೆ.

Bigg Boss Kannada Contestant Hanumanthu s Marriage Friend Dhanraj Opens Up

ಹನುಮಂತು ಈಗಾಗಲೇ ಜನರ ಮನಸ್ಸನ್ನು ಗೆದ್ದಿದ್ದಾರೆ. ಹುಡುಗಿಯ ಮನಸ್ಸು ಕೂಡ ಗೆದ್ದಿದ್ದಾರೆ. ಇನ್ನು ಹುಡುಗಿಯ ಅಪ್ಪ-ಅಮ್ಮನ ಮನಸ್ಸನ್ನು ಗೆಲ್ಲಬೇಕಿದೆ ಎಂದು ಹೇಳಿದ್ದಾರೆ. ಮನೆಯವರ ಮನಸ್ಸೂ ಗೆದ್ದರೆ ನಮ್ಮಷ್ಟು ಖುಷಿ ಪಡುವವರು ಇನ್ಯಾರೂ ಇಲ್ಲ. ಏಕೆಂದರೆ ಆ ಜೀವ ಆಕೆಗಾಗಿ ಕಾಯುತ್ತಲೇ ಇದೆ. ಯಾವಾಗ ನೋಡಿದ್ರೂ ಮದುವೆ...ಮದುವೆ...ಮದುವೆ ಅಂತ ಹನುಮಂತು ಮಾತಾಡ್ತಿರ್ತಾರೆ. ಆದರೆ ಹುಡುಗಿ ವಿಚಾರದ ಬಗ್ಗೆ ಮಾತನಾಡು ಅಂದ್ರೆ ಭಯ ಪಡುತ್ತೆ ಎಂದು ಎಂದು ನಗುತ್ತಾ ಹೇಳಿದ್ದಾರೆ.

ಇನ್ನು ಹನುಮಂತು ಅವರನ್ನ ಹುಡುಗಿ ಮನೆಯವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಹನುಮಂತು ಬಿಗ್‌ಬಾಸ್‌ ಗೆದ್ದರೆ ಪ್ರೇಮಿಗಳಿಗೆ ಒಂದು ದೊಡ್ಡ ರೋಲ್‌ ಮಾಡಲ್‌ ಆಗಬಹುದು. ಹನುಮಂತು ತರ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು, ಬಿಗ್‌ಬಾಸ್‌ಗೆ ಹೋಗಿ ಕಪ್‌ ಗೆಲ್ಲಬೇಕು. ಈ ರೀತಿ ಜೀವನದಲ್ಲಿ ಏನಾದ್ರೂ ಸಾಧಿಸಿ ಹುಡುಗಿಯನ್ನು ಕೇಳಲು ಹೋಗಬೇಕು ಎಂದು ಹಲವರು ಪಾಠ ಕಲಿಯಬಹುದು ಎಂದು ಧನರಾಜ್‌ ಹೇಳಿದ್ದಾರೆ.

ನನ್ನ ಗೆಳೆಯ ಹನುಮಂತನ ಮನಸ್ಸು ನಿಷ್ಕಲ್ಮಶ. ಆತ ಮನಸ್ಸಿನಲ್ಲಿ ಏನಿದೆಯೋ ಅದನ್ನು ನೇರವಾಗಿ ಹೇಳುತ್ತಾರೆ. ಅಂತವನಿಗೆ ಒಬ್ಬರು ಇಷ್ಟವಾಗಿದ್ದಾರೆ ಎಂದರೆ ಅವರ ಮನಸ್ಸು ಕೂಡ ಅಷ್ಟೇ ಸ್ವಚ್ಛವಾಗಿರಬಹುದು. ಅಂತಹ ಎರಡು ಮನಸ್ಸುಗಳು ಇಷ್ಟಪಟ್ಟಿದ್ದು, ಅವರ ಪೋಷಕರು ಕೂಡ ಮನಸ್ಸು ಮಾಡಿದ್ರೆ ಇವರು ಜೀವನದಲ್ಲಿ ಖುಷಿಯಾಗಿರುತ್ತಾರೆ ಎಂದು ಹನುಮಂತು ಅವರ ಪ್ರೇಯಸಿಯ ಪೋಷಕರಿಗೆ ಮನವಿ ಮಾಡಿಕೊಂಡಿದ್ದಾರೆ.

Bigg Boss Kannada Contestant Hanumanthu s Marriage Friend Dhanraj Opens Up

ಬಿಗ್‌ಬಾಸ್‌ ಮನೆಯಲ್ಲಿ ಹನುಮಂತು ಅವರ ಮದುವೆಯ ಬಗ್ಗೆ ಚರ್ಚೆ ನಡೆದಿತ್ತು. ತನ್ನ ಮದುವೆ ಹಾಗೂ ಹುಡುಗಿ ಬಗ್ಗೆ ಹನುಮಂತು ಮಾತನಾಡಿದ್ದರು. ಆದರೆ, ಅವರು ಯಾರು, ಅವರ ಹಿನ್ನೆಲೆ ಏನು ಎಂಬುದರ ಬಗ್ಗೆ ಹನುಮಂತು ಎಲ್ಲಿಯೂ ಗುಟ್ಟು ಬಿಟ್ಟುಕೊಡಲಿಲ್ಲ. ಸುದೀಪ್‌ ಕೂಡ ವಾರಾಂತ್ಯದಲ್ಲಿ ಕಪ್‌ ಗೆದ್ದರೆ ಹೆಣ್ಣು ಕೊಟ್ಟು ಮದುವೆ ಮಾಡ್ತಾರಾ? ಎಂದು ಹನುಮಂತನ ಕಾಲೆಳೆದಿದ್ದರು. ಇದಕ್ಕೆ ಹನುಮಂತು ಕೂಡ ನಾಚಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+